ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಬಿಜೆಪಿ ನಾಯಕರು ಇತ್ತೀಚೆಗೆ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳನ್ನು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ದಲಿತ ಚಳವಳಿಯನ್ನು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಶಿವಕುಮಾರ್ ಗಂಭೀರ ಆರೋಪ ಮಾಡಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ದಸಂಸ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಪ್ರಗತಿಪರ ಚಿಂತಕ ಪ್ರೊ. ಮುಜಾಫರ್ ಅಸ್ಸಾಧಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ದ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ಸಂಘ ಪರಿವಾರ ಬೆಂಬಲಿತ ಬಿಜೆಪಿ ಪ್ರಾಯೋಜಿತ ಕೆಲವು ನಾಯಕರು ಅಂಬೇಡ್ಕರ್ ಅವರನ್ನು ಕುರಿತು ಅಪಹಾಸ್ಯವಾಗಿ ಮಾತನಾಡಿದರೆ, ಸಂಘಿಗಳ ಮನಸ್ಥಿತಿಯುಳ್ಳ ಕೆಲವರು ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳನ್ನು ಹೊಗಳುವ ಮೂಲಕ ಮತ ಬ್ಯಾಂಕ್ ರಾಜಕೀಯಕ್ಕೆ ಅನುಕೂಲ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ದೂರಿದರು. ದಸಂಸ ತಾಲೂಕು ಸಂಚಾಲಕರಾದ ಸೋಮಶೇಖರ್, ರಾಜು, ಸಂಘಟನಾ ಸಂಚಾಲಕ ರಜನಿ, ನಾಗರಾಜ್ ಮೂರ್ತಿ, ಲಕ್ಷ್ಮಣ್, ನಾಗೇಶ್, ಲಿಂಗರಾಜು, ನಾಗರಾಜು, ಶಿವಣ್ಣ, ಶಾಂತರಾಜು, ನವೀನ್, ರವಿ, ರಂಗದಾಸ್, ಲಿಂಗರಾಜು, ರವಿ, ಗೋವಿಂದ, ರಾಜೇಂದ್ರ, ಪ್ರಭು, ರಾಜು, ನಂಜುಂಡ, ರಾಚಪ್ಪ ಇದ್ದರು.