ಸಾರಾಂಶ
ಕಮತಗಿ: ನೀರು ಅಮೂಲ್ಯವಾದ ಜೀವ ಜಲವಾಗಿದ್ದು, ಬೇಸಿಗೆಯ ದಿನಗಳಲ್ಲಿ ನೀರು ಸೇವನೆ ಅತಿ ಅವಶ್ಯ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು ಎಂದು ಕಮತಗಿ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಣಾಧಿಕಾರಿ ಎ.ಬಿ. ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ
ಕಮತಗಿನೀರು ಅಮೂಲ್ಯವಾದ ಜೀವ ಜಲವಾಗಿದ್ದು, ಬೇಸಿಗೆಯ ದಿನಗಳಲ್ಲಿ ನೀರು ಸೇವನೆ ಅತಿ ಅವಶ್ಯ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು ಎಂದು ಕಮತಗಿ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಣಾಧಿಕಾರಿ ಎ.ಬಿ. ಪೂಜಾರಿ ಹೇಳಿದರು.ಪಟ್ಟಣದ ರೇನ್‌ಬೋ ಸೋಸಿಯಲ್ ವೆಲ್ಫೇರ್ ಅಸೋಸಿಯೇಶನ್ ಕಮತಗಿ ವತಿಯಿಂದ ಬೇಸಿಗೆ ನಿಮಿತ್ತ ಬಸ್ ನಿಲ್ದಾಣದಲ್ಲಿ ಆರಂಭಿಸಲಾದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ರೇನ್‌ಬೋ ಸೋಸಿಯಲ್ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆ ವತಿಯಿಂದ ಕಮತಗಿ ಪಟ್ಟಣದ ಮೂಲಕ ಬೇರೆ ಬೇರೆ ನಗರಗಳಿಗೆ ತೆರಳುವ ಪ್ರಯಾಣಿಕರ ಅನಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ನಿರ್ಮಿಸಿರುವುದರಿಂದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಯುವಕರು ಸೇರಿಕೊಂಡು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದರು.ರೇನ್‌ಬೋ ಸಂಸ್ಥೆಯಿಂದ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಾದ ಗಾಂಧಿ ಚೌಕ್, ಮಾರುಕಟ್ಟೆಯಲ್ಲಿ ಶುದ್ಧ ನೀರಿನ ಅರವಟ್ಟಿಗೆ ಘಟಕಗಳನ್ನು ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ರೇನ್‌ಬೋ ಸಂಸ್ಥೆಯ ಅಧ್ಯಕ್ಷ ಪ್ರಮೋದ ಗಾಡದ, ಸಂಸ್ಥೆಯ ಸದಸ್ಯರಾದ ಗೋಪಾಲ್ ಬಂಡಿ, ವಿಜಯ ದೋತ್ರದ, ಸಂತೋಷ ಕುಮಚಗಿ, ಗಣೇಶ ಕಡ್ಲಿಮಟ್ಟಿ ಇತರರು ಇದ್ದರು.