ಕಡೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನೂತನ ಕಟ್ಟಡದ ಕಾಮಗಾರಿ ಪರಿಶೀಲನೆ

-

- ಆಧುನಿಕತೆಯ ಸ್ಪರ್ಶದ ಸುಂದರ ಬಸ್ ನಿಲ್ದಾಣ

- ಶಾಪಿಂಗ್ ಕಾಂಪ್ಲೆಕ್ಸ್, ಕಾರ್ ಪಾರ್ಕಿಂಗ್ ವ್ಯವಸ್ಥೆ

- ಬೇಬಿ ಕೇರ್ ಸೆಂಟರ್, ಮಹಿಳಾ ನಿರೀಕ್ಷಣಾ ಕೊಠಡಿ ಸೌಲಭ್ಯ


- ಕಡೂರು ಘಟಕಕ್ಕೆ 2 ಹೊಸ ಬಸ್‌ ಸೇರ್ಪಡೆ

- ಮೊದಲ ಹಂತದ ಕಾಮಗಾರಿಗೆ ₹6 ಕೋಟಿ

- ಎರಡನೇ ಹಂತದ ಕಾಮಗಾರಿಗೂ ಶೀಘ್ರ ಹಣ

ಕನ್ನಡಪ್ರಭ ವಾರ್ತೆ ಕಡೂರು

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಡೂರು ಪಟ್ಟಣ ಸೇರಿದಂತೆ ತಾಲೂಕಿನ ಜನ ಸಂಖ್ಯೆಗೆ ಅನುಗುಣವಾಗಿ ₹12 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.

ಸೋಮವಾರ ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನೂತನ ಕಟ್ಟಡದ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಬಸ್ ನಿಲ್ದಾಣದ ಮೊದಲ ಹಂತದ ಕಾಮಗಾರಿಗೆ ₹6 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿಯು ಪ್ರಗತಿ ಹಂತದಲ್ಲಿದೆ ಎಂದರು.

ಎರಡನೇ ಹಂತದ ಕಾಮಗಾರಿಗೂ ಶೀಘ್ರವೇ ಹಣ ಬಿಡುಗಡೆ ಮಾಡಿಸಲಾಗುವುದು. ಕಾಮಗಾರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಗಳನ್ನು ಮಾಡಲು ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಇದು ಒಂದು ಅಧ್ಬುತ ಮತ್ತು ಆಧುನಿಕತೆಯ ಸ್ಪರ್ಶದ ಸುಂದರ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ, ಇದು ನಮ್ಮ ಕಡೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ಇತಿಹಾಸದ ಸಾಲಿಗೆ ಸೇರಲಿದೆ ಎಂದು ಅಭಿಪ್ರಾಯ ಪಟ್ಟರು. ಶೌಚಾಲಯ, ಬೇಬಿ ಕೇರ್ ಸೆಂಟರ್, ಮಹಿಳಾ ನಿರೀಕ್ಷಣಾ ಕೊಠಡಿ, ಜನರಿಗೆ, ಮತ್ತು ಚಾಲಕರು ನಿರ್ವಾಹಕರ ವಿಶ್ರಾಂತಿ ಕೊಠಡಿಗಳು ಮತ್ತು ಮೊದಲ ಪ್ಲೋರ್ ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇರಲಿದೆ. ಕಾರ್ ಪಾರ್ಕಿಂಗ್ ಕೂಡ ನಿಲ್ದಾಣದಲ್ಲಿ ಇರಲಿದ್ದು. ಮೊದಲ ಹಂತದ ಕಟ್ಟಡದ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಲ್ದಾಣದಲ್ಲಿ 12 ಬಸ್ಸುಗಳು ನಿಲ್ಲುವ ಕೌಂಟರ್ ಗಳು ಇರಲಿದೆ. ಇದೀಗ ಕಡೂರು ಘಟಕಕ್ಕೆ 2 ಹೊಸ ಬಸ್ಸುಗಳನನ್ಉ ಸೇರ್ಪಡೆಮಾಡಲಾಗುವುದು ಎಂದು ತಿಳಿಸಿದ ಅವರು ಗ್ರಾಮೀಣ ಭಾಗಗಳಲ್ಲಿ ಗ್ರಾಮಗಳ ಜನರು ನೀಡಿರುವ ಬೇಡಿಕೆಯಂತೆ ಬಸ್ ಗಳು ಸಂಚರಿಸಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆ ಎಸ್ ಆರ್.ಟಿ.ಸಿ ಜಿಲ್ಲಾಧಿಕಾರಿ ಸತೀಶ್, ನಿಲ್ದಾಣಾಧಿಕಾರಿ ಗಿರೀಶ್, ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

8ಕೆಕೆಡಿಯು1

ಕಡೂರಿನ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣದ ಕಾಮಗಾರಿನ್ನು ಶಾಸಕ ಕೆ.ಎಸ್. ಆನಂದ್ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.