ಅರಸೀಕೆರೆ ಸ್ಥಳೀಯ ಇನ್ನರ್‌ವ್ಹೀಲ್‌ ಕ್ಲಬ್ ವತಿಯಿಂದ ಸಂವಿಧಾನ ದಿನವನ್ನು ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ವಕೀಲ ನಂದೀಶ್ ಹಾಗೂ ಮಹಿಳಾ ವಕೀಲ ಗೀತಾ ಅವರನ್ನು ಕ್ಲಬ್ ಅಧ್ಯಕ್ಷೆ ರಂಜಿತಾ ಗೌರವಿಸಿ ಸನ್ಮಾನಿಸಿದರು. ಸಂವಿಧಾನದ ಮೂಲಕ ಸಾಮಾನ್ಯ ಜನತೆಗೆ ನ್ಯಾಯವನ್ನು ತಲುಪಿಸುವ ಕಾರ್ಯದಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಈ ಸಂದರ್ಭದಲ್ಲಿ ಅವರು ಪ್ರಶಂಸಿಸಿದರು.

ಅರಸೀಕೆರೆ: ಸ್ಥಳೀಯ ಇನ್ನರ್‌ವ್ಹೀಲ್‌ ಕ್ಲಬ್ ವತಿಯಿಂದ ಸಂವಿಧಾನ ದಿನವನ್ನು ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ವಕೀಲ ನಂದೀಶ್ ಹಾಗೂ ಮಹಿಳಾ ವಕೀಲ ಗೀತಾ ಅವರನ್ನು ಕ್ಲಬ್ ಅಧ್ಯಕ್ಷೆ ರಂಜಿತಾ ಗೌರವಿಸಿ ಸನ್ಮಾನಿಸಿದರು. ಸಂವಿಧಾನದ ಮೂಲಕ ಸಾಮಾನ್ಯ ಜನತೆಗೆ ನ್ಯಾಯವನ್ನು ತಲುಪಿಸುವ ಕಾರ್ಯದಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಈ ಸಂದರ್ಭದಲ್ಲಿ ಅವರು ಪ್ರಶಂಸಿಸಿದರು.ಆಚರಣೆಯ ಅಂಗವಾಗಿ ಕ್ಲಬ್ ಸದಸ್ಯರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಬಾಣಂತಿ ಹಾಗೂ ಮಕ್ಕಳಿಗೆ ಹಿಮಾಲಯ ಕಿಟ್‌ಗಳನ್ನು ವಿತರಿಸಿದರು. ಅಲ್ಲದೇ ಟಿಬಿ ರೋಗಿಗಳಿಗೆ ಒಂದು ತಿಂಗಳ ಮಟ್ಟಿಗೆ ಅಗತ್ಯವಿರುವ ಅಕ್ಕಿ, ಬೆಲ್ಲ, ಬೆಳೆ, ರವೆ, ಎಣ್ಣೆ, ಕಾಳುಗಳು ಸೇರಿದಂತೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರಾದ ಲಕ್ಷ್ಮಿ, ಶ್ವೇತಾ, ಸಂಧ್ಯಾ, ಓಂಕಾರಮ್ಮ, ಹೇಮ, ಸರಸ, ಗೀತಾ ಮುಂತಾದವರು ಉಪಸ್ಥಿತಿದ್ದರು.