ಕಾಂಗ್ರೆಸ್ ಪಕ್ಷದ ಸಿದ್ದಾಪುರ ವಲಯ ಘಟಕದ ಪ್ರಚಾರ ಸಮಿತಿ ಸಭೆ ವಿರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಎಚ್. ಮಥೀನ್ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಾಂಗ್ರೆಸ್ ಪಕ್ಷದ ಸಿದ್ದಾಪುರ ವಲಯ ಘಟಕದ ಪ್ರಚಾರ ಸಮಿತಿ ಸಭೆಯು ವಿರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮಥೀನ್ ಅವರ ನೇತೃತ್ವದಲ್ಲಿ ಸಿದ್ದಾಪುರದಲ್ಲಿ ನಡೆಯಿತು.ಸಭೆಯಲ್ಲಿ ವಲಯ ಮಟ್ಟದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿಗಳ ನೇಮಕಾತಿ ಕುರಿತು ಚರ್ಚೆ ನಡೆಯಿತು. ಜೊತೆಗೆ ಸಿದ್ದಾಪುರ ವಲಯದ ಎಂಟು ಬೂತ್‌ಗಳಿಗೆ ಬೂತ್ ಅಧ್ಯಕ್ಷರನ್ನು ಮತ್ತು ಪ್ರತಿ ಬೂತ್‌ಗೆ ಎಂಟು ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಿತು. ಸಂಘಟನೆಯ ಶಕ್ತಿಕರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ವಿರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿಯ ಸದಸ್ಯರಾದ ಬೇಜೋಯ್ ಎಂ, ಪ್ರಧಾನ ಕಾರ್ಯದರ್ಶಿ ರಚನ್ ಉತ್ತಪ್ಪ, ಸಂಯುಕ್ತ ಕಾರ್ಯದರ್ಶಿ ರವಿ ಎಸ್.ಹೆಚ್. ಮತ್ತು ಆಬಿದಾ ಟಿ.ಬಿ ಸೇರಿದಂತೆ ಸಿದ್ದಾಪುರ ವಲಯ ಅಧ್ಯಕ್ಷ ಪ್ರತೀಶ್ ಡಿ.ಎಸ್., ವಿರಾಜಪೇಟೆ ಬ್ಲಾಕ್ ಗ್ಯಾರಂಟಿ ಸದಸ್ಯರಾದ ಬಶೀರ್ ವಿ.ಕೆ. ಸಂತೋಷ್ ಎಚ್.ಎಸ್. ಸೇರಿದಂತೆ ಸಮಿತಿ ಸದಸ್ಯರು ಈ ಸಂದರ್ಭ ಇದ್ದರು.