ಚಿಕ್ಕಮಗಳೂರು ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಟ್ರಬಲ್ ಗೆ ಕೇಂದ್ರ ಸರ್ಕಾರದ ಅಸಮರ್ಪಕ ಆಡಳಿತವೇ ನೇರ ಕಾರಣ ಎಂದು ಆರೋಪಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಅಜಾದ್ ಪಾರ್ಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಗ್ಯಾಸ್ ಟ್ರಬಲ್ ಗೆ ಕೇಂದ್ರ ಸರ್ಕಾರದ ಅಸಮರ್ಪಕ ಆಡಳಿತವೇ ಕಾರಣ ಕಾರ್ಯ ಕರ್ತರ। ನಗರದ ಅಜಾದ್ ಪಾರ್ಕ್ ಸರ್ಕಲ್‌ನಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶಾದ್ಯಂತ ಗ್ಯಾಸ್ ಸಿಲಿಂಡರ್ ಟ್ರಬಲ್ ಗೆ ಕೇಂದ್ರ ಸರ್ಕಾರದ ಅಸಮರ್ಪಕ ಆಡಳಿತವೇ ನೇರ ಕಾರಣ ಎಂದು ಆರೋಪಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಅಜಾದ್ ಪಾರ್ಕ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಖಾಲಿ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಬಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆಯಲ್ಲಿ ಖಾಲಿ ಸಿಲಿಂಡರ್ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬಳಿಕ ರಸ್ತೆ ಮಧ್ಯದಲ್ಲಿಯೇ ಸೌಧೆ ಒಲೆ ಹಚ್ಚಿಸಿ ಟೀ- ಕಾಫಿ ತಯಾರಿಸಿ ಕೇಂದ್ರದ ಆಡಳಿತಕ್ಕೆ ಛೀಮಾರಿ ಹಾಕಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 12ವರ್ಷಗಳಿಂದ ನಿರಂತರವಾಗಿ ಕೊಟ್ಟ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಹಿಂದೆ ಬ್ಯಾಂಕ್ ಮುಂದೆ ಗ್ರಾಹಕರು ಕ್ಯೂ ನಿಲ್ಲಿಸಿದ್ದ ಸರ್ಕಾರ ಇದೀಗ ಗ್ಯಾಸ್ ಸಿಲಿಂಡರ್ ಪಡೆಯಲು ಕ್ಯೂ ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ಯಾಸ್ ಸಿಲಿಂಡರ್ ಪೂರೈಕೆ ಇಲ್ಲದೇ ಹೊಟೇಲ್‌ಗಳು ಮುಚ್ಚುತ್ತಿವೆ. ಸಣ್ಣಪುಟ್ಟ ವ್ಯಾಪಾರಿಗಳು ಟೆಂಟ್ ಬಂದ್ ಮಾಡಿದ್ದಾರೆ. ಕೇವಲ ಹೋಟೆಲ್‌ಗಳಿಗೆ ಮಾತ್ರವಲ್ಲ. ಶಾಲೆ, ಹಾಸ್ಟಲ್ ಇಂದಿರಾ ಕ್ಯಾಂಟಿನ್ ಗಳಿಗೂ ಸಮಸ್ಯೆ ಎದುರಾಗಿದೆ. ದೇಶದ ರಾಜ ತಾಂತ್ರಿಕತೆ ಹದಗೆಟ್ಟಿದ್ದು, ವಿದೇಶಿ ಪಾಲಿಸಿಗಳನ್ನು ಟ್ರಂಪ್ ಮಾತು ಕೇಳುವ ಪರಿಸ್ಥಿತಿಗೆ ದೇಶವನ್ನು ತರಲಾಗಿದೆ. ಇದರ ಪರಿಣಾಮ ಇಂದು ಜನಸಾಮಾನ್ಯರು ಸಮಸ್ಯೆ ಎದುರಿಸಬೇಕಾಗಿದೆ ಎಂದು ದೂರಿದರು.
ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ದೇಶದ ನಾಗರಿಕರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ತಾಳಕ್ಕೆ ಮೋದಿ ಕುಣಿಯುತ್ತಿದ್ದಾರೆ. ದೇಶದ ಜನರನ್ನು ಅಧೋಗತಿಯತ್ತ ತಳ್ಳಿದ್ದಾರೆ ಎಂದು ಟೀಕಿಸಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಗ್ಯಾಸ್, ಪೆಟ್ರೋಲ್, ಡಿಸೆಲ್ ಮತ್ತಿತರೆ ಸೌಲಭ್ಯ ನೀಡುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ. ಆದರೆ, ಯುದ್ದದ ನೆಪದಲ್ಲಿ ಈಗ ಅಡುಗೆ ಅನಿಲವೇ ಸಿಗದಂತಾಗಿದೆ. ನಮ್ಮ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿರುವ ಎನ್‌ಡಿಎ ಸರಕಾರವನ್ನುಕಿತ್ತೆಸೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ಶಿವಾನಂದ ಸ್ವಾಮಿ, ಪ್ರವೀಣ್ ಬೆಟ್ಟಗೆರೆ, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ತನೋಜ್ ನಾಯ್ಡು. ಸಿಲ್ವಸ್ಟರ್, ಎಂ.ಡಿ.ರಮೇಶ್, ಪ್ರಸಾದ್‌ಅಮೀನ್, ಹಿರೇಗೌಜ ಶಿವಕುಮಾರ್, ಸಂತೋಷ್ ಲಕ್ಯಾ,ಶ್ರೀಕಾಂತ್, ಪ್ರಕಾಶ್‌ರೈ, ರೂಬೆನ್ ಮೊಸಸ್, ಲಾಕೇಶ್, ಪರಮೇಶ್‌ರಾಜ್ ಅರಸ್, ರಾಜು, ಮಂಜುಳಾ ಲಕ್ಷ್ಮಣ್ , ಕುಸುಮ ಭರತ್ ಇದ್ದರು.