ನಮ್ಮ ಸಂವಿಧಾನ ದೇಶದ ನಾಗರಿಕರಿಗೆ ಭದ್ರತೆ, ಮೂಲಬೂತ ಹಕ್ಕುಗಳನ್ನು ನೀಡಿದೆ, ಶತಮಾನಗಳಿಂದ ದೇಶ ಅಸಮಾನತೆ, ಮೂಢನಂಬಿಕೆಗಳಿಂದ ಬಳಲುತ್ತಿದ್ದಾಗ ಅದನ್ನು ತೊಲಗಿಸಲು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ದಾರಿದೀಪವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಹೇಳಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ನಮ್ಮ ಸಂವಿಧಾನ ದೇಶದ ನಾಗರಿಕರಿಗೆ ಭದ್ರತೆ, ಮೂಲಬೂತ ಹಕ್ಕುಗಳನ್ನು ನೀಡಿದೆ, ಶತಮಾನಗಳಿಂದ ದೇಶ ಅಸಮಾನತೆ, ಮೂಢನಂಬಿಕೆಗಳಿಂದ ಬಳಲುತ್ತಿದ್ದಾಗ ಅದನ್ನು ತೊಲಗಿಸಲು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ದಾರಿದೀಪವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ದಾದಾಪೀರ್ ಹೇಳಿದರು.ತಾಲೂಕು ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ದಲಿತ ಪರ ಸಂಘಟನೆಗಳು, ಮಮತ ಮಹಿಳಾ ಸಮಾಜ ನೈತೃತ್ವದಲ್ಲಿ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಏರ್ಪಾಡಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರಂತಹ ಶ್ರೇಷ್ಠ ಜ್ಞಾನಿ ನಮ್ಮ ದೇಶದಲ್ಲಿ ಹುಟ್ಟಿದ್ದು ನಮ್ಮ ದೇಶದ ಸೌಭಾಗ್ಯ ಎಂದು ತಿಳಿಸಿದರು.ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ಮಾತನಾಡಿ, ದೇಶದ ಎಲ್ಲಾ ಜನರು ಸಮಾನತೆಯಿಂದ ಬದುಕುವ ಹಕ್ಕು ಸಂವಿಧಾನ ನೀಡಿದೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ಜ್ಞಾನಿ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಜಿ.ಶಶಾಂಕ ಮಾತನಾಡಿ, ಇಂದು ದೇಶದ ಏಕತೆಗೆ ಸಂವಿಧಾನ ಅವಕಾಶ ಕಲ್ಪಿಸಿದೆ, ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.ಡಿಎಸ್‌ಎಸ್ ಮುಖಂಡರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ಅನಾದಿ ಕಾಲದಿಂದಲೂ ಇದ್ದ ಅಸಮಾನತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಅಳಿಸಿ ಹಾಕಿದೆ ಎಂದು ಹೇಳಿದರು.
ಮಾಜಿ ಪುರಸಭಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಸ್ಲಾಂಖಾನ್, ಪುರಸಭೆ ಸದಸ್ಯ ಅಬ್ಬಾಸ್, ಸಾಹಿತಿ ಮನಸುಳಿ ಮೋಹನ್, ಟಿ.ಜಿ.ಸದಾನಂಗದ, ಮುಖಂಡರಾದ ರಾಜು, ಪ್ರಸನ್ನ, ಇರ್ಷಾದ್, ನಾಗೇಂದ್ರಪ್ಪ, ಲತಾ ಗೋಪಾಲಕೃಷ್ಣ, ಮಂಜುಳ ವಿಜಯಕುಮಾರ್, ಸುನಿತಾ ಕಿರಣ್, ಹುಜೈಫ್, ಜಾವಿದ್ ಪಾಶ, ಶಫೀಕ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಭೀಮಗೀತೆ, ಕ್ರಾಂತಿಗೀತೆ, ಸೌಹಾರ್ದ ಗೀತೆ, ವಚನ ಗಾಯನ ಹಾಗೂ ನುಡಿ ನಮನ ಏರ್ಪಡಿಸಲಾಗಿತ್ತು.