ಸಾರಾಂಶ
ಗ್ರಾಮ ಪಂಚಾಯಿತಿ ಅಧ್ಯಕ್ಷೆ । ಬಾಣಾವರದಲ್ಲಿ 75ನೇ ಗಣರಾಜ್ಯೋತ್ಸವಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಬಾಣಾವರದ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀಣಾ ಸುರೇಶ್, ಇಂದು 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಈ ಆಚರಣೆಯ ಹಿಂದೆ ಹಲವಾರು ಮಹನೀಯರ ತ್ಯಾಗ ಬಲಿದಾನವಿದೆ ಅವರ ತ್ಯಾಗ ಬಲಿದಾನ ಹಾಗೂ ಪರಿಶ್ರಮವನ್ನು ಅತ್ಯಂತ ಗೌರವಪೂರ್ಣವಾಗಿ ನಾವು ಕಾಪಾಡಿಕೊಂಡು ಹೋಗುವುದರ ಜೊತೆಗೆ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಪ್ರತಿಯೊಬ್ಬ ನಾಗರಿಕನು ಸಹ ಇಂದು ದೇಶದಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಪಡೆಯಲು ಅರ್ಹನಾಗಿದ್ದು ಎಲ್ಲಾ ರೀತಿಯ ಸ್ವತಂತ್ರವನ್ನು ಪಡೆಯಲು ಸಹ ಪ್ರತಿಯೊಬ್ಬರಿಗೂ ಸಮಾನತೆ ಇದೆ. ಇಂತಹ ಸಂವಿಧಾನವನ್ನು ನಾವು ಗೌರವಿಸುವುದರ ಜೊತೆಗೆ ದೇಶದ ಕಾನೂನು ಕಟ್ಟಳೆಗಳನ್ನು ಗೌರವಿಸಿ ಭಾರತ ದೇಶದ ಇತಿಹಾಸವನ್ನು ಯುವಜನತೆ ತಿಳಿದುಕೊಂಡು ದೇಶದ ಕಾನೂನು ಕಟ್ಟಡಗಳನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಸಿ ಶ್ರೀನಿವಾಸ್, ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ಮಹಾನ್ ರಾಷ್ಟ್ರವಾಗಿದ್ದು ಭಾರತ ಸಂವಿಧಾನ ಪ್ರಪಂಚದ ಅತ್ಯಂತ ದೊಡ್ಡ ಹಾಗೂ ಬಲಿಷ್ಠ ಸಂವಿಧಾನವಾಗಿದೆ. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಹ ಸಮಾನತೆ ಹಾಗೂ ಸಮ ಬಾಳು ನೀಡಲಾಗಿದೆ. ಅಲ್ಲದೆ ಸಂವಿಧಾನದಲ್ಲಿ ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಮನುಷ್ಯನು ಸಹ ಸಮಾನನಾಗಿದ್ದು ಇಲ್ಲಿ ಯಾರು ಮೇಲು ಕೀಳು ಎಂಬ ಬೇದಭಾವವಿಲ್ಲ ಭಾರತದ ಇತಿಹಾಸ ಹಾಗೂ ಸ್ವಾತಂತ್ರ ಹೋರಾಟದ ಚಳವಳಿಗಳ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು. ಅಲ್ಲದೆ ನಮ್ಮ ಭಾರತ ದೇಶವು ಗಣತಂತ್ರವಾಗಿ ಇಂದಿಗೆ 75 ವಸಂತಗಳು ಕಳೆದಿವೆ ಎಂದರುಗ್ರಾಮ ಪಂಚಾಯಿತಿ ಸದಸ್ಯ ಬಿ ಆರ್ ಶ್ರೀಧರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ತೆಂಗು ಅಭಿವೃದ್ಧಿ ನಿಗಮದ ಸದಸ್ಯ ಬಿ.ಆರ್.ಜಯಣ್ಣ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೇತ್ರಾವತಿ ಮಂಜುನಾಥ್, ಬಗರ್ ಹುಕುಂ ಕಮಿಟಿಯ ಸದಸ್ಯ ಬಿ ಎಂ ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ದಿವ್ಯ, ಸಿಜು ಸಂಜಯ್ ಸರಸ್ವತಿ ಶ್ರೀನಿವಾಸ್, ಭಾಗ್ಯಮ್ಮ, ಆಶಾ ಹರೀಶ್, ವೀಣಾ ವಿಶ್ವನಾಥ್, ಗೀತಾ ಕೃಷ್ಣಮೂರ್ತಿ, ಮುಸ್ಲಿಂ ಸಮಾಜದ ಅಧ್ಯಕ್ಷರಾದ ರಹೀಂ ಸಾಬ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೋಲಿಸ್ ಇಲಾಖೆ ಹೋಂ ಗಾರ್ಡ್ ಹಾಗೂ ಎಲ್ಲಾ ಶಾಲಾ ವಿದ್ಯಾರ್ಥಿಗಳಿಂದ ಪತಸಂಚಲನವನ್ನು ಏರ್ಪಡಿಸಲಾಗಿತ್ತು.ಬಾಣಾವರದ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.