ಚಿಕ್ಕಮಗಳೂರುಸಮಾಜದ ಎಲ್ಲಾ ವರ್ಗದ ಜನರನ್ನು ಜಾತ್ಯಾತೀತವಾಗಿ ಸಮನಾಗಿ ಕಂಡು ರಾಜಕೀಯದಲ್ಲಿ ಸರ್ವರಿಗೂ ಅವಕಾಶ ಕಲ್ಪಿಸಿಕೊಂಡು ಬರುತ್ತಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ದ್ವೇಷ ಮತ್ತು ಅಸೂಯೆಯಿಂದ ಕಾಂಗ್ರೆಸ್ ಮುಖಂಡರು ವಾಸ್ತವ ಸ್ಥಿತಿ ಅರಿಯದೆ ಹೇಳಿಕೆ ನೀಡುತ್ತಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಖಂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಮಾಜದ ಎಲ್ಲಾ ವರ್ಗದ ಜನರನ್ನು ಜಾತ್ಯಾತೀತವಾಗಿ ಸಮನಾಗಿ ಕಂಡು ರಾಜಕೀಯದಲ್ಲಿ ಸರ್ವರಿಗೂ ಅವಕಾಶ ಕಲ್ಪಿಸಿಕೊಂಡು ಬರುತ್ತಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ದ್ವೇಷ ಮತ್ತು ಅಸೂಯೆಯಿಂದ ಕಾಂಗ್ರೆಸ್ ಮುಖಂಡರು ವಾಸ್ತವ ಸ್ಥಿತಿ ಅರಿಯದೆ ಹೇಳಿಕೆ ನೀಡುತ್ತಿರುವುದನ್ನು ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಖಂಡಿಸಿದ್ದಾರೆ.ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಒಂದು ಪಕ್ಷ, ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳ ಸ್ವತ್ತಲ್ಲ. ಸರ್ವಜನರ ಹಿತ ಒಳಗೊಂಡಿರುವ ಜಗತ್ತಿನಲ್ಲೆ ಉತ್ಕೃಷ್ಟ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಬಾಬಾ ಸಾಹೇಬರನ್ನು ಗುತ್ತಿಗೆ ಪಡೆದವರಂತೆ ಹೇಳಿಕೆ ಕೊಡುತ್ತಿರುವುದು ಗಮನಿಸಿದಾಗ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಸಿ.ಟಿ ರವಿ ಅಂಬೇಡ್ಕರ್ ರವರ 135ನೇ ಜಯಂತಿ ಸಂದರ್ಭದಲ್ಲಿ ಮನೆಗಳಲ್ಲಿ ಆಚರಿಸಲಾಗಿದೆ ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ದಲಿತರನ್ನು ಎತ್ತಿಕಟ್ಟಿ ಇಂತಹ ಮಹಾನ್ ಪುರುಷರ ಜಯಂತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಪ.ಜಾ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗದವರಿಗೆ ಜಿಲ್ಲಾ, ತಾಲೂಕು ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆ ಗಳಲ್ಲಿ ಮೀಸಲಾಗಿದ್ದ ಸ್ಥಾನಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಎಪಿಎಂಸಿಗೆ ಕೆ.ಪಿ ವೆಂಕಟೇಶ್, ನಗರಸಭೆಗೆ ಮುತ್ತಯ್ಯ ರವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಸ್ಮರಿಸಿದರು.
ಸಹಪಂಕ್ತಿ ಭೋಜನ, ಅಂಬೇಡ್ಕರ್ ಜಯಂತಿ ಮೂಲಕ ಜಾತಿರಹಿತ ಸಮಾಜ ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ, ಜಿಲ್ಲೆಯಾದ್ಯಂತ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿಕೊಂಡು ಅಂಬೇಡ್ಕರ್ ಜಯಂತಿ ಆಚರಿಸಿದ್ದಾರೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸದೆ ಟೀಕಿಸಲು ಮುಂದಾಗಿರುವ ಕಾಂಗ್ರೆಸ್ ಕೊಳಕು ಮನಸ್ಥಿತಿ ಅರಿವಿಗೆ ಬರುತ್ತದೆ ಎಂದು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎಲ್ ಲಕ್ಷ್ಮಣ ನಾಯಕ್, ಬಿಜೆಪಿ ಹಿರಿಯ ಮುಖಂಡರಾದ ಡಾ. ಎಸ್.ಆರ್ ಶಿವುಪ್ರಸಾದ್, ಕೊಲ್ಲಾ ಭೋವಿ, ನವೀನ್ ಕುಮಾರ್ ಇದ್ದರು.