ಚನ್ನಪಟ್ಟಣ: ಪಟ್ಟಣದ ೨೫ ವಾರ್ಡಿನ ಇಸ್ಲಾಂಪುರ ಮೊಹಲ್ಲಾದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ನಗರಸಭಾ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಗುದ್ದಲಿಪೂಜೆ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ವರ್, ನಗರ ಪ್ರದೇಶದಲ್ಲಿ ಅಂಗನವಾಡಿಗಳ ಕೊರತೆ ಇರುವುದನ್ನು ಮನಗೊಂಡು ನಗರಸಭಾ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ 8 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುವುದು. ನಗರ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.

ನಗರದ ಪೆಟ್ಟಾ ಮೈದಾನದಲ್ಲಿ ೫ ಕೋಟಿ ಅನುದಾನದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಅಲ್ಲದೆ ಖಾಸಗಿ ಬಸ್ ನಿಲ್ದಾಣದ ವಿಚಾರವಾಗಿ ಗುತ್ತಿಗೆದಾರರನ್ನು ಕರೆಸಿಮಾತನಾಡಿ ಒಪ್ಪಿಸಿ ಬಸ್ ಸ್ಟಾಂಡ್‌ಗೆ ಶೀಘ್ರವಾಗಿ. ಚಾಲನೆ ನೀಡಲು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ನಗರವ್ಯಾಪ್ತಿಯಲ್ಲಿ ಯಾವ ಯಾವ ವಾರ್ಡ್‌ಗಳಲ್ಲಿ ಅವಶ್ಯಕವಾಗಿ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿ ಮಾಡಿ ಸಿಎಂ ಡಿಕೆ ಶಿವಕುಮಾರ್ ಅವರಲ್ಲಿ ಅನುದಾನಕ್ಕೆ ಮನವಿ ಮಾಡಲಾಗುವುದೆಂದು ತಿಳಿಸಿದರು.

ಇದೇ ವೇಳೆ ನಗರಸಭಾವ್ಯಾಪ್ತಿಯ ೨೧ನೇ ವಾರ್ಡಿನ ರೆಡ್ಡಿಗಳ ಬೀದಿ ಯಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ಕಟ್ಟಡದ ನಿರ್ಮಾಣ, ಮತ್ತು ೨೧ನೇ ವಾರ್ಡಿನ ಸುಣ್ಣದಗೇರಿಯಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ೭ ಮತ್ತು ೮ ಹಾಗೂ ೯ನೇ ವಾರ್ಡಿನ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ಸಿ.ಸಿ.ರಸ್ತೆ ಮತ್ತು ಸಿ.ಸಿ.ಚರಂಡಿ ಕಟ್ಟಡದ ನಿರ್ಮಾಣಕ್ಕೆ ಸಿ.ಪಿ.ಯೋಗೇಶ್ವರ್ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಗುದ್ದಲಿಪೂಜೆ ನೆರವೇರಿಸಿದರು.


ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್, ಉಪಾಧ್ಯಕ್ಷ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮಾಲ, ಸದಸ್ಯರಾದ ಸಾಬಿರ್, ತೌಸಿಫ್, ಮತೀನ್, ಕಮಲರಾಮು, ಸರ್ವಮಂಗಳ ಲೋಕೇಶ್, ಮುಖಂಡರಾದ ಭಾವನಾ, ರವಿ, ನವೀನ, ರಾಂಪುರ ಮಲವೆಗೌಡ, ಬೋರ್‌ವೆಲ್ ರಂಗನಾಥ್, ಮುನಾವರ್, ಪೌರಾಯುಕ್ತ ಮಹೇಂದ್ರ ಇತರರಿದ್ದರು.

ಪೊಟೋ೧೭ಸಿಪಿಟಿ೧:

ಚನ್ನಪಟ್ಟಣದ ೨೫ ವಾರ್ಡಿನ ಇಸ್ಲಾಂಪುರ ಮೊಹಲ್ಲಾದಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ.ಸಿ.ಪಿ.ಯೋಗೇಶ್ವರ್ ಗುದ್ದಲಿಪೂಜೆ ನೆರೆವೇರಿಸಿದರು.