ಬಡ ಜನರ ಮದುವೆ ಸಮಾರಂಭಗಳಿಗೆ ಕಲ್ಯಾಣ ಮಂಟಪ ನಿರ್ಮಾಣ

| Published : Mar 27 2025, 01:00 AM IST

ಬಡ ಜನರ ಮದುವೆ ಸಮಾರಂಭಗಳಿಗೆ ಕಲ್ಯಾಣ ಮಂಟಪ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನ ದೇವಸ್ಥಾನದಿಂದ ಕಡಬಿ ಗ್ರಾಮದವರೆಗೆ ರಸ್ತೆ ಕಾಮಗಾರಿ ಸೇರಿದಂತೆ ಗ್ರಾಮದೇವಿ ದೇವಸ್ಥಾನಕ್ಕೆ ₹15 ಲಕ್ಷ ಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿ ವಾಲ್ಮೀಕಿ ದೇವಸ್ಥಾನದಲ್ಲಿ ಗ್ರಾಮದ ಬಡ ಜನರಿಗೆ ಮದುವೆ ಹಾಗೂ ಇನ್ನಿತರ ಸಮಾರಂಭ ಮಾಡಲು ಕಲ್ಯಾಣ ಮಂಟಪ ನಿರ್ಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಸಮೀಪದ ಯರಝರ್ವಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೆಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಗ್ರಾಮದ ಜನರ ಬಹುದಿನಗಳಿಂದ ಬೇಡಿಕೆಯಾದ ಗ್ರಾಮಕ್ಕೆ ಅತ್ಯಅವಶ್ಯವಿರುವ ಕಾಲೇಜು ಮತ್ತು ಆರೋಗ್ಯ ಕೇಂದ್ರ ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು.ಮುಖಂಡ ಎ.ಎಂ.ಶಂಕರಲಿಂಗಪ್ಪ ಮಾತನಾಡಿ, ಗ್ರಾಮದ ಕರೇಮ್ಮಾದೇವಿ ಆಶೀರ್ವಾದದಿಂದ 2028ಕ್ಕೆ ಸತೀಶ ಜಾರಕಿಹೋಳಿ ಮುಖ್ಯಮಂತ್ರಿ ಆಗುತ್ತಾರೆ ಹಾಗೂ ನಮ್ಮ ಹೆಮ್ಮೆಯ ಶಾಸಕ ವಿಶ್ವಾಸ ವೈದ್ಯ ಅವರು ಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ನಮ್ಮ ಹಾಗೂ ಗ್ರಾಮದ ಜನರ ಆಸೆಯವಾಗಿದೆ ಎಂದು ತಿಳಿಸಿದರು.ಹಿಂದೆ ಆಗದಂತಹ ಅಭಿವೃದ್ಧಿ ಕೆಲಸಗಳನ್ನು ಶಾಸಕರು ನಮ್ಮ ಗ್ರಾಮಕ್ಕೆ ಹೆಚ್ಚು ಅನುದಾನವನ್ನು ಕೊಡುವ ಮೂಲಕ ಯರಝರ್ವಿ ಗ್ರಾಮ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇಂತಹ ಒಬ್ಬ ಶಾಸಕರು ಸಿಕಿದ್ದು ನಾವೇ ಭಾಗ್ಯವಂತರು ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಯಲ್ಲಾಲಿಂಗ ಶ್ರೀಗಳು, ಫಕೀರಪ್ಪ ಲಿಂಗರಡ್ಡಿ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಕೆಎಮಎಫ್ ನಿರ್ದೆಶಕ ಶಂಕರ ಇಟ್ನಾಳ, ಗುತ್ತಿಗೆದಾರ ಮಹಾಂತೇಶ ಉರಬಿನವರ, ಎಚ್.ಎಸ್.ನಾಯ್ಕರ, ಡಾ.ಚಿದಾನಂದ ಮಾಳೈನ್ನವರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಡೋಳ್ಳಿನ ಮೇಳದವರು, ಸ್ವ ಸಹಾಯ ಸಂಘದವರು ಸೇರಿದಂತೆ ಗ್ರಾಮ ಹಾಗೂ ಸುತ್ತ-ಮುತ್ತಲಿನ ಕರೆಮ್ಮದೇವಿ ಭಕ್ತರು ಇದ್ದರು.