ಕಾಂಗ್ರೆಸ್‌ ಕಾರ್ಯಕರ್ತನ ಕುಟುಂಬಕ್ಕೆ ಐದು ಲಕ್ಷ ಪರಿಹಾರ ವಿತರಣೆ

| Published : Mar 11 2025, 12:47 AM IST

ಕಾಂಗ್ರೆಸ್‌ ಕಾರ್ಯಕರ್ತನ ಕುಟುಂಬಕ್ಕೆ ಐದು ಲಕ್ಷ ಪರಿಹಾರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

, ಬೆಳಗಾವಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್‌ ಆಯೋಜಿಸಿದ್ದ ಗಾಂಧಿ ಭಾರತ ಸಮಾವೇಶದಲ್ಲಿ ಬಸಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು.

ರಾಣಿಬೆನ್ನೂರು: ಬೆಳಗಾವಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಆಯೋಜಿಸಿದ್ದ ಗಾಂಧಿ ಭಾರತ ಸಮಾವೇಶದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮೃತಪಟ್ಟ ತಾಲೂಕಿನ ನದಿಹರಳಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಬಸಪ್ಪ ಕೆಂಚಪ್ಪ ಪಾಮೇನಹಳ್ಳಿ(58) ಕುಟುಂಬದ ಸದಸ್ಯರಿಗೆ ಕೆಪಿಸಿಸಿ ವತಿಯಿಂದ ನೀಡಲಾದ ಐದು ಲಕ್ಷ ಪರಿಹಾರ ಚೆಕ್‌ನ್ನು ಶಾಸಕ ಪ್ರಕಾಶ ಕೋಳಿವಾಡ ವಿತರಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್‌ ಆಯೋಜಿಸಿದ್ದ ಗಾಂಧಿ ಭಾರತ ಸಮಾವೇಶದಲ್ಲಿ ಬಸಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಗಮನಕ್ಕೆ ತಂದ ಕೂಡಲೇ ಸ್ಥಳದಲ್ಲಿಯೇ ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಯಾವುದೇ ಪಕ್ಷದಲ್ಲಿ ಈ ರೀತಿ ಕಾರ್ಯಕರ್ತರಿಗೆ ಪರಿಹಾರ ನೀಡಲ್ಲ. ನಮ್ಮ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಜತೆಗೆ ಸದಾ ನಿಲ್ಲುತ್ತೇವೆಂದು ತೋರಿಸಿಕೊಟ್ಟಿದೆ. ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಸ್ಥರು ಆರ್ಥಿಕವಾಗಿ ಬಡವರಾಗಿದ್ದು, ಅವರ ಕುಟುಂಬಕ್ಕೆ ಪಕ್ಷದ ವತಿಯಿಂದ ಸಹಾಯಧನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸರ್ಕಾರದ ಯೋಜನೆಯಿಂದ ಸಹಾಯ ಮಾಡಲಾಗುವುದು ಎಂದರು.ಬಸವನಗೌಡ ಮರದ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ರವೀಂದ್ರಗೌಡ ಪಾಟೀಲ, ತಿರುಪತಿ ಅಜ್ಜನವರ, ಇಕ್ಬಾಲ್‌ಸಾಬ ರಾಣೇಬೆನೂರು, ಸಣ್ಣತಮ್ಮಪ್ಪ ಬಾರ್ಕಿ, ಚಂದ್ರಣ್ಣ ಬೇಡರ ಮತ್ತಿತರರಿದ್ದರು.ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಮಾಡಲಿ

ಬ್ಯಾಡಗಿ: ಬೋಧನೆಯನ್ನು ಅರ್ಥೈಸಿಕೊಂಡ ವ್ಯಕ್ತಿಯನ್ನು ಪ್ರಪಂಚಕ್ಕೆ ಕೊಡಬೇಕೆಂಬ ಹಂಬಲವನ್ನು ಪ್ರತಿಯೊಬ್ಬ ಶಿಕ್ಷಕರು ಹೊಂದಿರುತ್ತಾರೆ. ವಿದ್ಯಾರ್ಥಿಗಳೊಂದಿಗಿನ ಇಂತಹ ಸಕಾರಾತ್ಮಕ ಸಂಬಂಧಗಳು ಮಕ್ಕಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಸ್. ಮಂಜುನಾಥಾಚಾರಿ ಅಭಿಪ್ರಾಯಪಟ್ಟರು.ಶಿಡೇನೂರಿನ ಗಡಿಗೋಳ ಬಸಪ್ಪ ದ್ಯಾಮಪ್ಪ ಪ್ರೌಢಶಾಲೆಯ 1999- 2000ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಸಾಮರ್ಥ್ಯ ಸಮಾಜಕ್ಕೆ ಪರಿಚಯಿಸುವುದರೊಂದಿಗೆ ಪ್ರಪಂಚದ ಹಂಬಲವನ್ನು ನೀಗಿಸುವ ಶಕ್ತಿ ಶಿಕ್ಷಕರಲ್ಲಿದೆ. ಹೀಗಾಗಿ ನ್ಯಾಯೋಚಿತ, ಪ್ರಾಮಾಣಿಕ, ವಿಶ್ವಾಸಾರ್ಹ, ಮುಕ್ತ ಬೆಂಬಲ ನೀಡುವಂತಹ ಶಿಕ್ಷಕರು ಪ್ರಸ್ತುತ ದಿನಗಳಲ್ಲಿ ದೇಶಕ್ಕೆ ಅವಶ್ಯವಿದೆ ಎಂದರು.ನಿವೃತ್ತ ಶಿಕ್ಷಕ ಎಸ್.ಡಿ. ಮೂಲಿಮನಿ ಮಾತನಾಡಿ, ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ವಿದ್ಯಾದಾನ ಮಾಡಿ ತನ್ಮೂಲಕ ಬದುಕಿನಲ್ಲಿ ಬದಲಾವಣೆ ತಂದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಶಿಕ್ಷಕರ ಹೆಸರು ಚಿರಕಾಲವೂ ಹಸಿರಾಗಿರುತ್ತದೆಯೋ ಅಂಥವರನ್ನು ಅತ್ಯುತ್ತಮ ಶಿಕ್ಷಕರೆಂದು ಪರಿಭಾವಿಸಬಹುದು ಎಂದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಜಿ. ಕೂಡಲ, ಎಂ.ಎಂ. ಸಿರಿಗೆರೆ, ಕೆ. ಮಲ್ಲಿಕಾಜುನ, ಚನ್ನಬಸಪ್ಪ ಲಮಾಣಿ, ಟಿ.ಪಿ. ಕಬ್ಬೂರ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಶಿಕ್ಷಕರಾದ ಡಿ.ಜಿ. ಕಲ್ಲಿಂಗಪ್ಪ, ಎಂ. ಹೊನ್ನಪ್ಪ, ಎ.ಬಿ. ಬಾಳಿಕಾಯಿ, ಶಶಿಧರ ನಾಡಿಗೇರ, ರುದ್ರಪ್ಪ ಗಡಿಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಪರಮೇಶಗೌಡ ತೆವರಿ, ಈರಣ್ಣ ಮಲ್ಲಾಡದ, ಎಂ.ಎಫ್. ಕರಿಯಣ್ಣನವರ(ಮಾಸಣಗಿ) ಸೇರಿದಂತೆ ಶಿಡೇನೂರ ಗ್ರಾಮದ ಗುರು- ಹಿರಿಯರು, ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಂಕರ ಬಣಕಾರ ಕಾರ್ಯಕ್ರಮ ನಿರ್ವಹಿಸಿದರು.