ಸಾರಾಂಶ
ಹೊಸ ತಲೆಮಾರಿನ ಯುವಕರಿಗೆ ನಾವು ಗಾಂಧಿಜೀಯವರ ಚಿಂತನೆಗಳನ್ನು ತಲುಪಿಸಬೇಕಾಗಿದೆ. ಸನ್ಮಾರ್ಗದ ಮೂಲಕವೇ ಮಹಾತ್ಮರಾದ ಗಾಂಧಿಜೀಯವರ ತತ್ವಗಳ ತಳಹದಿ ಮೇಲೆ ಜನಸೇವೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಜನ್ಮದಿನ ಅಂಗವಾಗಿ ಜನರ ಬಳಿಗೆ ಅವರ ಚಿಂತನೆಗಳನ್ನು ತಲುಪಿಸುವ ಸಲುವಾಗಿ ಇಂದು ದೇಶವ್ಯಾಪಿ ವಿಶೇಷವಾಗಿ ಗಾಂಧಿ ಸ್ಮರಣೆ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹಾತ್ಮ ಗಾಂಧೀಜಿಯವರ ತತ್ವ ಮತ್ತು ಚಿಂತನೆಗಳ ತಳಹದಿ ಮೇಲೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ತಿಳಿಸಿದರು.ಪಟ್ಟಣದ ಹೇಮಾವತಿ ಬಡಾವಣೆಯ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಗಾಂಧಿ ಕೇವಲ ವ್ಯಕ್ತಿಯಲ್ಲ. ಅವರೊಂದು ಜಾಗತಿಕ ಶಕ್ತಿ. ಭಾರತದ ಅಂತಸತ್ವ ಗಾಂಧಿಯವರ ಚಿಂತನೆಗಳಲ್ಲಿ ಅಡಗಿದೆ. ಗಾಂಧೀಜಿ ಹೊರತು ಪಡಿಸಿ ಆಧುನಿಕ ಭಾರತದ ಪರಿಕಲ್ಪನೆ ಅಸಾಧ್ಯ ಎಂದರು.
ಸತ್ಯ ಮಾರ್ಗದಲ್ಲಿ ನಡೆಯುತ್ತಲೇ ಭಾರತೀಯರಿಗೆ ಬದುಕಿನ ಮಾರ್ಗದರ್ಶಿಯಾಗಿ ನಿಂತ ಗಾಂಧಿ ಶಾಂತಿ ದೂತರಾಗಿದ್ದು ಅಹಿಂಸೆ, ಶಾಂತಿ, ಸಹಬಾಳ್ವೆ ಮತ್ತು ಸರ್ವಧರ್ಮ ಸಮನ್ವಯತೆಯ ಸಂಕೇತವಾಗಿ ನಮ್ಮ ಮುಂದಿದ್ದಾರೆ ಎಂದರು.ಹೊಸ ತಲೆಮಾರಿನ ಯುವಕರಿಗೆ ನಾವು ಗಾಂಧಿಜೀಯವರ ಚಿಂತನೆಗಳನ್ನು ತಲುಪಿಸಬೇಕಾಗಿದೆ. ಸನ್ಮಾರ್ಗದ ಮೂಲಕವೇ ಮಹಾತ್ಮರಾದ ಗಾಂಧಿಜೀಯವರ ತತ್ವಗಳ ತಳಹದಿ ಮೇಲೆ ಜನಸೇವೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಜನ್ಮದಿನ ಅಂಗವಾಗಿ ಜನರ ಬಳಿಗೆ ಅವರ ಚಿಂತನೆಗಳನ್ನು ತಲುಪಿಸುವ ಸಲುವಾಗಿ ಇಂದು ದೇಶವ್ಯಾಪಿ ವಿಶೇಷವಾಗಿ ಗಾಂಧಿ ಸ್ಮರಣೆ ಮಾಡುತ್ತಿದೆ ಎಂದರು.
ಈ ವೇಳೆ ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಬಿ.ಚೇತನಕುಮಾರ್, ಪುರಸಭೆ ಸದಸ್ಯ ಡಿ.ಪ್ರೇಂಕುಮಾರ್, ಮುಖಂಡರಾದ ಕೆ.ಜೆ.ಬಿ ಪ್ರಕಾಶ್, ಬಸ್ತಿ ರಂಗಪ್ಪ, ರಾಜಯ್ಯ, ಅಗ್ರಹಾರಬಾಚಹಳ್ಳಿ ಕುಮಾರ್, ಅಗ್ರಹಾರ ಕುಮಾರ್, ಉಮೇಶ್, ಪ್ರವೀಣ್, ಇಲ್ಯಾಸ್ ಅಹಮದ್, ಇಲ್ಯಾಸ್ ಪಾಷ, ಫಯಾಜ್ ಅಹಮದ್, ಸೈಯದ್ ಜಮೀಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಿವಮ್ಮ ಸೇರಿದಂತೆ ಹಲವರಿದ್ದರು.