ಸಾರಾಂಶ
ಭಾರತ ದೇಶದಲ್ಲಿ ಸಾಮಾನ್ಯ ವ್ಯಕ್ತಿಯು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸಂವಿಧಾನ
ಕನ್ನಡಪ್ರಭ ವಾರ್ತೆ ನಂಜನಗೂಡು
ಒಂದು ರಾಷ್ಟ್ರ ಸರ್ವಾಂಗಿಯ ಅಭಿವೃದ್ಧಿ ಪಥದ ಕಡೆ ಹೋಗಬೇಕಾದರೆ ಆ ದೇಶದ ಸಂವಿಧಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ, ಹಾಗಾಗಿ ನಮ್ಮ ಸಂವಿದಾನವನ್ನು ಗೌರವಿಸುವುದು ನಮ್ಮೇಲ್ಲರ ಕರ್ತವ್ಯ ಎಂದು ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ. ರಾಮಪ್ರಸಾದ್ ಹೇಳಿದರು.ಕಾಲೇಜಿನಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯಶಾಸ್ತ್ರ ಉಪನ್ಯಾಸಕರ ಎಚ್.ಕೆ. ಸ್ವಾಮಿಗೌಡ ಅವರು ಸಂವಿಧಾನದ ಪೀಠಿಕೆ, ಹಕ್ಕುಗಳು, ಕರ್ತವ್ಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಅವರು ಭಾರತ ದೇಶದಲ್ಲಿ ಸಾಮಾನ್ಯ ವ್ಯಕ್ತಿಯು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸಂವಿಧಾನ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಮಾತನಾಡಿ, ಒಂದು ಕುಟುಂಬಕ್ಕೆ ಒಂದು ಕಾಲೇಜಿಗೆ, ಒಂದು ಕಾರ್ಖಾನೆಗೆ, ಒಂದು ಸಂಸ್ಥೆಗೆ ಯಾವ ರೀತಿಯಲ್ಲಿ ಕಾನೂನುಗಳು ಇರುತ್ತದೆಯೋ ಹಾಗೆಯೇ ಒಂದು ರಾಷ್ಟ್ರಕ್ಕೆ ಸಂವಿಧಾನ ಇರುತ್ತದೆ. ಯಾವ ರಾಷ್ಟ್ರ ಸಂವಿಧಾನ ಮತ್ತು ಕಾನೂನುಗಳನ್ನು ಕ್ರಮಬದ್ಧವಾಗಿ ಪಾಲಿಸುತ್ತದೆಯೋ ಆ ದೇಶ ಉನ್ನತ ಮಟ್ಟಕ್ಕೆ ಹೋಗುತ್ತದೆ ಎಂದು ತಿಳಿಸಿದರು.ಹಿರಿಯ ಉಪನ್ಯಾಸಕರಾದ ಅಶ್ವತ ನಾರಾಯಣಗೌಡ, ಲಿಂಗಣ್ಣ ಸ್ವಾಮಿ, ಪ್ರಕಾಶ್, ರೂಪ, ವತ್ಸಲ, ರಾಮಾನುಜ, ದಿನೇಶ್, ಹರೀಶ್ ನಾಗರಾಜು, ಮೀನಾ, ವಸಂತಕುಮಾರಿ, ಪದ್ಮಾವತಿ, ಬಸವಣ್ಣ, ಹರೀಶ್, ಚೇತನ, ನಾಗವೇಣಿ, ಸಿದ್ದಪ್ಪಾಜಿ, ನಾಗರಾಜು, ಮೋಹನ್, ಹರೀಶ್, ಬಿಂದು ಇದ್ದರು.
ಎಚ್.ಕೆ. ಸ್ವಾಮಿಗೌಡ ನಿರೂಪಿಸಿದರು, ಟಿ.ಕೆ. ರವಿ ವಂದಿಸಿದರು.