ಅದ್ಧೂರಿಯಾಗಿ ಜರುಗಿದ ಸಂವಿಧಾನ ಜಾಗೃತಿ ಜಾಥಾ

| Published : Feb 10 2024, 01:47 AM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಜಾಥಾಗೆ ಪಟ್ಟಣದ ದಿಗಂಬರೇಶ್ವರ ಮಠದ ಬಳಿ ರಥವನ್ನು ಕೊಲ್ಹಾರ ತಾಲೂಕಾಡಳಿತದಿಂದ ಭವ್ಯವಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಕೊಲ್ಹಾರದಲ್ಲಿ ಸಂವಿಧಾನ ಜಾಗೃತಿ ಜಾಥಾ ಅದ್ಧೂರಿಯಾಗಿ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಜಾಥಾಗೆ ಪಟ್ಟಣದ ದಿಗಂಬರೇಶ್ವರ ಮಠದ ಬಳಿ ರಥವನ್ನು ಕೊಲ್ಹಾರ ತಾಲೂಕಾಡಳಿತದಿಂದ ಭವ್ಯವಾಗಿ ಸ್ವಾಗತಿಸಲಾಯಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀ, ತಹಸೀಲ್ದಾರ್‌ ಎಸ್.ಎಸ್.ನಾಯಕಲ್ ಮಠ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ದಿಗಂಬರೇಶ್ವರ ಮಠದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಮ್.ಪಿ.ಎಸ್ ಶಾಲಾ ಮೈದಾನ ತಲುಪಿತು. ಮಹಿಳೆಯರ ಕುಂಭ ಮೇಳ ,ಆರತಿ, ಜಾಂಜ್ ಮೇಳ,ಗೊಂಬೆ,ಡೊಳ್ಳು ಕುಣಿತ,ಮಕ್ಕಳ ಲೇಜಿಮ್, ಮಹಾಪುರುಷರ ಮಕ್ಕಳ ಛಧ್ಮ ವೇಷಗಳು ಜನರ ಗಮನ ಸೆಳೆದವು. ಅಂಬೇಡ್ಕರ ವೃತ್ತದಲ್ಲಿ ಮಹಿಳೆಯರು ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ತಹಸೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯತಿ ಸದಸ್ಯರು, ದಲಿತಪರ ಸಂಘಟನೆಗಳ ಮುಖಂಡರು ಡಾ.ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ಸಂವಿಧಾನ ಪೀಠಿಕೆ ಭಾವಚಿತ್ರಕ್ಕೆ ಪೂಜೆ ಸಲ್ಲಸಿ, ಪುಪ್ಪಾರ್ಚನೆ ಗೈದರು. ಬಳಿಕ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ನೃತ್ಯ ರೂಪಕ, ದೇಶ ಭಕ್ತಿ ಗೀತೆಗಳ ನೃತ್ಯ ಜನರ ಮನಸ್ಸನ್ನ ಸೂರೆಗೊಳಿಸಿದವು. ಮಕ್ಕಳು ಮತ್ತು ಮಹಿಳಾ ಸಾಹಿತಿಗಳಿಂದ ಸಂವಿಧಾನ ಕುರಿತು ರಚಿಸಿದ ಸ್ವರಚಿತ ಕವನ ವಾಚನಗಳು ಜರುಗಿದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಕ್ಷಕಿ ರುದ್ರಮ್ಮ ಗಿಡ್ಡಪ್ಪಗೋಳ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನ ಓದಲಾಗದಿದ್ದರೂ, ಸಂವಿಧಾನ ಪೀಠಿಕೆಯನ್ನಾದರೂ ಓದಿ ಅರ್ಥೈಸಿಕೊಂಡು ಎಲ್ಲರೂ ಒಂದಾಗಿ ಬದುಕಬೇಕು ಎಂದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, ತಹಸೀಲ್ದಾರ್ ಎಸ್.ಎಸ್,ನಾಯಕಲ್ ಮಠ, ಉಪ ತಹಸೀಲ್ದಾರ್ ಎನ್.ಕೆ.ನದಾಫ್,ಕಂದಾಯ ನಿರೀಕ್ಷಕ ಬಿ.