ಹುಲಿ ಸೇರಿ ಕಾಡು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿದ್ದರಾಮ ಪೂಜಾರಿ

| Published : Jul 30 2025, 12:45 AM IST

ಹುಲಿ ಸೇರಿ ಕಾಡು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿದ್ದರಾಮ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಲ- ಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಮರವನ್ನು ಬೆಳೆಸಿದರೆ ಉತ್ತಮ ಆಮ್ಲಜನಕ ದೊರಕುತ್ತದೆ. ಆದ್ದರಿಂದ ನಮ್ಮ ಆರೋಗ್ಯವು ಸಮೃದ್ಧಿಯಾಗಲು ಸಹಕಾರಿಯಾಗಲಿದೆ. ಇದರ ಜೊತೆಗೆ ಕಾಡುಪ್ರಾಣಿಗಳ ಸಂರಕ್ಷಣೆ ಬಹಳ ಮುಖ್ಯ.

ಹಲಗೂರು: ಸಮೀಪದ ಹಲಗನದೊಡ್ಡಿ ಗ್ರಾಮದ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಹುಲಿಗಳ ದಿನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಾಡಿನ ಸಂರಕ್ಷಣೆ ಹಾಗೂ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಗಸ್ತು ಅರಣ್ಯಪಾಲಕ ಸಿದ್ದರಾಮ ಪೂಜಾರಿ ಮಾತನಾಡಿ, ಕಾಡು ಸಮೃದ್ಧಿಯಾಗಬೇಕಾದರೆ ಅಲ್ಲಿ ಹುಲಿಗಳು ಇರಬೇಕು. ಹುಲಿಗಳ ಗಣತಿ ಪ್ರಕಾರ ಪ್ರಪಂಚದ ಶೇ.70 ರಷ್ಟು ಅಂದರೆ ಸುಮಾರು 3682 ಹುಲಿಗಳು ಭಾರತ ದೇಶದಲ್ಲಿವೆ. ಅದರಲ್ಲಿ 785 ಹುಲಿಗಳು ಇರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 563 ಹುಲಿಗಳನ್ನು ಹೊಂದಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ನಮ್ಮ ಸುತ್ತಮುತ್ತಲಿರುವ ಕಾಡು ಮತ್ತು ಅದರಲ್ಲಿ ವಾಸವಿರುವ ಕಾಡು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಮತ್ತು ಮಾನವನ ಜೀವನದ ನಡುವೆ ಒಂದು ಬಾಂಧವ್ಯವಿದೆ. ಪರಿಸರದ ಸಂರಕ್ಷಣೆಗಾಗಿ ನಿಮ್ಮ ಮನೆ ಸುತ್ತ ಮುತ್ತ ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳಿದರು.

ಹೊಲ- ಗದ್ದೆಗಳಲ್ಲಿ ಗಿಡಗಳನ್ನು ನೆಟ್ಟು ಮರವನ್ನು ಬೆಳೆಸಿದರೆ ಉತ್ತಮ ಆಮ್ಲಜನಕ ದೊರಕುತ್ತದೆ. ಆದ್ದರಿಂದ ನಮ್ಮ ಆರೋಗ್ಯವು ಸಮೃದ್ಧಿಯಾಗಲು ಸಹಕಾರಿಯಾಗಲಿದೆ. ಇದರ ಜೊತೆಗೆ ಕಾಡುಪ್ರಾಣಿಗಳ ಸಂರಕ್ಷಣೆ ಬಹಳ ಮುಖ್ಯ ಎಂದರು.

ಶಾಲಾ ಸಂಸ್ಥಾಪಕ ಎಚ್.ವಿ.ಅಶ್ವಿನ್ ಕುಮಾರ್ ಅವರನ್ನು ಸಿದ್ದರಾಮ ಪೂಜಾರಿ ಮತ್ತು ಮನೋದಯ ಸಂಸ್ಥೆ ಮಹೇಶ್ ಹಾಗೂ ವಿ.ತೇಜಸ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.

ಶಾಲೆ ಮೇಲ್ವಿಚಾರಕಿ ಎಚ್.ವಿ.ಶ್ವೇತಕುಮಾರಿ, ಅಕ್ಷತಾ ಅಶ್ವಿನ್ ಕುಮಾರ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.