ತರೀಕೆರೆಭಾರತೀಯರಿಗೆ ಸಂವಿಧಾನ ರಕ್ಷಾ ಕವಚವಿದ್ದಂತೆ ಎಂದು ಮಮತಾ ಮಹಿಳಾ ಸಮಾಜ ಅಧ್ಯಕ್ಷೆ ಸಹನಾ ರಾಘವೇಂದ್ರ ಹೇಳಿದ್ದಾರೆ.

- ಮಮತಾ ಮಹಿಳಾ ಸಮಾಜದಿಂದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾರತೀಯರಿಗೆ ಸಂವಿಧಾನ ರಕ್ಷಾ ಕವಚವಿದ್ದಂತೆ ಎಂದು ಮಮತಾ ಮಹಿಳಾ ಸಮಾಜ ಅಧ್ಯಕ್ಷೆ ಸಹನಾ ರಾಘವೇಂದ್ರ ಹೇಳಿದ್ದಾರೆ.ಮಮತಾ ಮಹಿಳಾ ಸಮಾಜದಿಂದ ಏರ್ಪಾಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಲಿಖಿತ ಸಂವಿಧಾನದ ರೂವಾರಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ , ಭಾರತ ಸಾರ್ವ ಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಪ್ರಪಂಚದ ಎದುರು ನಿಂತಂತಹ ಈ ದಿನ ನಮಗೆ ಸಮಾನತೆ ಬ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ ನೀಡಿದೆ. ಮಹಾತ್ಮ ಗಾಂಧೀಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್,ಲಾಲ್ ಬಹದ್ದೂರ್ ಶಾಸ್ತ್ರಿ ಮಹಾನ್ ನಾಯಕರ ತ್ಯಾಗದ ಫಲವಾಗಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತಿದ್ದೇವೆ. ಗಡಿಯಲ್ಲಿ ಮಳೆ ಚಳಿ ಬಿಸಿಲು ಎನ್ನದೇ ದೇಶ ಕಾಯುತ್ತಿರುವ ಯೋಧರಿಗೆ ಗೌರವ ಸಲ್ಲಿಸಿ ವೈವಿಧ್ಯತೆಯಲ್ಲಿ ಏಕತೆ ಸಾರುವ ನಮ್ಮ ಭಾರತ ಸದಾ ವಿಜೃಂಭಿಸಲಿ ಎಂದು ಹೇಳಿದರು.

ಉಮಾ ಪ್ರಕಾಶ್ ಸಂವಿಧಾನ ಕುರಿತು ಮಾತನಾಡಿ ಭಾರತದ ಜನತೆಯಾದ ನಾವು ಭಾರತವನ್ನು ಸಾರ್ವಭೌಮ ಸಮಾಜ ವಾದಿ ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕೆ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ದೊರೆಯುವಂತೆ ಮಾಡುವುದಕ್ಕಾಗಿ ಸಂವಿಧಾನವನ್ನು ವಾವೆಲ್ಲರೂ ಓದಿ ಅರ್ಥೈಸಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಸದಸ್ಯರೆಲ್ಲರೂ ಸೇರಿ ಝಂಡಾ ಉಂಚಾ ರಹೇ ಹಮಾರ, ವಿಶ್ವ ವಿನೂತನ ವಿದ್ಯಾ ಚೇತನ, ವಂದೇ ಮಾತರಂ ದೇಶಭಕ್ತಿ ಗೀತೆ ಹಾಡಿದರು. ಕಾರ್ಯದರ್ಶಿಗಳಾದ ರೇಣು ನವೀನ್, ಉಮಾ ದಯಾನಂದ್, ವಿಜಯ ಪ್ರಕಾಶ್, ಶಾಮಲಾ ಮಂಜುನಾಥ್, ಕಮಿಟಿ ಸದಸ್ಯರಾದ ರಶ್ಮಿ ರಮೇಶ್, ಜ್ಯೋತಿ ನಾಗರಾಜ್, ರೂಪಾ ಕೃಷ್ಣಮೂರ್ತಿ, ಹೇಮಾ ಉಮೇಶ್, ಲಕ್ಷ್ಮಿ ಮಧುಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

-26ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಮಮತ ಮಹಿಳಾ ಸಮಾಜದಿಂದ ನಡೆದ 77ನೇ ಗಣರಾಜ್ಯೋತ್ಸವದಲ್ಲಿ ಮಮತಾ ಮಹಿಳಾ ಸಮಾಜ ಅಧ್ಯಕ್ಷೆ ಸಹನ ರಾಘವೇಂದ್ರ ಧ್ವಜಾರೋಹಣ ನೆರವೇರಿಸಿದರು.