ಸಾರಾಂಶ
ಕೊಡಗಿನ ಮೂಲ ನಿವಾಸಿ ಕೊಡವ ಭಾಷಿಕ ಕೊಯವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಒದಗಿಸಬೇಕೆಂದು ಕೋರಿ ಕೊಯವ ಸಮಾಜದ ಆಡಳಿತ ಮಂಡಳಿಯ ನಿಯೋಗ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಮೂಲ ನಿವಾಸಿ ಕೊಡವ ಭಾಷಿಕ ಕೊಯವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ಒದಗಿಸಬೇಕೆಂದು ಕೋರಿ ಕೊಯವ ಸಮಾಜದ ಆಡಳಿತ ಮಂಡಳಿಯ ನಿಯೋಗ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.ಶುಕ್ರವಾರ ಶಾಸಕರ ಸೋಮವಾರಪೇಟೆಯ ನಿವಾಸದ ಕಚೇರಿಯಲ್ಲಿ ಭೇಟಿಯಾದ ಕೊಯವ ಸಮಾಜದ ಪ್ರಮುಖರು, ಮೂರ್ನಾಡಿನಲ್ಲಿ ಕಟ್ಟಡ ನಿರ್ಮಿಸಲು ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸಣ್ಣ ಸಮುದಾಯದ ಅಭ್ಯುದಯಕ್ಕಾಗಿ ಆರ್ಥಿಕ ನೆರವು ನೀಡುವಂತೆ ಕೋರಿದರು.ಮನವಿ ಸ್ವೀಕರಿಸಿದ ಶಾಸಕರು ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರಲ್ಲದೆ, ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಬೆಳವಣಿಗೆ ಹೊಂದಬೇಕು. ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದ ನೆರವು ಸದಾ ಇರುತ್ತದೆ. ಕಟ್ಟಡದ ಭೂಮಿ ಪೂಜೆಗೆ ಖುದ್ದು ಬರುವುದಾಗಿ ಹೇಳಿದರು.ಕೊಡವ ಭಾಷಿಕ ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಉಪಾಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ, ನಿರ್ದೇಶಕರಾದ ಮುಕ್ಕಾಟಿರ ಹ್ಯಾರಿ ಪೂಣಚ್ಚ, ಕಳ್ಳಿರ ನಾಣಯ್ಯ ಕಾಜ್ಞಂಗಡ ಚಾಮಿ ಸುಬ್ಬಯ್ಯ, ಕಳ್ಳಿರ ಬೋಸು, ಮೇಚಿರ ಹರೀಶ್ ಬಿದ್ದಪ್ಪ ಮತ್ತಿತರರು ನಿಯೋಗದಲ್ಲಿದ್ದರು.