ರಾಜ್ಯ ಪವರ್‌ ಲಿಫ್ಟಿಂಗ್‌ ಅಸೋಸಿಯೇಷನ್ ವಿರುದ್ಧ ಕುತಂತ್ರ

| Published : Oct 30 2023, 12:30 AM IST

ಸಾರಾಂಶ

ಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್‌ ಅಸೋಸಿಯೇಷನ್ ಆರ್‌ಎಡಬ್ಲ್ಯು ಕಾರ್ಯದರ್ಶಿ ಹುದ್ದೆಯ ವಯಸ್ಸು, ವೈಯಕ್ತಿಕ ಕಾರಣಗಳನ್ನು ನೀಡಿ, ತೊರೆದು ಹೋಗಿ, ಈಗ ಸಂಸ್ಥೆಯ ವಿರುದ್ಧವೇ ಕೆ.ಎಸ್‌.ಸಾಯಿನಾಥ್‌ ಕುತಂತ್ರ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮೀದೇವಿ ದಯಾನಂದ್‌ ಆಕ್ಷೇಪಿಸಿದರು.
ಸಾಯಿನಾಥ್‌, ಅಕ್ರಂ ಪಾಷಾ ವಿರುದ್ಧ ಅಸೋಸಿಯೇಷನ್ ಕಾರ್ಯದರ್ಶಿ ಲಕ್ಷ್ಮೀದೇವಿ ಆರೋಪ ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್‌ ಅಸೋಸಿಯೇಷನ್ ಆರ್‌ಎಡಬ್ಲ್ಯು ಕಾರ್ಯದರ್ಶಿ ಹುದ್ದೆಯ ವಯಸ್ಸು, ವೈಯಕ್ತಿಕ ಕಾರಣಗಳನ್ನು ನೀಡಿ, ತೊರೆದು ಹೋಗಿ, ಈಗ ಸಂಸ್ಥೆಯ ವಿರುದ್ಧವೇ ಕೆ.ಎಸ್‌.ಸಾಯಿನಾಥ್‌ ಕುತಂತ್ರ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮೀದೇವಿ ದಯಾನಂದ್‌ ಆಕ್ಷೇಪಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯಿನಾಥ್‌ರ ಬಗ್ಗೆ ನಮಗೆ ಗೌರವವಿದೆ. ಆದರೆ, ಸಂಸ್ಥೆಯೊಂದರ ಪ್ರಮುಖ ಹುದ್ದೆಯಲ್ಲಿ ಮಹಿಳೆ ಕಾರ್ಯ ನಿರ್ವಹಿಸುತ್ತಿರುವುದನ್ನು ಸಹಿಸಲಾಗದೇ ಸಾಯಿನಾಥ್‌ ಹಾಗೂ ಪೊಲೀಸ್ ಇಲಾಖೆಯ ಅಕ್ರಂ ಪಾಷಾ ಅನಧಿಕೃತವಾಗಿ ಸ್ಪರ್ಧೆ ಆಯೋಜಿಸುತ್ತಿರುವುದು ಸರಿಯಲ್ಲ ಎಂದರು. ಕ್ರೀಡಾಪಟುಗಳು ಸಹ ಅನಧಿಕೃತ ಸಂಸ್ಥೆಯಡಿ ಆಯೋಜಿಸುವ ಸ್ಪರ್ಧೆಗಳಿಗೆ ಹೋಗುವುದು ಸರಿಯಲ್ಲ. ಅಂತಹ ಸ್ಪರ್ಧೆಗಳಿಗೆ ಹೋಗಬೇಡಿ ಎಂಬುದಾಗಿ ಮಾನ್ಯತೆ ಪಡೆದ ಸಂಸ್ಥೆಯ ಪದಾಧಿಕಾರಿಯಾಗಿ, ಹಿರಿಯ ಕ್ರೀಡಾಪಟುವಾಗಿ ಯುವ, ಕಿರಿಯ ಕ್ರೀಡಾಪಟುಗಳಿಗೂ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಮ್ಮ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು, ಸಂಸ್ಥೆ ಘನತೆಗೆ ಧಕ್ಕೆ ತರುವಂತಹ ಕೆಲಸ ಯಾರೇ ಮಾಡಿದರೂ ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು. ಸಾಯಿನಾಥ್‌ರಿಗೆ ಕಾನೂತ್ಮಕವಾಗಿ ಯಾವುದೇ ಅಧಿಕಾರ ಇಲ್ಲ. ಆದರೂ, ಕ್ರೀಡಾಪಟುಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ತಂಡ ಆಯ್ಕೆ ಮಾಡಿ, ರಾಷ್ಟ್ರೀಯ ಸ್ಪರ್ಧೆಗೆ ಕರೆದೊಯ್ಯುವುದಾಗಿ ಕ್ರೀಡಾಪಟುಗಳ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ. ಅಲ್ಲದೇ, ಸಾಯಿನಾಥ್‌ ಸೇರಿದಂತೆ ಅನಧಿಕೃತ ವ್ಯಕ್ತಿಗಳು, ಅನಧಿಕೃತ ಸಂಸ್ಥೆಗಳು, ಮಾನ್ಯತೆ ಇಲ್ಲದ ಸಂಸ್ಥೆಗಳು ಆಯೋಜಿಸುವ ಸ್ಪರ್ಧೆ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಸಾಯಿನಾಥ್‌ 10 ವರ್ಷ ಆಡಿಟ್ ಮಾಡಿಸಿರಲಿಲ್ಲ. ಆದರೆ, ಹಿರಿಯ ಕ್ರೀಡಾಪಟುಗಳಿಂದ 10-15 ಸಾವಿರ ಸಂಗ್ರಹಿಸಿ, ಲಕ್ಷಾಂತರ ರು. ನಾನು ಹೊಂದಿಸಿಕೊಟ್ಟು, ಆಡಿಟ್ ಮಾಡಿಸಿದ್ದೇನೆ. ಇಷ್ಟೆಲ್ಲಾ ಮಾಡಿದರೂ, ಒಬ್ಬ ಮಹಿಳೆಯು ಪ್ರಮುಖ ಸ್ಥಾನದಲ್ಲಿರುವ ಸಂಸ್ಥೆಯ ಏಳಿಗೆ, ಸಹಿಸಲಾಗುತ್ತಿಲ್ಲ ಎಂದು ಲಕ್ಷ್ಮೀದೇವಿ ದಯಾನಂದ್ ಆರೋಪಿಸಿದರು. ......................... ನ.19, ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಕನ್ನಡಪ್ರಭ ವಾರ್ತೆ ದಾವಣಗೆರೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಪವರ್ ಲಿಫ್ಟರ್ ಅಸೋಸಿಯೇಷನ್‌ ಆರ್‌ಎಡಬ್ಲ್ಯು ಹಾಗೂ ಮಲೇಬೆನ್ನೂರಿನ ಝಲಕ್ ಜಿಮ್‌ ಸಹಯೋಗದಲ್ಲಿ ನ.19ರಂದು ಹರಿಹರ ತಾ. ಮಲೇಬೆನ್ನೂರು ಪಟ್ಟಣದ ಝಲಕ್ ಜಿಮ್‌ನಲ್ಲಿ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀದೇವಿ ದಯಾನಂದ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ, ಬೆಂಗಳೂರು, ಮೈಸೂರು, ಹಾಸರ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದು, 4 ವಯೋಮಾನದಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದರು. ಟೀನ್‌ ಬಾಯ್ಸ್‌ ವಿಭಾಗದಲ್ಲಿ 53, 59, 66, 74, 83, 93, 105, 120, ಪ್ಲಸ್‌ 120 ಕೆಜಿ, ಸೀನಿಯರ್ ಮತ್ತು ಮಾಸ್ಟರ್‌ ಮೆನ್ಸ್‌ನಲ್ಲಿ 59, 66, 83, 93, 105, 