ಸಾರಾಂಶ
ಬಿಎಸ್ಪಿ ವರಿಷ್ಠೆ ಮಾಯಾವತಿ ಅವರ 68ನೇ ಹುಟ್ಟುಹಬ್ಬ । ‘ಜನಕಲ್ಯಾಣ ದಿನ’ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಬೇಲೂರು
ಸಂವಿಧಾನ ಜಾರಿಯಾಗಿ 74 ವರ್ಷಗಳು ಕಳೆದಿದ್ದರೂ ಸಂವಿಧಾನದ ಆಶಯಗಳು ಪರಿಪೂರ್ಣವಾಗಿಲ್ಲ ಎಂದು ಬಹುಜನ ಸಮಾಜ ಪಾರ್ಟಿಯು ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಬೇಸರ ವ್ಯಕ್ತಪಡಿಸಿದರು.ಬಹುಜನ ಸಮಾಜ ಪಾರ್ಟಿಯ ಬೇಲೂರು ವಿಧಾನಸಭಾ ಕ್ಷೇತ್ರ ಸಮಿತಿಯ ಆಯೋಜಿಸಿದ್ದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿಯವರ 68ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಜನಕಲ್ಯಾಣ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶಕ್ಕೆ ಸಂವಿಧಾನ ಕೊಡುಗೆ ನೀಡಿ, ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕಾರಣರಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಸ್ವಾತಂತ್ರ್ಯ ಭಾರತದಲ್ಲಿ ಜರುಗಿದ ಯಾವ ಚುನಾವಣೆಯಲ್ಲಿ ಅಂಬೇಡ್ಕರ್ ಗೆಲ್ಲದಂತೆ ಪಿತೂರಿ ಮಾಡಿ ಸೋಲಿಸಿದ ಮನುವಾದಿಗಳು ಇಂದು ಅದೇ ಕುತಂತ್ರಗಳನ್ನು ಬಳಸಿ ಮಾಯಾವತಿವರಿಗೆ ಅಧಿಕಾರ ಸಿಗದಂತೆ ಮಾಡಲಾಗುತ್ತಿದೆ. ಮನುವಾದಿಗಳ ಈ ಪಿತೂರಿಯನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು. ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಾರ್ಟಿಯನ್ನು ಬೆಂಬಲಿಸದಿದ್ದರೆ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅರ್ಥಹೀನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ತನ್ನ ಜೀವನವಿಡೀ ಈ ದೇಶದ ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಸ್ವತಂತ್ರ ರಾಜ್ಯಾಧಿಕಾರ ಪಡೆದುಕೊಂಡು ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ ಬದುಕುವ ಅವಕಾಶಗಳನ್ನು ಸೃಷ್ಟಿಸಿಲು ಶ್ರಮಿಸುತ್ತಿರುವ ಬಹುಜನರ ಅಧಿನಾಯಕಿ ಅಕ್ಕಾ ಮಾಯಾವತಿಯವರ ಬೆಂಬಲಿಸದಿದ್ದರೆ ನಮ್ಮಂತಹ ನತದೃಷ್ಟರು ಈ ದೇಶದಲ್ಲಿ ಯಾರು ಇಲ್ಲ’ ಎಂದರು.ಶೋಷಿತ ಸಮುದಾಯಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ನಿರ್ಲಕ್ಷ್ಯಿತ ಸಮುದಾಯಗಳು ಸ್ವಾಭಿಮಾನದಿಂದ ತಮ್ಮ ಮತ ಚಲಾಯಿಸಿ ಜನಪರ ಸರ್ಕಾರ ಅಸ್ತಿತ್ವಕ್ಕೆ ತಂದು ಸಂವಿಧಾನ ಸಂಪೂರ್ಣವಾಗಿ ಜಾರಿ ಮಾಡಿ ಎಲ್ಲರಿಗೂ ಸಮಾನವಾದಂತಹ ಹಕ್ಕು ಅವಕಾಶಗಳನ್ನು ಕಲ್ಪಿಸಿ ಈ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ತಾಲೂಕು ಅಧ್ಯಕ್ಷ ಪ್ರಕಾಶ್ ಕೆಸಗೋಡು, ತಾಲೂಕು ಸಂಯೋಜಕ ಉಮೇಶ್, ಉಪಾಧ್ಯಕ್ಷ ನಿಂಗರಾಜು ಪ್ರಧಾನ ಕಾರ್ಯದರ್ಶಿ ಮಂಜುನಾಥ ವಕೀಲರಾದ ರಾಜೇಶ್, ತಾಲೂಕು ಬಿವಿಎಫ್ ಸಂಯೋಜಕ ಯೋಗೀಶ್, ಕಚೇರಿ ಕಾರ್ಯದರ್ಶಿ ಶ್ರೀನಾಥ್, ತಾಲೂಕು ಮುಖಂಡರಾದ ನೀಲಾವತಿ ಬಹುಜನ್, ಕವಿತಾ, ಭಾಗ್ಯಮ್ಮ, ರಂಗನಾಥ್, ಪರಮೇಶ್ , ಹೊನ್ನಯ್ಯ, ಕೇಶವಯ್ಯ, ಮಹೇಶ್, ಧರ್ಮೇಶ್, ಕಾಂತರಾಜು, ತ್ಯಾಗರಾಜ, ಹೇಮಂತ್, ತಿಮ್ಮಯ್ಯ,ಕಲ್ಲೇಶ್, ಸುನಿಲ್, ತೇಜ್ ಪಾಲ್ ಇದ್ದರು. ಬಹುಜನ ಸಮಾಜ ಪಾರ್ಟಿಯ ಬೇಲೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಮಾಯಾವತಿಯವರ 68 ನೇ ಹುಟ್ಟುಹಬ್ಬ ಆಯೋಜಿಸಲಾಯಿತು.