ವಿಶ್ವದ ಉಳಿದೆಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತ ಭಾರತದ ಸಂವಿಧಾನ ವಿಶೇಷತೆ ಹೊಂದಿದೆ: ಆರ್. ನಯೀಂಉನ್ನೀಸಾ

| Published : Jan 27 2024, 01:19 AM IST

ವಿಶ್ವದ ಉಳಿದೆಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತ ಭಾರತದ ಸಂವಿಧಾನ ವಿಶೇಷತೆ ಹೊಂದಿದೆ: ಆರ್. ನಯೀಂಉನ್ನೀಸಾ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಯು ಸಮಾನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಸುವ್ಯವಸ್ಥಿತ ಕಾನೂನು ರೂಪಿಸಿದ ತರುವಾಯ ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪ್ರತಿಯೊಬ್ಬರಿಗೂ ಎಲ್ಲ ರೀತಿಯ ಸಮಾನತೆಯನ್ನು ನಮ್ಮ ಸಂವಿಧಾನ ಕಲ್ಪಿಸಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಶ್ವದ ಉಳಿದೆಲ್ಲಾ ರಾಷ್ಟ್ರಗಳ ಸಂವಿಧಾನಕ್ಕಿಂತ ಭಾರತದ ಸಂವಿಧಾನ ವಿಶೇಷತೆ ಹೊಂದಿದೆ ಎಂದು ತಹಸೀಲ್ದಾರ್ ಆರ್.ನಯೀಂಉನ್ನೀಸಾ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಯು ಸಮಾನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಸುವ್ಯವಸ್ಥಿತ ಕಾನೂನು ರೂಪಿಸಿದ ತರುವಾಯ ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ನೀಲಾ ಮೂರ್ತಿ ಮಾತನಾಡಿ, ದೇಶದಲ್ಲಿ ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪ್ರತಿಯೊಬ್ಬರಿಗೂ ಎಲ್ಲ ರೀತಿಯ ಸಮಾನತೆಯನ್ನು ನಮ್ಮ ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಮಂದಿ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇದಕ್ಕೂ ಮುನ್ನ ವಿವಿಧ ಶಾಲಾ ಮಕ್ಕಳು ಪಥಸಂಚಲನ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಡಿವೈಎಸ್ಪಿ ಎಚ್.ಲಕ್ಷ್ಮೀನಾರಾಯಣಪ್ರಸಾದ್, ತಾಪಂ ಇಒ ಚಂದ್ರಮೌಳಿ, ಬಿಇಒ ಎಚ್.ಜಿ.ಸುರೇಶ್, ಸಿಪಿಐ ನಿರಂಜನ್, ಸಿಡಿಪಿಒ ಕೃಷ್ಣಮೂರ್ತಿ, ಜಿಲ್ಲಾ ದಸಂಸ ಮುಖಂಡ ಎಂ.ನಾಗರಾಜಯ್ಯ, ತಾಲೂಕು ಕಸಾಪ ಅಧ್ಯಕ್ಷ ಬಸವೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಇದ್ದರು.

ತಾಲೂಕಿನ ಹಲವೆಡೆ ಗಣರಾಜ್ಯೋತ್ಸವ:

ಪಟ್ಟಣದ ತಾಪಂ ಕಚೇರಿ, ಪುರಸಭೆ, ನ್ಯಾಯಾಲಯ ಸೇರಿದಂತೆ ತಾಲೂಕಿನ ಬಿಂಡಿಗನವಿಲೆ, ಬೆಳ್ಳೂರು, ದೇವಲಾಪುರ, ಹೊಣಕೆರೆ ಹೋಬಳಿ ಕೇಂದ್ರಗಳ ಮತ್ತು ತಾಲೂಕಿನಾದ್ಯಂತ ಎಲ್ಲ ಶಾಲಾ ಕಾಲೇಜು, ಗ್ರಾಪಂ ಕಚೇರಿಗಳಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಬಿಜಿಎಸ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಂಭ್ರಮನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ ಎಂದು ಸಾರುವುದು ಗಣರಾಜ್ಯೋತ್ಸವದ ಸಾರಾಂಶವಾಗಿದೆ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಮೂಲಭೂತ ಹಕ್ಕು, ಧಾರ್ಮಿಕ ಹಕ್ಕುಗಳೆಲ್ಲವೂ ಸಿಕ್ಕಿವೆ ಎಂದರು.ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಿ ಅದರಲ್ಲಿರುವ ನಿಯಮ ಅನುಸರಿಸಬೇಕು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ ಮತ್ತು ಭಾತೃತ್ವ ನಮ್ಮ ಸಂವಿಧಾನದಲ್ಲಿರುವ ಐದು ಮೌಲ್ಯಗಳು ಎಂದರು.ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರ ಲಕ್ಷ್ಮೀನಾರಾಯಣ, ಎಸ್‌ಜಿಎಫ್‌ಐ ಅಧಿಕಾರಿ ಶ್ರೀಧರ್, ಪಂಕಜ್‌ಕುಮಾರ್ ದಿವೇದಿ, ಕರ್ನಾಟಕ ನಿಯೋಜನ ಸೇವಾ ಇಲಾಖೆಯ ಕಬಡ್ಡಿ ತರಬೇತಿದಾರ ಮಂಜುನಾಥ್ ಸೇರಿದಂತೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳಿದ್ದರು.