ಎಸ್.ಪಾಟೀಲ, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶಿರಸ್ತೇದಾರ ಕೃಷ್ಣಾ ಗೂಡೂರ, ಪಪಂ ಸದಸ್ಯರಾದ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ತೌಶೀಪ್ ಗಿರಗಾಂವಿ, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ಬಾಬು ಭಜಂತ್ರಿ, ಮುಖಂಡ ಟಿ,ಟಿ,ಹಗೇದಾಳ, ಶಿಕ್ಷಣ ಸಂಯೋಜಕ ಜಿ.ಎಸ್.ಗಣಿಯವರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಿ.ಐ.ಗೊಡ್ಯಾಳ, ಎ.ಎನ್.ನದಾಫ್, ಎಸ್.ಜಿ.ಪಾರಗೊಂಡ, ಎ.ಬಿ.ಪವಾರ, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಪ್ಪ ಗಣಿ, ಕರುನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬೋರಮ್ಮ ಪತಂಗಿ, ದಲಿತ ಮುಖಂಡರಾದ ದಶರಥ ಈಟಿ, ಮಾರುತಿ ಕುದರಿ, ರಾಜು ಇವಣಗಿ, ತಿಪ್ಪಣ್ಣ ಕುದರಿ, ಪರಶುರಾಮ ಚಿಮ್ಮಲಗಿ, ಶಿಡ್ಲೆಪ್ಪ ತಳಗೇರಿ, ಲಕ್ಷ್ಮಣ ಬ್ಯಾಲ್ಯಾಳ, ಮಲ್ಲು ಅಪ್ಪಣ್ಣವರ, ರಾಘು ಬ್ಯಾಲ್ಯಾಳ, ಸಚಿನ್ ಈಟಿ ,ಮಾರುತಿ ಕುದರಿ ಸೇರಿದಂತೆ ಪಪಂ ಸದಸ್ಯರು,ದಲಿತ ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ ಶಿಕ್ಷಕರು,ಮಕ್ಕಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೊಲಿಸ್ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಗೀತ ಶಿಕ್ಷಕಿ ಕಾಂಚನಾ ನಾಯ್ಕರ್ ,ತಬಲಾ ವಾದಕ ಪ್ರಾಣೇಶ ಪತ್ತಾರ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಶಾಲೆ ಮಕ್ಕಳು ಪ್ರಾರ್ಥಿಸಿದರು. ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ನಾಡಗೀತೆ ಹೇಳಿದರು. ಮನು ಪತ್ತಾರ ಸಂವಿಧಾನ ಪೀಠಿಕೆ ಬೋಧಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಹಾಗೂ ಸಿ.ಆರ್.ಪಿ ಜಿ.ಆಯ್.ಗೊಡ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.

---

ಕೋಟ್‌

ಹಿಂದೆ ರಾಜರ ಮಕ್ಕಳು ರಾಜರಾಗುತ್ತಿದ್ದರು ಆದರೆ ಈಗ ಹಾಗಿಲ್ಲ. ಅದು ಈಗ ಮತದಾನದ ಡಬ್ಬಿಯಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು, ಅವರು ಯಾರನ್ನು ಆರಿಸುತ್ತಾರೋ ಅವರು ಆಯ್ಕೆಯಾಗಿ ರಾಜರಾಗುತ್ತಾರೆ. ದೇಶದಲ್ಲಿ ಶ್ರೀಮಂತ ಹಾಗೂ ಬಡವನಿಗೆ ಇರುವುದು ಒಂದೇ ಮತ, ಒಂದೇ ಮೌಲ್ಯ ಇಲ್ಲಿ ಎಲ್ಲರೂ ಒಂದೇ ಎಂಬುವುದನ್ನು ಅಂಬೇಡ್ಕರವರು ಸಂವಿಧಾನದಲ್ಲಿ ತಿಳಿಸಿದ್ದಾರೆ.

-ನಾಗರಾಜ ಬನಸೋಡೆ ಶಿಕ್ಷಕ