ಸಾರಾಂಶ
ಯಲ್ಲಾಪುರ: ಧಾರ್ಮಿಕ ವಿಚಾರದ ಚರ್ಚೆ ಬಂದಾಗ ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ, ದೇಶದ ವಿಷಯದ ಚರ್ಚೆಯಲ್ಲಿ ಸಂವಿಧಾನೋ ರಕ್ಷತಿ ರಕ್ಷಿತ ಎನ್ನಬೇಕು ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ತಾಲೂಕಿನ ಕಣ್ಣೀಗೇರಿಯಲ್ಲಿ ಹಳಿಯಾಳದಿಂದ ಆಗಮಿಸಿದ ಸಂವಿಧಾನ ಜಾಗೃತಿ ರಥದ ಜಾಥಾ ಸ್ವಾಗತಿಸಿ ಮಾತನಾಡಿದರು.ಸಂವಿಧಾನ ನಮಗೆ ಹಕ್ಕು ಹಾಗೂ ಕರ್ತವ್ಯಗಳೆರಡರ ಕುರಿತು ತಿಳಿವಳಿಕೆ ನೀಡಿದೆ.
ನಾವು ಕೇವಲ ಹಕ್ಕಿಗಾಗಿ ಹಾತೊರೆಯದೇ, ನಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ಹಕ್ಕು ಪ್ರತಿಪಾದಿಸಬೇಕು. ಸಂವಿಧಾನ ಗೌರವಿಸುವ ಕಾರ್ಯ ಮೊದಲು ನಮ್ಮಿಂದ ನಡೆಯಬೇಕು ಎಂದರು.
ಜಾಥಾ ಉದ್ಘಾಟಿಸಿದ ತಹಸೀಲ್ದಾರ್ ಎಂ. ಗುರುರಾಜ, ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ದೃಷ್ಟಿಯಿಂದ ಹಾಗೂ ಮುಂದಿನ ಜನಾಂಗಕ್ಕೆ ಇದರ ಅರಿವಾಗಲಿ ಎಂಬ ಆಶಯದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೊರಾರ್ಜಿ ವಸತಿ ಶಾಲೆಯ ಚಂದ್ರಪ್ಪ ಸಂವಿಧಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಸಂವಿಧಾನ ರಕ್ಷಣೆಯ ಪ್ರತಿಜ್ಞೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಭೋದಿಸಿದರು.
ತಾಪಂ ಪ್ರಭಾರಿ ಇಒ ಎನ್.ಆರ್. ಹೆಗಡೆ, ಪಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಗ್ರಾಪಂ ಅಧ್ಯಕ್ಷೆ ಸುನಂದಾ ಮರಾಠೆ, ಉಪಾಧ್ಯಕ್ಷ ನಾಗೇಶ ಗಾವಡೆ, ತಾಪಂ ಅಧಿಕಾರಿ ಮಂಜುನಾಥ ಆಗೇರ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಶ್ರೀಕಾಂತ ದೇಲತ್ತಿ, ಹಿಂದುಳಿದ ವರ್ಗಕಳ ಕಲ್ಯಾಣಾಧಿಕಾರಿ ದಾಕ್ಷಾಯಣಿ ನಾಯ್ಕ, ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ನಿರ್ವಹಿಸಿದರು.