ಸಾರಾಂಶ
ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು 21 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಮಂಜೂರಾತಿ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಈ ಬಗ್ಗೆ ಮೊದಲ ಸಭೆಯಲ್ಲಿ ನೀಡಿದ ಸಲಹೆಯಂತೆ ಮೊದಲು ಹರಾಜು ಹಾಕಿ ನಂತರ ಅಂಗಡಿಗಳನ್ನು ತೆರವುಗೊಳಸಿಲು ತೀರ್ಮಾನಿಸಲಾಗಿದೆ. ಬಸ್ ನಿಲ್ದಾಣ ನಿರ್ಮಾಣ ಅನಿವಾರ್ಯ.
ಕನ್ನಡಪ್ರಭ ವಾರ್ತೆ ಮಾಲೂರು
ನೂತನ ಬಸ್ ನಿಲ್ದಾಣ ಕಾಮಗಾರಿಗೆ ಸಹಕರಿಸಲು ಅಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಒಂದು ತಿಂಗಳಲ್ಲಿ ಖಾಲಿ ಮಾಡುವುದಾಗಿ ಬಾಡಿಗೆದಾರರು ನೀಡಿದ ಭರವಸೆಯಿಂದಾಗಿ ಪಟ್ಟಣದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡಲು ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಈ ಸಂಬಂಧ ಇಲ್ಲಿನ ಪುರಸಭೆಯಲ್ಲಿ ಬಸ್ ನಿಲ್ದಾಣ ಸಂರ್ಕೀಣದಲ್ಲಿರುವ 46 ಅಂಗಡಿಗಳ ಬಾಡಿಗೆದಾರರೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿ, ಬೆಳೆಯುತ್ತಿರುವ ಪಟ್ಟಣಕ್ಕೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಅನಿವಾರ್ಯ ಎಂದರು.₹21 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ
ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು 21 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಮಂಜೂರಾತಿ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಈ ಬಗ್ಗೆ ಮೊದಲ ಸಭೆಯಲ್ಲಿ ನೀಡಿದ ಸಲಹೆಯಂತೆ ಮೊದಲು ಹರಾಜು ಹಾಕಿ ನಂತರ ಅಂಗಡಿಗಳನ್ನು ತೆರವುಗೊಳಸಿಲು ತೀರ್ಮಾನಿಸಲಾಗಿದೆ ಎಂದರುಹಾಲಿ 46 ಅಂಗಡಿಗಳ ಬದಲಾಗಿ ಈ ನೂತನ ಬಸ್ ನಿಲ್ದಾಣದಲ ನೆಲಅಂತಸ್ತು ನಲ್ಲಿ 76 ಅಂಗಡಿಗಳು ಬರಲಿದ್ದು, ಯಾರೂ ಅಂತಕ ಪಡುವ ಅವಶ್ಯಕತೆ ಇಲ್ಲ. ಅಂಗಡಿ ಬಾಡಿಗೆದಾರರು ನೀವು ನನ್ನ ಮೇಲೆ ನಂಬಿಕೆ ಇಟ್ಟು ಒಂದು ತಿಂಗಳಲ್ಲಿ ಅಂಗಡಿ ಖಾಲಿ ಮಾಡಿಕೊಡುತ್ತಿದ್ದೀರಿ .ಅ ನಂಬಿಕೆ ಉಳಿಸಿಕೊಳ್ಳಲು ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾದ ನಂತರದ ಮೂರು ತಿಂಗಳಲ್ಲಿ ಹೊಸ ಅಂಗಡಿ ಕಟ್ಟಿ ನಿಮ್ಮ ಸುರ್ಪದಿಗೆ ಕೊಡುವ ಜವಾಬ್ದಾರಿ ತಮ್ಮದು ಎಂದು ಹೇಳಿದರು.ಬಾಡಿಗೆದಾರರು ಹಳೆ ಬಾಕಿ ಕಟ್ಟಿ
ಮುಖ್ಯಾಧಿಕಾರಿ ಪ್ರದೀಪ್ ಮಾತನಾಡಿ, ಸರ್ಕಾರ ಹಾಗೂ ನ್ಯಾಯಲಯದ ಆದೇಶದಂತೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲ ಆಯ್ಕೆಗೆ ನಿಮಗೆ ಅವಕಾಶ ನೀಡಲಾಗುವುದು. ಜಿಲ್ಲಾಧಿಕಾರಿಗಳ ಆದೇಶ ದೊರೆತ 15 ದಿನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಬಾಡಿಗೆದಾರರು ಹಾಲಿ ಉಳಿಸಿಕೊಂಡಿರುವ ಬಾಕಿಯನ್ನು ಕಟ್ಟಿ ಹರಾಜಿನಲ್ಲಿ ಭಾಗವಹಿಸಿ ಎಂದರು.ಈ ಸಂದರ್ಭದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ವಿಜಯಲಕ್ಷಿ ಕಷ್ಣಪ್ಪ, ಮಾಲೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯೀಮ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಅಂಜನಿಸೋಮಣ್ಣ, ಪಿ.ವೆಂಕಟೇಶ್, ಅಡಿಕೆ ನಂಜುಂಡಪ್ಪ, ಶಬ್ಬೀರ್, ಮುರಳಿಧರ್ ಇನ್ನಿತರರು ಇದ್ದರು.