ಯೋಧ ನಾಗಾರ್ಜುನ್‌ ಸ್ಮಾರಕ ನಿರ್ಮಾಣ:ತಾಯಿ ಮನವಿಗೆ ಸಂಸದೆ ಡಾ.ಪ್ರಭಾ ಸ್ಪಂದನೆ

| Published : Jul 10 2025, 01:45 AM IST

ಯೋಧ ನಾಗಾರ್ಜುನ್‌ ಸ್ಮಾರಕ ನಿರ್ಮಾಣ:ತಾಯಿ ಮನವಿಗೆ ಸಂಸದೆ ಡಾ.ಪ್ರಭಾ ಸ್ಪಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಸಿದು ಬೀಳುವ ಹಂತದಲ್ಲಿದ್ದ ದೇಶ ಕಾಯುವ ಯೋಧನ ಸ್ಮಾರಕಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಯಕಲ್ಪ ಕಲ್ಪಿಸಿದ್ದಾರೆ. ಈ ಮೂಲಕ ಯೋಧನ ತಾಯಿಯ ಆಶಯ ಈಡೇರಿಸಿದ್ದಾರೆ.

- 2023ರಲ್ಲಿ ಚಂಡೀಘಡದಲ್ಲಿ ಮೃತಪಟ್ಟಿದ್ದ ಹದಡಿ ಗ್ರಾಮ ಯೋಧ

- - -

ದಾವಣಗೆರೆ: ಕುಸಿದು ಬೀಳುವ ಹಂತದಲ್ಲಿದ್ದ ದೇಶ ಕಾಯುವ ಯೋಧನ ಸ್ಮಾರಕಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಯಕಲ್ಪ ಕಲ್ಪಿಸಿದ್ದಾರೆ. ಈ ಮೂಲಕ ಯೋಧನ ತಾಯಿಯ ಆಶಯ ಈಡೇರಿಸಿದ್ದಾರೆ.

ತಾಲೂಕಿನ ಹದಡಿ ಗ್ರಾಮದ ಯೋಧ ಆರ್.ಎಂ. ನಾಗಾರ್ಜುನ್ 2023ರಲ್ಲಿ ಚಂಡೀಘಡದಲ್ಲಿ ಮರಣ ಹೊಂದಿದ್ದರು. ನಾಗಾರ್ಜುನ್ ಸ್ವಗ್ರಾಮವಾದ ಹದಡಿಯ ಸರ್ಕಾರಿ‌ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ‌ನಡೆಸಲಾಗಿತ್ತು. ಯೋಧನ ಜ್ಞಾಪಕಾರ್ಥ ಸ್ಮಾರಕ‌ ನಿರ್ಮಾಣಕ್ಕೆ ₹2 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಆದರೆ, 2 ವರ್ಷವಾದರೂ ಸ್ಮಾರಕ ನಿರ್ಮಾಣ ಮಾಡದೇ ನಿರ್ಲಕ್ಷ್ಯ ಮಾಡಲಾಗಿತ್ತು.

ಇದರಿಂದ‌ ಮನನೊಂದ ಮೃತಯೋಧ ನಾಗಾರ್ಜುನ್ ಅವರ ತಾಯಿ ಹನುಮಕ್ಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ತಮ್ಮ ಪುತ್ರನ ಜ್ಞಾಪಕಾರ್ಥ ಸ್ಮಾರಕ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದರು. ಬೇಡಿಕೆಗೆ ಸ್ಪಂದಿಸಿದ ಸಂಸದರು ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಶೀಘ್ರದಲ್ಲೇ ಸ್ಮಾರಕ ನಿರ್ಮಾಣಕ್ಕೆ ಸೂಚನೆ ನೀಡಿದ್ದರು.

ಅದರಂತೆ ಈಗ ಯೋಧನ ಸ್ಮಾರಕಕ್ಕೆ ಕಾಯಕಲ್ಪ ದೊರೆತಿದೆ. ಯೋಧನ ತಾಯಿಗೆ ಸಾಂತ್ವನ‌ ಹೇಳಿದ ಸಂಸದರು, ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸುವುದಾಗಿ ತಿಳಿಸಿದ್ದಾರೆ.

- - -

-5ಕೆಡಿವಿಜಿ33: