ಬಿಜೆಪಿಯಿಂದ ಸಂವಿಧಾನದ ಆಶಯ ಸಾಕಾರ

| Published : Sep 09 2024, 01:30 AM IST

ಸಾರಾಂಶ

ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸುತ್ತಿರುವ ಮೋದಿಯವರ ಜತೆ ಇಡೀ ರಾಷ್ಟ್ರದ ಜನತೆ ನಿಲ್ಲಬೇಕಾಗಿದೆ

ಗದಗ: ರಾಷ್ಟ್ರದ ಹಿತವನ್ನೇ ತನ್ನ ಧ್ಯೇಯವಾಗಿಸಿಕೊಂಡಿರುವ ಬಿಜೆಪಿ ಯಾವುದೇ ಜಾತಿ, ಮತ, ಪಂಥ, ಧರ್ಮ ಬೇಧಭಾವವಿಲ್ಲದೆ ಎಲ್ಲ ವರ್ಗದ ಜನರನ್ನ ಮುಖ್ಯವಾಹಿನಿಗೆ ತರುವ ಮೂಲಕ ಸಂವಿಧಾನದ ಮೂಲ ಆಶಯ ಸಾಕಾರಗೊಳಿಸುತ್ತಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೊಬ್ಬ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ, ಪ್ರಧಾನಿ ಆಗಬಹುದಾದ ನಿಜವಾದ ಕಾರ್ಯಕರ್ತರ ಪಕ್ಷ ಅಂದರೆ ಅದು ಬಿಜೆಪಿ. ಪಜಾ, ಪಪಂ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಇತರೆ ಸಮುದಾಯದ ಜನರನ್ನು ಗುರುತಿಸಿ ಶಾಸಕ,ಸಂಸದ, ಮಂತ್ರಿ ಮುಖ್ಯಮಂತ್ರಿ ರಾಜ್ಯ ಸಭಾ ಸದಸ್ಯ, ರಾಷ್ಟ್ರಪತಿ ಹುದ್ದೆಯವರೆಗೂ ಅವಕಾಶ ಒದಗಿಸುವ ಮೂಲಕ ಪ್ರಜಾಪ್ರಭುತ್ವ ನೀತಿ ಎತ್ತಿ ಹಿಡಿಯುವ ಬಿಜೆಪಿ ಜಗತ್ತಿನ ಬಹು ದೊಡ್ಡ ರಾಜಕೀಯ ಪಕ್ಷವಾಗಿದೆ. ಕಾರಣ ಜಿಲ್ಲೆಯ ಜನತೆ 8800002024 ನಂಬರ್ ಗೆ ಮಿಸ್ ಕಾಲ್ ಮಾಡುವ ಮುಖಾಂತರ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯನ್ನಾಗಿ ರೂಪಿಸುತ್ತಿರುವ ಮೋದಿಯವರ ಜತೆ ಇಡೀ ರಾಷ್ಟ್ರದ ಜನತೆ ನಿಲ್ಲಬೇಕಾಗಿದೆ ಮತ್ತು ಕಾರ್ಯಕರ್ತರು ಹೆಚ್ಚು ಹೆಚ್ಚು ಸದಸ್ಯರನ್ನ ಬಿಜೆಪಿ ಜತೆ ಜೋಡಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.

ರೈತನಿಗೆ ಸದಸ್ಯತ್ವ:ನಗರದ ರಾಚೋಟೇಶ್ವರ ದೇವಾಲಯ ಹತ್ತಿರ ಶಾಸಕ ಸಿ.ಸಿ. ಪಾಟೀಲ, ರೈತರೊಬ್ಬರ ಸದಸ್ಯತ್ವ ಮಾಡುವ ಮೂಲಕ ಮನೆ ಮನೆಗೆ ಭೇಟಿ ಅಭಿಯಾನಕ್ಕೆ ಚಾಲನೆ ಕೊಟ್ಟರು.

ಈ ವೇಳೆ ಅಭಿಯಾನದ ಜಿಲ್ಲಾ ಸಂಚಾಲಕ ಲಿಂಗರಾಜ ಪಾಟೀಲ ಮಲ್ಲಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿದರು.

ಮುಖಂಡರಾದ ಎಂ.ಎಸ್. ಕರಿಗೌಡ್ರ, ಡಾ.ಶೇಖರ ಸಜ್ಜನರ, ಅನಿಲ ಅಬ್ಬಿಗೇರಿ, ಎಂ.ಎಂ. ಹಿರೇಮಠ, ವಿನಾಯಕ ಮಾನ್ವಿ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಹೇಮಗಿರೀಶ್ ಹಾವಿನಾಳ, ರವಿ ಕರಿಗಾರ, ಸೋಮೇಶ ಉಪನಾಳ, ನಾಗರಾಜ ಕುಲಕರ್ಣಿ, ಸಿದ್ದು ಪಲ್ಲೇದ, ಜಗನ್ನಾತಸಾ ಬಾಂಡಗೆ, ಬಸವಣ್ಣೆಪ್ಪ ಚಿಂಚಲಿ, ಬಿ.ಎಚ್. ಲದ್ವಾ, ರಾಘವೇಂದ್ರ ಯಳವತ್ತಿ, ಚಂದ್ರು ತಡಸದ, ಮಂಜುನಾಥ ಮುಳಗುಂದ, ಆರ್.ಕೆ.ಚವ್ಹಾಣ್, ಪಕ್ಕಿರೇಶ್ ರಟ್ಟೀಹಳ್ಳಿ ಇದ್ದರು.