ಅಸಮಾನತೆ ವಿರುದ್ಧ ನಿರಂತರ ಹೋರಾಟ

| Published : Jan 17 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ದೇಶ ಹಾಗೂ ರಾಜ್ಯದಲ್ಲಿ ಸಮಾಜ ನಿರ್ಮಾಣಕ್ಕಾಗಿ ಕಳೆದ ೨೦ ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಎಂದಿಗೂ ಯಾವದೇ ಧರ್ಮ, ಜಾತಿ, ಸಮುದಾಯ, ಪಕ್ಷ, ಭಾಷೆ ಶತ್ರು ಅಲ್ಲ ಅಂದುಕೊಂಡಿರುವ ನಾನು ಅಸಮಾನತೆ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವುದಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶ ಹಾಗೂ ರಾಜ್ಯದಲ್ಲಿ ಸಮಾಜ ನಿರ್ಮಾಣಕ್ಕಾಗಿ ಕಳೆದ ೨೦ ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಎಂದಿಗೂ ಯಾವದೇ ಧರ್ಮ, ಜಾತಿ, ಸಮುದಾಯ, ಪಕ್ಷ, ಭಾಷೆ ಶತ್ರು ಅಲ್ಲ ಅಂದುಕೊಂಡಿರುವ ನಾನು ಅಸಮಾನತೆ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವುದಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನಕುಮಾರ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬೃಹತ್ ಕಟ್ಟಡ ನಿರ್ಮಾಣ, ದಶಷ್ಪದ, ಚತುಷ್ಪದ ರಸ್ತೆ ನಿರ್ಮಾಣ, ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ ಅನ್ನುವುದು ಉತ್ತಮ. ಸಮಸಮಾಜ ಆಗಲು ಸಾಧ್ಯವಾಗುವುದಿಲ್ಲ. ಉತ್ತಮ, ಸಮ ಸಮಾಜವೆಂದರೆ ಸಮಾಜದಲ್ಲಿರುವ ಎಲ್ಲರಿಗೂ ಸಮಾನತೆ ಸಿಗುವುದಾಗಿದೆ. ಇಂತಹ ಸಮಾಜ ನಿರ್ಮಾಣಕ್ಕಾಗಿ ಸಸಿ ನೆಡುತ್ತಿದ್ದು, ಇದು ಬೆಳೆದು ಹೆಮ್ಮರವಾಗಿ ಮುಂದಿನ ಪೀಳಿಗೆಗೆ ಮುಟ್ಟಬಹುದು ಎಂಬ ಆಶಯ ಹೊಂದಿರುವುದಾಗಿ ತಿಳಿಸಿದರು.ಇಂದು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಹೆಸರು ಹೇಳುವುದು ಪ್ಯಾಶನ್ ಆಗುತ್ತಿರುವುದು ವಿಷಾದಕರ ಸಂಗತಿ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ.ಅಂಬೇಡ್ಕರ ಹೆಸರು ಹೇಳುವ ಬದಲು ದೇವರ ನಾಮ ಜಪ ಮಾಡಿದರೆ ಪುಣ್ಯ ಬರುತ್ತದೆ ಎಂಬ ಹೇಳಿಕೆ ನೀಡಿರುವದು ಅಜ್ಞಾನದ ಮಾತು. ಅವರು ಡಾ.ಅಂಬೇಡ್ಕರ ಕುರಿತು ಹೆಚ್ಚು ಅರಿತುಕೊಂಡು ವೈಜ್ಞಾನಿಕ ಆಲೋಚನೆ ಮಾಡಬೇಕಿದೆ. ಇಂದು ಬಲಪಂಥಿಯರು, ಮಧ್ಯಪಂಥಿಯರು, ಎಡಪಂಥಿಯರು ಯಾರೂ ಡಾ.ಅಂಬೇಡ್ಕರ ಕುರಿತು ಅಷ್ಟಾಗಿ ಓದಿಲ್ಲ. ಡಾ.ಅಂಬೇಡ್ಕರ ಅವರ ಕುರಿತು ಇನ್ನು ತಿಳಿದುಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಉತ್ತಮವಲ್ಲದ ಸಾಕಷ್ಟು ಮಾತುಗಳನ್ನು ಆಡುತ್ತಾರೆ. ದೇಶದಲ್ಲಿ ವಾಕ್ ಸ್ವಾತಂತ್ಯವಿದೆ. ಎಲ್ಲರೂ ವೈಚಾರಿಕತೆಯಿಂದ ಇರಬೇಕಾದ ಅಗತ್ಯವಿದೆ. ದೇಶದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಹೋರಾಟ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂದು ನಟ ಚೇತನ ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ೫ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಿಲ್ಲ. ಅಸಮಾನತೆಯ ಪಕ್ಷಗಳು ಅಧಿಕಾರ ಪಡೆದುಕೊಳ್ಳುವದೇ ಗುರಿ ಇರುವದರಿಂದಾಗಿ ಉತ್ತಮ ಕನಸು, ಆಲೋಚನೆಗಳು ಇರಲ್ಲ. ಅಧಿಕಾರ ಬರಬೇಕಾದರೆ ಏನೆಲ್ಲಾ ಮಾಡುತ್ತಾರೆ. ಅಧಿಕಾರ ಸಿಕ್ಕ ನಂತರ ಏನು ಮಾಡಬೇಕೆಂಬ ಆಲೋಚನೆ ಮರೆಯುತ್ತಾರೆ. ಇಂದು ರಾಜ್ಯಕ್ಕೆ ಬುದ್ದ-ಬಸವ-ಅಂಬೇಡ್ಕರ, ಕುವೆಂಪು ಅವರ ಆದರ್ಶ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ರೇವಣಸಿದ್ದ ಐಗಳಿ, ನಾಗು ಚಿಗರಿ, ಕಾಶೀನಾಥ ಅವಟಿ ಸೇರಿದಂತೆ ಅಭಿಮಾನಿಗಳು ಹಾಜರಿದ್ದರು.ಕೋಟ್‌ಡಾ.ಅಂಬೇಡ್ಕರ ಕುರಿತು ಹೆಚ್ಚು ಅರಿತುಕೊಂಡು ವೈಜ್ಞಾನಿಕ ಆಲೋಚನೆ ಮಾಡಬೇಕಿದೆ. ಇಂದು ಬಲಪಂಥಿಯರು, ಮಧ್ಯಪಂಥಿಯರು, ಎಡಪಂಥಿಯರು ಯಾರೂ ಡಾ.ಅಂಬೇಡ್ಕರ ಕುರಿತು ಅಷ್ಟಾಗಿ ಓದಿಲ್ಲ. ಡಾ.ಅಂಬೇಡ್ಕರ ಅವರ ಕುರಿತು ಇನ್ನು ತಿಳಿದುಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಉತ್ತಮವಲ್ಲದ ಸಾಕಷ್ಟು ಮಾತುಗಳನ್ನು ಆಡುತ್ತಾರೆ. ದೇಶದಲ್ಲಿ ವಾಕ್ ಸ್ವಾತಂತ್ಯವಿದೆ. ಎಲ್ಲರೂ ವೈಚಾರಿಕತೆಯಿಂದ ಇರಬೇಕಾದ ಅಗತ್ಯವಿದೆ.ಚೇತನ ಕುಮಾರ, ನಟ