ಸಾರಾಂಶ
ಅಡ್ಯಾರು ಪಂಚಾಯ್ತಿಯಲ್ಲಿ ತೆರವಾಗಿದ್ದ ಅಡ್ಯಾರು ವಾರ್ಡ್ ನಂಬರ್ 5ಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗೌರವ್ ಶೆಟ್ಟಿ(590) ಅವರು ಕಾಂಗ್ರೆಸ್ ಬೆಂಬಲಿತ ಯಾದವ ಸಾಲ್ಯಾನ್(438) ಎದುರು 152 ಮತಗಳ ಅಂತರದಿಂದ ಗೆದ್ದಿದ್ದಾರೆ. ತ್ರಿಕೋನ ಸ್ಪರ್ಧೆ ನಡೆದ ಇಲ್ಲಿ ಪಕ್ಷೇತರ ಅಭ್ಯರ್ಥಿ ರಿಚರ್ಡ್ ಅವರಿಗೆ ಕೇವಲ 17 ಮತಗಳು ಬಿದ್ದಿವೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿಗಳ ಉಪಚುನಾವಣೆಯಲ್ಲಿ ಮಂಗಳೂರು ತಾಲೂಕಿನ ಗಂಜಿಮಠ, ನೀರುಮಾರ್ಗ ಮತ್ತು ಅಡ್ಯಾರು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಮೂರು ಮಂದಿ ಅಭ್ಯರ್ಥಿಗಳು ಗೆಲವು ಪಡೆದರೆ, ಮೂಡುಶೆಡ್ಡೆ ಪಂಚಾಯ್ತಿಯ ಎರಡು ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಗಂಜಿಮಠ ಪಂಚಾಯ್ತಿ ಮೊಗರು ಕುಕ್ಕಟ್ಟೆವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುನಿಲ್ ಗಂಜಿಮಠ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಾನಂದ ನಾಯ್ಕ್ ವಿರುದ್ಧ 53 ಮತಗಳ ಅಂತರದಿಂದ ಗೆದ್ದಿದ್ದಾರೆ.ನೀರುಮಾರ್ಗ ಪಂಚಾಯಿತಿಯಲ್ಲಿ ತೆರವಾಗಿದ್ದ ಬೊಂಡಂತಿಲ 2ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ತುಕಾರಾಮ ಶಶಿಕಾಂತ್ ಎದುರು ಕಾಂಗ್ರೆಸ್ ಬೆಂಬಲಿತ ಅಶ್ರಫ್ 78 ಮತಗಳ ಅಂತರದಿಂದ ಗೆದ್ದಿದ್ದಾರೆ. ಮೂಡುಶೆಡ್ಡೆ ಪಂಚಾಯ್ತಿಯ 2 ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ವಿಜಯಲಕ್ಷ್ಮೀ ಅವರು ಶಿವನಗರ ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಕಮಲಾ ಎದುರು ಗೆದ್ದರೆ, ತ್ರಿಕೋನ ಸ್ಪರ್ಧೆ ನಡೆದ ಮೂಡುಶೆಡ್ಡೆ ಶುಭೋದಯ ವಾರ್ಡ್‌ನಲ್ಲಿ ಶಶಿಕಲಾ ಅವರು ಬಿಜೆಪಿ ಬೆಂಬಲಿತ ಕೃಪಾ ವಿನುತಾ ಕುಮಾರಿ ಹಾಗೂ ಪಕ್ಷೇತರ ಅಭ್ಯರ್ಥಿ ಝರಿನಾ ಸ್ಪರ್ಧಿಸಿದ್ದರು.ಅಡ್ಯಾರು ಪಂಚಾಯ್ತಿಯಲ್ಲಿ ತೆರವಾಗಿದ್ದ ಅಡ್ಯಾರು ವಾರ್ಡ್ ನಂಬರ್ 5ಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗೌರವ್ ಶೆಟ್ಟಿ(590) ಅವರು ಕಾಂಗ್ರೆಸ್ ಬೆಂಬಲಿತ ಯಾದವ ಸಾಲ್ಯಾನ್(438) ಎದುರು 152 ಮತಗಳ ಅಂತರದಿಂದ ಗೆದ್ದಿದ್ದಾರೆ. ತ್ರಿಕೋನ ಸ್ಪರ್ಧೆ ನಡೆದ ಇಲ್ಲಿ ಪಕ್ಷೇತರ ಅಭ್ಯರ್ಥಿ ರಿಚರ್ಡ್ ಅವರಿಗೆ ಕೇವಲ 17 ಮತಗಳು ಬಿದ್ದಿವೆ.