ಸಾರಾಂಶ
ಕೆಜಿ ಹಳ್ಳಿ ಐಟಿಐ ಕಾಲೇಜು ಬಳಿ ಟ್ಯಾಕ್ ನಿರ್ಮಾಣಕ್ಕೆ ಸ್ಥಳವು ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಟೇಕಲ್ ಕಾಲೇಜು ಬಳಿಯೇ ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಂದುವರಿಸಲು ಶಾಸಕರು ಒಪ್ಪಿಗೆ ನೀಡಿದರು.
ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್ ಕಾಲೇಜು ಸಮೀಪದಲ್ಲಿ ಕೆ.ಜಿ.ಹಳ್ಳಿ ಗ್ರಾಮಕ್ಕೆ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆಯ ಓವರ್ ಹೆಡ್‌ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಂದುವರಿಸಲು ಶಾಸಕ ಕೆ.ವೈ.ನಂಜೇಗೌಡ ಸಮ್ಮತಿಸಿದರು.ಕಾಲೇಜು ಬಳಿ ನಿರ್ಮಿಸುತ್ತಿರುವ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಶೇ. 40ರಷ್ಟು ಪೂರ್ಣಗೊಂಡಿತ್ತು. ಆದರೆ ಈ ಜಾಗ ಅಷ್ಟೊಂದು ಸಮರ್ಪಕವಾಗಿಲ್ಲ ಎಂಬ ಕಾರಣ ನೀಡಿ ಶಾಸಕರು ಓವರ್‌ಹೆಡ್ ಟ್ಯಾಂಕ್ ಅನ್ನು ಐಟಿಐ ಕಾಲೇಜು ಬಳಿ ನಿರ್ಮಿಸಲು ಶಾಸಕರು ಸೂಚಿಸಿದ್ದರು.
ಕಾಮಗಾರಿ ಮುಂದುವರಿಕೆಆದರೆ ಐಟಿಐ ಕಾಲೇಜು ಬಳಿ ಟ್ಯಾಕ್ ನಿರ್ಮಾಣಕ್ಕೆ ಸ್ಥಳವು ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಟೇಕಲ್ ಕಾಲೇಜು ಬಳಿಯೇ ಟ್ಯಾಂಕ್ ನಿರ್ಮಾಣ ಕಾಮಗಾರಿ ಮುಂದುವರಿಸಲು ಶಾಸಕರು ಒಪ್ಪಿಗೆ ನೀಡಿದರು.
ಕೆ.ಜಿ.ಹಳ್ಳಿ ಗ್ರಾಮಕ್ಕೆ ಪೈಪ್‌ಲೈನ್, ಕೊಳವೆ ಬಾವಿ, ಓವರ್‌ಹೆಡ್ ಟ್ಯಾಂಕ್, ಜೆಜೆಎಂ ಕಾಮಗಾರಿಗೆ ಒಂದು ಕೋಟಿ ರೂಪಾಯಿ ಅಂದಾಜು ವೆಚ್ಚ ಮಾಡಲಾಗುತ್ತಿದೆ. ಆದಷ್ಟು ಬೇಗ ಗ್ರಾಮದಲ್ಲಿ ಮನೆ ಮನೆ ನೀರು ಕೊಡಲಾಗುತ್ತದೆ ಎಂದರು.ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ
ಮಾಲೂರು ತಾಲ್ಲೂಕು ಕುಡಿಯುವ ನೀರು ಗ್ರಾಮ ನೈರ್ಮಲ್ಯದ ಕಾರ್ಯಪಾಲ ಅಭಿಯಂತರರು ಜಬೀವುಲ್ಲಾ ಮಾತನಾಡಿ ಮಾಲೂರು ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್.ಆರ್.ಯಲ್ಲಪ್ಪನವರು ಮಾತನಾಡಿ, ಶಾಸಕರ ಸಹಕಾರದಿಂದ ಕೆ.ಜಿ.ಹಳ್ಳಿ ಗ್ರಾಮವನ್ನು ಮಾದರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಕಟ್ಟಡದಲ್ಲಿ ಬರುವಂತೆ ಮಾಡಬೇಕೆಂಬ ಶಾಸಕರ ಅಭಿಲಾಸೆ ಈಡೇರಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸತೀಶ್‌ರಾಜಣ್ಣ, ಗುತ್ತಿಗೆದಾರ ಸುಬ್ಬಾರೆಡ್ಡಿ, ಸುಧಾಕರ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.