ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

| Published : Dec 21 2024, 01:17 AM IST

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ, ಅಂಬೇಡ್ಕರ್ ಹೆಸರು ಹೇಳುವದು ಪ್ಯಾಶನ್ ಆಗಿದೆ ಎಂಬ ಪದ ಬಳಸಿರುವದನ್ನು ಖಂಡಿಸುತ್ತೇವೆ

ಲಕ್ಷ್ಮೇಶ್ವರ: ಬೆಳಗಾವಿಯ ಸುವರ್ಣಸೌಧದಲ್ಲಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕೆಟ್ಟ ಶಬ್ದ ಬಳಸುವ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದು, ಅದರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕೂಡಲೆ ಇಬ್ಬರನ್ನು ಬಿಜೆಪಿ ಹುದ್ದೆಯಿಂದ ವಜಾ ಮಾಡಬೇಕು ಎಂದು ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಣ್ಣ ಬೆಟಗೇರಿ ಆಗ್ರಹಿಸಿದ್ದಾರೆ.

ಅವರು ಪಟ್ಟಣದ ಶಿಗ್ಲಿ ನಾಕಾ ಬಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಚಿವ ಸಿ.ಟಿ.ರವಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ರಾಜಿನಾಮೆಗೆ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಬಗ್ಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ, ಅಂಬೇಡ್ಕರ್ ಹೆಸರು ಹೇಳುವದು ಪ್ಯಾಶನ್ ಆಗಿದೆ ಎಂಬ ಪದ ಬಳಸಿರುವದನ್ನು ಖಂಡಿಸುತ್ತೇವೆ. ಅಂಬೇಡ್ಕರ್ ಅವರನ್ನು ಇಡಿ ಭಾರತದ ಜನತೆ ಪೂಜ್ಯ ಭಾವನೆಯಿಂದ ನೋಡುತ್ತಿದ್ದು, ದೇಶದ ಸಂವಿಧಾನ ರಚಿಸಿದ ಮಹಾಪುರುಷನ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ಬಿಜೆಪಿಯ ಅಮಿತ್ ಶಾ ತಮ್ಮತನ ಪ್ರದರ್ಶಿಸಿದ್ದಾರೆ. ಅಲ್ಲದೆ ಬೆಳಗಾವಿಯ ವಿಧಾನ ಪರಿಷತ್ತಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಳಸಿರುವ ಪದ ಇಡಿ ಮಹಿಳಾ ಕುಲಕ್ಕೆ ಅಪಮಾನ ಮಾಡುವಂತಾಗಿದ್ದು, ಕೂಡಲೇ ಅವರನ್ನು ಪರಿಷತ್ ಸ್ಥಾನದಿಂದ ಕೆಳಗಿಳಿಸಬೇಕು. ಕೇಂದ್ರ ಸಚಿವ ಅಮಿತ್ ಶಾ ಅವರ ರಾಜೀನಾಮೆ ಪ್ರಧಾನಿಗಳು ಪಡೆಯಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪದ್ಮರಾಜ ಪಾಟೀಲ, ವೀರೇಂದ್ರ ಪಾಟೀಲ ಕಾಂಗ್ರೆಸ ನಗರ ಅಧ್ಯಕ್ಷ ಅಮರೀಶ ತೆಂಬದಮನಿ ಮುಂತಾದವರು ಮಾತನಾಡಿ, ಅಮಿತ್ ಶಾ ಹಾಗೂ ಸಿ.ಟಿ.ರವಿ ನಡೆ ಖಂಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ನೀಲಪ್ಪ ಶೇರಸೂರಿ, ಬಿ.ಎಂ.ಮುಂದಿನಮನಿ, ಪುರಸಭೆ ಸದಸ್ಯರಾದ ಬಸವರಾಜ ಓದುನವರ, ರಮೇಶ ಗಡದವರ ಫಿರ್ದೋಷ ಆಡೂರ, ಸಾಹೇಬಜಾನ ಹವಾಲ್ದಾರ, ಸುಲೇಮಾನಸಾಬ್ ಕಣಕೆ, ನೀಲಪ್ಪ ಪೂಜಾರ, ಮಹಾಂತೇಶ ಗುಡಿಸಲಮನಿ, ಕಿರಣ ನವಲೆ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಪೂಜಾರ, ರಾಮಣ್ಣ ಅಡಗಿಮನಿ, ದಾದಾಪೀರ ಮುಚ್ಚಾಲೆ, ಪರಮೇಶ ಲಮಾಣಿ, ಯಲ್ಲಪ್ಪ ಹಂಜಗಿ, ಮುದಕಣ್ಣ ಗದ್ದಿ, ಮಂಜುನಾಥ ಶೆರಸೂರಿ, ಶೇಕಣ್ಣ ಹುರಕಡ್ಲಿ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪುರ, ಅಪ್ಜಲ್ ರಿತ್ತಿ, ವೀರೇಂದ್ರ ಭಜಂತ್ರಿ ಸೇರಿದಂತೆ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಇದ್ದರು. ನಂತರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.