ಸಾರಾಂಶ
ಕಳೆದ 75 ವರ್ಷಗಳಿಂದ ಈ ದೇಶ ಅತ್ಯಂತ ಸುಭದ್ರವಾಗಿದೆ ಎಂದರೆ ಅದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಮೂಲ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ವಾಡಿ
1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಭಾರತ ದೇಶವನ್ನು ವ್ಯವಸ್ಥಿತವಾಗಿ ಇಲ್ಲಿನ ಜಾತಿ, ಧರ್ಮ, ಭಾಷೆಗಳನ್ನು ಒಗ್ಗಟ್ಟಿನಿಂದ ಮುನ್ನಡೆಸಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಬುನಾದಿಯಾಗಿದೆ ಎಂದು ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲಕ ಉದಯ ಧರಣ್ಣನವರ್ ಹೇಳಿದರು.ಪಟ್ಟಣದ ಹೊರ ವಲಯದ ನ್ಯೂಟೌನ್ ಪ್ರದೇಶದಲ್ಲಿರುವ ಡಾ,ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಳೆದ 75 ವರ್ಷಗಳಿಂದ ಈ ದೇಶ ಅತ್ಯಂತ ಸುಭದ್ರವಾಗಿದೆ ಎಂದರೆ ಅದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಮೂಲ ಕಾರಣವಾಗಿದೆ. ಮೂಲಭೂತ ಹಕ್ಕುಗಳ ಕರ್ತವ್ಯಗಳು ಇಲ್ಲಿನ ಶಿಕ್ಷಣ ನೀತಿ ಆಡಳಿತ ವ್ಯವಸ್ಥೆ ಕಾರ್‍ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ನಡೆದುಕೊಳ್ಳುವ ರೀತಿಯ ಬಗ್ಗೆ ಸಂವಿಧಾನದಲ್ಲಿ ಸಮಗ್ರವಾಗಿ ವಿವರಿಸಲಾಗಿದೆ. ಸಂವಿಧಾನದ ಆದರದಲ್ಲಿ ಹಾಗೂ ಸಂವಿಧಾನದಲ್ಲಿ ನಂಬಿಕೆ ಇಟ್ಟು ನಡೆದರೆ ದೇಶ ಮತ್ತಷ್ಟು ಸುಭಿಕ್ಷವಾಗಿ ಯಾವುದೇ ಸಮಸ್ಯೆಗಳಿಲ್ಲದೆ ಮುನ್ನಡೆಯುತ್ತದೆ ಎಂದರು.ವಸತಿ ನಿಲಯದ ನಿಲಯ ಪಾಲಕ ನಾಗೇಪ್ಪ ಪೂಜಾರಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲಕಿ ಕರುಣಾದೇವಿ ಗೊಡಬುಲೆ, ಮುರಾಜಿ ವಸತಿ ಸಾಲೆಯ ಪ್ರಾಂಶುಪಾಲಕ ಶಂಕರ ರಾಠೋಡ, ಪ್ರಥಮ ದರ್ಜೆ ಸಹಾಯಕಿ ಸಬಾಸುಲ್ತಾನ್, ದೈಹಿಕ ಶಿಕ್ಷಕ ಶ್ರೀನಾಥ ಹಿರಗುಂಡ, ಶಿಕ್ಷಕರಾದ ರಮೆಶ ಕೆ.ಎನ್, ರಾಜು ಪಟೀಲ, ಸಿದ್ದಲಿಂಗ, ಸಿದ್ರಾಮ, ಸಿದ್ರಾಮ್ ಆರ್.ಆರ್, ಅಂಬಿಕಾ, ಸುಚ್ಚಿತಾ ರಾಠೋಡ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.