ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಂವಿಧಾನ ಕಾರಣ: ಸಂಸದ ಬೊಮ್ಮಾಯಿ

| Published : Jan 27 2025, 12:45 AM IST

ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಸಂವಿಧಾನ ಕಾರಣ: ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಪ್ರಜಾಪಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ: ಭಾರತದಲ್ಲಿ ಪ್ರಜಾಪಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಅಶೋಕನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲೆ ನಂ.13ರ ಮಕ್ಕಳಿಗೆ ನೋಟ್‌ಬುಕ್‌ ಹಾಗೂ ಪೆನ್‌ ವಿತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಮಗೆ ಸ್ವಾತಂತ್ರೋತ್ಸವ ಎಷ್ಟು ಮುಖ್ಯವೋ ಗಣರಾಜ್ಯೋತ್ಸವವೂ ಅಷ್ಟೇ ಮುಖ್ಯ. ನಮ್ಮಷ್ಟಕ್ಕೆ ನಾವೇ ಗಣರಾಜ್ಯವನ್ನು ಒಪ್ಪಿಕೊಂಡಿದ್ದೇವೆ. ಸಂವಿಧಾನ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದೆ. ನಮ್ಮ ದೇಶದೊಂದಿಗೆ 19 ದೇಶಗಳು ಸ್ವಾತಂತ್ರ್ಯವಾಗಿದ್ದವು. ಅಲ್ಲಿ ಎಲ್ಲಿಯೂ ಪ್ರಜಾಪ್ರಭುತ್ವ ಉಳಿದಿಲ್ಲ. ಆದರೆ, ಭಾರತದಲ್ಲಿ ಮಾತ್ರ ಪ್ರಜಾಪಭುತ್ವ ಉಳಿದಿದೆ. ಇದಕ್ಕೆ ಭಾರತೀಯರು ಪ್ರಜಾಪ್ರಭುತ್ವದ ಮೇಲೆ ಇಟ್ಟಿರುವ ನಂಬಿಕೆ ಕಾರಣ ಎಂದು ಹೇಳಿದರು.

ಸಂವಿಧಾನ ರಕ್ಷಣೆಗೆ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವ ಮಾತಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ರಕ್ಷಣೆಗೆ 1975ರಲ್ಲಿ ಕಾಂಗ್ರೆಸ್‌ನವರು ಸಂವಿಧಾನ ಮೊಟಕುಗೊಳಿಸಿದಾಗ ಜಯ ಪ್ರಕಾಶ ನಾರಾಯಣ ಅವರು ಸಂಪೂರ್ಣ ಕ್ರಾಂತಿ ಘೋಷಣೆ ಮಾಡಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದಿದೆ. ಆ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ತ ರಕ್ಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಮರೆವು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು. ಪ್ರತಿಯೊಬ್ಬರೂ ಸಂವಿಧಾನದ ಆಶಯ ಉಳಿಸೋಣ

ಕುಂದಗೋಳ: ಜಾತಿ, ಮತ, ಪಂಥ, ಪ್ರದೇಶಗಳನ್ನು ಒಟ್ಟುಗೂಡಿಸಿದ ನಮ್ಮ ಪೂರ್ವಜರ ಪರಿಶ್ರಮವನ್ನು ವ್ಯರ್ಥಗೊಳಿಸದೆ, ನಾವೆಲ್ಲರೂ ಸೇರಿ ಸಂವಿಧಾನದ ಆಶಯ ಉಳಿಸುವ ಪಣತೊಡೋಣ ಎಂದು ತಹಸೀಲ್ದಾರ್‌ ರಾಜು ಮಾವರಕರ ಹೇಳಿದರು.ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶಾಸಕ ಎಂ.ಆರ್. ಪಾಟೀಲ ಮಾತನಾಡಿ. ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧೀಜಿ, ಸರ್ದಾರ್‌ ವಲ್ಲಭಬಾಯಿ ಪಟೇಲ್, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಹೀಗೆ ಅನೇಕ ಮಹಾನಿಯರ ತ್ಯಾಗ, ಬಲಿದಾನದ ಮೂಲಕ ದೇಶಕ್ಕೆ ಸ್ವತಂತ್ರ್ಯ ದೊರತಿದೆ. ಅವರ ಶ್ರಮಕ್ಕೆ ಸಾರ್ಥಕತೆ ತಂದುಕೊಡಲು ನಾವೆಲ್ಲರೂ ಶ್ರಮಿಸೋಣ ಎಂದರು. ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಅರವಿಂದ ಕಟಗಿ, ಗೌಡಪ್ಪಗೌಡ ಪಾಟೀಲ, ಕಲ್ಲಪ್ಪ ಹರಕುಣಿ, ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ಗಣೇಶ ಕೊಕಾಟೆ, ಮಲ್ಲಿಕಾರ್ಜುನ ಕಿರೇಸೂರ, ಬಸವರಾಜ ಗಂಗಾಯಿ, ಮಲ್ಲಿಕ್ ಶಿರೂರ, ದಿಲೀಪ ಕಲಾಲ, ಪರಮೇಶಪ್ಪ ನಾಯ್ಕರ, ಮಾಣಿಕ್ಯ ಚಿಲ್ಲೂರ ಸೇರಿದಂತೆ ಹಲವರಿದ್ದರು.