120, ಪ್ಲಸ್‌ 120 ಕೆಜಿ, ಮಹಿಳೆಯರ ವಿಭಾಗದಲ್ಲಿ ಟೀನ್ ಗರ್ಲ್ಸ್, ಜೂನಿಯರ್‌ ಗರ್ಲ್ಸ್‌ 43, 47, 52, 57, 63, 72, 84, ಪ್ಲಸ್ 84, ಸೀನಿಯರ್‌ ವುಮೆನ್ಸ್‌, ಮಾಸ್ಟರ್ ವುಮೆನ್ಸ್‌ ಸ್ಪರ್ಧೆ ವಿಭಾಗದಲ್ಲಿ 47, 52, 57, 63, 72, 84, ಪ್ಲಸ್ 84 ವಿಭಾಗದಲ್ಲಿ ಸ್ಪರ್ಧೆ ನಡೆಯಲಿವೆ ಎಂದು ಅವರು ಹೇಳಿದರು. ಸಬ್ ಜೂನಿಯರ್ ವಿಭಾಗದಲ್ಲಿ ಸ್ಟ್ರಾಂಗ್ ಟೀನ್‌ ಆಫ್ ಕರ್ನಾಟಕ-2023(ಬಾಲಕ-ಬಾಲಕಿ), ಜೂನಿಯರ್‌ ವಿಭಾಗದಲ್ಲಿ ಸ್ಟ್ರಾಂಗ್ ಬಾಯ್‌-ಗರ್ಲ್ ಆಫ್ ಕರ್ನಾಟಕ-2023, ಸೀನಿಯರ್ ವಿಭಾಗಲ್ಲಿ ಸ್ಟ್ರಾಂಗ್‌ ಮ್ಯಾನ್-ವುಮೆನ್ ಆಫ್ ಕರ್ನಾಟಕ-2023, ಮಾಸ್ಟರ್ ವಿಭಾಗದದಲ್ಲಿ ಸೂಪರ್ ಮಾಸ್ಟರ್ ಆಫ್ ಕರ್ನಾಟಕ-2023 ಹಾಗೂ ಸಮಗ್ರ ಒಂದು ಟೈಟಲ್ ಅವಾರ್ಡನ್ನು ವಿಜೇತ ಸ್ಪರ್ಧಿಗಳಿಗೆ ನೀಡಿ, ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ಆಸಕ್ತ ಕ್ರೀಡಾಪಟುಗಳು ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗೆ ದಾದಾಪೀರ್‌, ನ್ಯಾಷನಲ್ ಮೆಡಲಿಸ್ಟ್‌, ಝಲಕ್ ಜಿಮ್ ಮಾಲೀಕ, ತರಬೇತುದಾರ-ಮೊ-97402-95050, 98805-14889, 95905-56556, 94807-20827ಗೆ ಸಂಪರ್ಕಿಸುವಂತೆ ಲಕ್ಷ್ಮೀದೇವಿ ದಯಾನಂದ್ ಮನವಿ ಮಾಡಿದರು. ಸಂಸ್ಥೆಯ ಪದಾಧಿಕಾರಿಗಳಾದ ಎಚ್‌.ಗುರುಸ್ವಾಮಿ, ಎಚ್‌.ಎನ್.ಶಶಿಧರ್‌, ಸಂತೋಷ್‌, ಕರವೇ ಸ್ವಾಮಿಮಾನಿ ರಾಜ್ಯಾಧ್ಯಕ್ಷ ಎಸ್‌.ಜಿ.ಸೋಮಶೇಖರ, ಜಾಕೀರ್ ಅಲಿ, ದಾದಾಪೀರ್‌, ಲಕ್ಷ್ಮೀನಾರಾಯಣ, ಶಶಿಧರ್‌, ಜಿ.ಗೋಪಾಲ, ದಿನೇಶ, ಸಂತೋಷ ಇತರರು ಇದ್ದರು. .............................. ಪವರ್ ಲಿಫ್ಟಿಂಗ್ ಗೆ ಮಾನ್ಯತೆ ನೀಡುವಂತೆ, ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದೇನೆ. ಆದರೆ, ಸಂಸ್ಥೆಯ ವಿರುದ್ಧ ಕೆಲವರು ಮಾಡುತ್ತಿರುವ ಕುತಂತ್ರಗಳಿಂದ ನಾವ್ಯಾರೂ ಎದೆಗುಂದುವುದಿಲ್ಲ. ನಮ್ಮ ಕ್ರೀಡೆ, ಕ್ರೀಡಾಪಟುಗಳಿಗೆ ನ್ಯಾಯ ಕೊಡಿಸುವವರೆಗೂ ನಾನೂ ಸುಮ್ಮನಿರುವುದಿಲ್ಲ. ನನ್ನ ಪ್ರಯತ್ನ ನಿರಂತರ. - ಲಕ್ಷ್ಮೀದೇವಿ ದಯಾನಂದ್‌ ...............