ರಂಗನತಿಟ್ಟು ಬೋಟ್‌ಮೆನ್‌ಗಳ ಕಾಯಂಗೆ ಆಗ್ರಹ

| Published : Jan 09 2025, 12:49 AM IST

ರಂಗನತಿಟ್ಟು ಬೋಟ್‌ಮೆನ್‌ಗಳ ಕಾಯಂಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಂಗನತಿಟ್ಟು ಪಕ್ಷಿಧಾಮದ ಪಾರಂಪರಿಕ ಪ್ರವಾಸಿ ಕೇಂದ್ರವಾಗಿದ್ದು, ಅದರಿಂದ ಮಾಸಿಕ ಲಕ್ಷಾಂತರ ರು. ಆದಾಯ ಬರುತ್ತಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಪಕ್ಷಿಧಾಮವು 40 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿ ಬೋಟಿಂಗ್‌ ಸೇರಿ ಪಕ್ಷಿಗಳ ವೀಕ್ಷಣೆಗೆ ಅವಕಾಶವಿದೆ. ಈ ಬೋಟಿಂಗ್‌ ವ್ಯವಸ್ಥೆಯಿಂದಲೇ ಪಕ್ಷಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರಣ್ಯ ಇಲಾಖೆ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಆನೆ ಮಾವುತರನ್ನು ಕಾಯಂಗೊಳಿಸಿದಂತೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬೋಟ್‌ಮೆನ್‌ಗಳನ್ನು ಕಾಯಂಗೊಳಿಸುವಂತೆ ಆಗ್ರಹ ಕೇಳಿಬಂದಿದೆ.

ರಂಗನತಿಟ್ಟು ಪಕ್ಷಿಧಾಮದ ಪಾರಂಪರಿಕ ಪ್ರವಾಸಿ ಕೇಂದ್ರವಾಗಿದ್ದು, ಅದರಿಂದ ಮಾಸಿಕ ಲಕ್ಷಾಂತರ ರು. ಆದಾಯ ಬರುತ್ತಿದೆ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಪಕ್ಷಿಧಾಮವು 40 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿ ಬೋಟಿಂಗ್‌ ಸೇರಿ ಪಕ್ಷಿಗಳ ವೀಕ್ಷಣೆಗೆ ಅವಕಾಶವಿದೆ. ಈ ಬೋಟಿಂಗ್‌ ವ್ಯವಸ್ಥೆಯಿಂದಲೇ ಪಕ್ಷಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

ಬೋಟಿಂಗ್‌ ಸೇವೆ ನೀಡಲು ಗುತ್ತಿಗೆ ಆಧಾರದಲ್ಲಿ 15 ಬೋಟ್‌ಮೆನ್‌ಗಳು ಕೆಲಸ ಮಾಡುತ್ತಿದ್ದು, ಅವರು ಇದೀಗ ತಮ್ಮ ಕೆಲಸವನ್ನು ಕಾಯಂ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿ ಹೈಕೋರ್ಟ್‌ ವಕೀಲ ಪ್ರಶಾಂತ್‌ ಮಿಥುಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.

ಬೋಟ್‌ಮೆನ್‌ಗಳು ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 5.30ರವರೆಗೆ ಕೆಲಸ ಮಾಡುತ್ತಿದ್ದು, ಅವರಿಗೆ ಕನಿಷ್ಠ ವೇತನವೂ ಸಿಗುತ್ತಿಲ್ಲ. ಅಲ್ಲದೆ, ಈಗಾಗಲೇ ಇಲಾಖೆ ಅಡಿಯಲ್ಲಿ ಆನೆ ಮಾವುತರನ್ನು ಕಾಯಂ ಮಾಡಲಾಗಿದ್ದು, ಅದೇ ಮಾದರಿ ಅನುಸರಿಸಿ ರಂಗತಿಟ್ಟು ಪಕ್ಷಿಧಾಮದ ಬೋಟ್‌ಮೆನ್‌ಗಳನ್ನೂ ಕಾಯಂಗೊಳಿಸಬೇಕು. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಮಾನ್ಯತಾ ಸಮಿತಿಗೆ ಡಿ.ಶಶಿಕುಮಾರ್‌ ನೇಮಕ

ಮಂಡ್ಯ:

ರಾಜ್ಯ ಸರ್ಕಾರವು ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರನ್ನಾಗಿ ಮಂಡ್ಯ ಜಿಲ್ಲಾ ಟಿವಿ-5 ವರದಿಗಾರ ಡಿ.ಶಶಿಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು 1.12.2024 ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಸಮಿತಿಯು ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.