ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ

| Published : Feb 05 2024, 01:49 AM IST

ಸಾರಾಂಶ

ಸಂವಿಧಾನ ಜಾರಿಗೊಂಡು 2023 ಜ.26ಕ್ಕೆ 75 ವರ್ಷ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಜಾಥಾ ಫೆ.16ರಂದು ಕಕ್ಕೇರಾಕ್ಕೆ ಆಗಮಿಸಲಿದ್ದು, ತಾಲೂಕಿನ ವಿವಿಧೆಡೆ ಸಂಚಾರ ಮಾಡಲಿದೆ.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ ನಡೆಯಿತು.

ಸಂವಿಧಾನ ಜಾರಿಗೊಂಡು 2023 ಜ.26ಕ್ಕೆ 75 ವರ್ಷ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಜಾಥಾ ಫೆ.16ರಂದು ಕಕ್ಕೇರಾಕ್ಕೆ ಆಗಮಿಸಲಿದ್ದು, ತಾಲೂಕಿನ ವಿವಿಧೆಡೆ ಸಂಚಾರ ಮಾಡಲಿದೆ.

ಫೆ.23ರಂದು ಸುರಪುರಕ್ಕೆ ಆಗಮಿಸಲಿದ್ದು, ಅಲ್ಲಿಂದ ಬೆಂಗಳೂರಿಗೆ ಕಳುಹಿಸಿ ಕೊಡಲಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬ ಅಧಿಕಾರಿಯೂ ಜಾಥಾ ಯಶಸ್ವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾಡಳಿತ ರಸ್ತೆ ಮಾರ್ಗ ಸೂಚಿಸಿದಂತೆ ಗ್ರಾಪಂವಾರು ಹಳ್ಳಿಗಳನ್ನು ಗುರುತಿಸಲಾಗಿದೆ.

ಅಮಾನತಿಗೆ ಒತ್ತಾಯ: ನಗರದ ತಹಸೀಲ್ದಾರ್ ಕಚೇರಿಯಲ್ಲಿ 11 ಗಂಟೆಗೆ ಸಂವಿಧಾನ ಜಾಗೃತಿ ಜಾಥಾ ಸಭೆಗೆ ಆಗಮಿಸಲು ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿಕೊಡಲಾಗಿತ್ತು. ಅದರಂತೆ ಮುಖಂಡರು 11.15ಕ್ಕೆ ಜಮಾವಣೆಗೊಂಡರು. ಆದರೆ 12 ಗಂಟೆಯಾದರೂ ಸಭೆ ಆರಂಭವಾಗಲಿಲ್ಲ. ಇದಕ್ಕೆ ತಹಸೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳ ಗೈರು ಬಂದಿರಲಿಲ್ಲ. ಇದರಿಂದ ಸಂವಿಧಾನಕ್ಕೆ ಅಗೌರವ ತೋರಿಸಿರುವ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು ಎಂಬುದಾಗಿ ದಲಿತ ಮುಖಂಡರು ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು, ತಹಸೀಲ್ದಾರ್‌ ಅವರಿಗೆ ಕೆಲಸದ ಒತ್ತಡವಿದ್ದರೆ ಸಭೆ ಮುಂದೂಡಾಬಹುದಾಗಿತ್ತು. ತಹಸೀಲ್ದಾರ್ ನಿರ್ಲಕ್ಷ್ಯಕ್ಕೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದಲಿತ ಮುಖಂಡರು, ಕೆಲವೇ ಕೆಲ ತಾಲೂಕುಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.