ಸಾರಾಂಶ
ಹಿರಿಯೂರು: ತಾಲೂಕಿನಲ್ಲಿ ಫೆ.18ರಿಂದ 23ರವರೆಗೆ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರ ಮೆರವಣಿಗೆ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸ್ತಬ್ಧಚಿತ್ರ ಮೆರವಣಿಗೆ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ತಬ್ಧಚಿತ್ರ ಮೆರವಣಿಗೆ ನಡೆಯಲಿದ್ದು, 18ರಂದು ತಾಲೂಕಿನ ವಿವಿಪುರಕ್ಕೆ ಆಗಮಿಸುವುದು. ಅಲ್ಲಿಂದ ಸುಮಾರು 6 ದಿನಗಳ ಕಾಲ ತಾಲೂಕಿನಲ್ಲಿ ಸಂಚರಿಸುತ್ತದೆ. ಅಲ್ಲದೇ ಅಲ್ಲಲ್ಲಿ ಕಾರ್ಯಕ್ರಮ ನಡೆಯಲಿದ್ದು, ನುರಿತ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಈ ವೇಳೆ ವಿವಿಧ ಸಂಘಟನೆಗಳ ಸಹಕಾರ ಮುಖ್ಯವಾಗಿದ್ದು, ಹೆಚ್ಚಿನ ಜನ ಸೇರಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಮಾತನಾಡಿ, ತಾಲೂಕಿನಲ್ಲಿ ಫೆ.18ರಂದು ವಿವಿಪುರ, ಕೂನಿಕೆರೆ, ಎಸ್.ಜಿ.ಹಳ್ಳಿ, ಮೇಟಿಕುರ್ಕೆ, ಫೆ.19ರಂದು ಗನ್ನಾಯಕನಹಳ್ಳಿ, ಐಮಂಗಲ, ಬುರುಜನರೊಪ್ಪ, ಮರಡಿಹಳ್ಳಿ, ಎಂ.ಡಿ.ಕೋಟೆ, ಯರಬಳ್ಳಿ, ರಂಗೇನಹಳ್ಳಿ, 20ರಂದು ಹರ್ತಿಕೋಟೆ, ಬ್ಯಾಡರಹಳ್ಳಿ, ಈಶ್ವರಗೆರೆ, ಅಬ್ಬಿನಹೊಳ, ಹರಿಯಬ್ಬೆ, ಖಂಡೇನಹಳ್ಳಿ, 21ರಂದು ಪಿಡಿಕೋಟೆ, ಧರ್ಮಪುರ, ಇಕ್ಕನೂರು, ರಂಗನಾಥಪುರ, ಹೊಸಯಳನಾಡು, ಮಸ್ಕಲ್, ಬಬ್ಬೂರು, 22ರಂದು ಆದಿವಾಲ, ಹಿರಿಯೂರು ನಗರ, ಉಡುವಳ್ಳಿ, ಯಲ್ಲದಕೆರೆ, ಗೌಡನಹಳ್ಳಿ, ದಿಂಡಾವರ, ಕರಿಯಾಲ ಹಾಗೂ 23ರಂದು ಕೆಆರ್ ಹಳ್ಳಿ, ಜೆಜಿಹಳ್ಳಿ ಮೂಲಕ ಬೆಂಗಳೂರಿಗೆ ತೆರಳಲಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್, ಪೌರಾಯುಕ್ತ ಎಚ್.ಮಹಂತೇಶ್, ಪ್ರಾಂಶುಪಾಲ ಡಾ.ಆರ್.ಮಹೇಶ್, ಪ್ರೊ.ಚಂದ್ರಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಂಕಾರಪ್ಪ, ಮುಖಂಡರಾದ ವಿಜಯಕುಮಾರ್, ನಾಗರಾಜ, ರಾಮಚಂದ್ರಪ್ಪ, ಮಹಮದ್ ಖಾಸಿಂ, ಚಂದ್ರಕಾoತ್, ರಘು, ಗುರುನಾಥ, ಕೇಶವಮೂರ್ತಿ, ಕಣುಮೇಶ್ ಹಾಗೂ ಗ್ರಾಮ ಪಂಚಾಯ್ತಿಯ ಪಿಡಿಓಗಳು ಹಾಜರಿದ್ದರು.