ಅಂಬೇಡ್ಕರ್ ನೀಡಿರುವ ಸಂವಿಧಾನ ಬಹಳ ಶ್ರೇಷ್ಠ

| Published : Dec 09 2024, 12:45 AM IST

ಅಂಬೇಡ್ಕರ್ ನೀಡಿರುವ ಸಂವಿಧಾನ ಬಹಳ ಶ್ರೇಷ್ಠ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ೬೮ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಬಹಳ ಶ್ರೇಷ್ಠವಾದುದು, ಅದನ್ನು ಓದಿ ಅರ್ಥಮಾಡಿಕೊಂಡು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ೬೮ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ೬೮ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ದೇಶಕ್ಕೆ ಮತ್ತು ಸರ್ವಭೌಮತೆಗೆ ಸಂವಿಧಾನವು ಬುನಾದಿಯಾಗಿದೆ. ಶ್ರೇಷ್ಠವಾದ ಸಂವಿದಾನವನ್ನು ನೀಡಿದ ಡಾ. ಅಂಬೇಡ್ಕರ್ ಅವರಿಗೆ ದೇಶದ ಜನತೆ ಚಿರರುಣಿಯಾಗಿರಬೇಕು. ಸಂವಿಧಾನವು ಸುಭದ್ರವಾಗಿದ್ದು ಅದಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ ಎಂದರು.ಪ್ರಗತಿ ಪರ ಸಂಘಟನೆ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ ಮಾತನಾಡಿ, ಬೇರೆ ದೇಶದ ಸಂವಿಧಾನಕ್ಕಿಂತ ನಮ್ಮ ದೇಶದ ಸಂವಿಧಾನವು ಬಹಳ ಉತ್ತಮವಾಗಿದೆ. ಈ ದೇಶವು ಐಕ್ಯತೆ ಮತ್ತು ಸಮಗ್ರತೆಯಿಂದ ೭೫ ವರ್ಷ ಕಳೆದರೂ ದೇಶವು ಸುಭದ್ರವಾಗಿರಲು ಡಾ. ಅಂಬೇಡ್ಕರ್ ನೀಡಿರುವ ಸಂವಿಧಾನವೇ ಮುಖ್ಯ ಕಾರಣವಾಗಿದೆ. ಸಂವಿಧಾನ ಪೀಠಿಕೆಯಲ್ಲಿ ಇಡೀ ಸಂವಿಧಾನದ ಸಾರಾಂಶ ಅಡಗಿದೆ. ಒಂದು ಅದ್ಯಯನದ ಪ್ರಕಾರ ಬೇರೆ ಬೇರೆ ದೇಶಗಳ ಸಂವಿಧಾನದ ಆಯಸ್ಸು ಸರಾಸರಿ ೧೭ ವರ್ಷಗಳಾಗಿರುತ್ತದೆ, ಆದರೆ ನಮ್ಮ ದೇಶದ ಸಂವಿಧಾನಕ್ಕೆ ೭೫ ವರ್ಷ ಕಳೆದರೂ ಅದು ಹಿಮಾಲಯ ಪರ್ವತದಂತೆ ಗಟ್ಟಿಯಾಗಿ ನಿಂತಿದೆ ಎಂದರು.ಈಶ್ವರಿ ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ಸಿ.ಎಂ. ವೆಂಕಟೇಶ್ ಮಾತನಾಡಿ, ಮಹನೀಯರ ಜನ್ಮ ದಿನಾಚರಣೆ, ಪುಣ್ಯಸ್ಮರಣೆ, ಜಯಂತಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಸಾಲು ಗಿಡಗಳನ್ನು ನೆಡುವ ಹವ್ಯಾಸಗಳನ್ನು ೯ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆ ಗಿಡಗಳು ಈಗ ಮರಗಳಾಗಿ ಉತ್ತಮ ಗಾಳಿಯನ್ನು ನೀಡುತ್ತಿದೆ. ಚಾಮರಾಜನಗರವು ಉತ್ತಮ ಗಾಳಿಯನ್ನು ನೀಡುವುದರಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಂಡಿರುವುದಕ್ಕೆ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರಿ ಸೋಶಿಯಲ್ ಟ್ರಸ್ಟ್‌ನ ಟ್ರಸ್ಟಿ ಜಯಲಕ್ಷ್ಮಿ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಹಾಯಕ ಅಭಿಯಂತರರಾದ ಸಿ.ಎಸ್.ಪ್ರವೀಣ್, ವಿಶ್ವನಾಥ್ ಪಾಟೀಲ್, ಮೇಲ್ವಿಚಾರಕರಾದ ನಂಜುಂಡಸ್ವಾಮಿ, ಬುದ್ಧಮಹೇಶ್, ರಾಮಸಮುದ್ರ ಚಲುವಮೂರ್ತಿ ಇದ್ದರು.