ಸಮೀಪದ ಬಾಗಲವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಕಳೆದ ಆರು ತಿಂಗಳಿಂದ ಸಂಪೂರ್ಣ ಸ್ಥಗಿತವಾಗಿದೆ.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಬಾಗಲವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಕಳೆದ ಆರು ತಿಂಗಳಿಂದ ಸಂಪೂರ್ಣ ಸ್ಥಗಿತವಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ 4 ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅಂದಾಜು 72 ಲಕ್ಷ ನೀಡಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಭೂಸೇನಾ ನಿಗಮದ ಅಧಿಕಾರಿ ಗಳು ಕೆಲಸ ಪೂರ್ಣ ಗೊಳಿಸುವ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.350 ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದು 12 ಕೊಠಡಿಗಳಲ್ಲಿ 5 ಕೊಠಡಿಗಳು ಸೋರುತ್ತಿವೆ ಹೀಗಾಗಿ ಅವುಗಳನ್ನು ಸದ್ಯ ಬಳಕೆ ಮಾಡಲು ಆಗುತ್ತಿಲ್ಲ,ಕಾಮಗಾರಿ ಸ್ಥಗಿತ ವಾಗಿರುವದರಿಂದ ಸ್ಥಳ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಕೂಡಲೇ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಎಸ್‌ಡಿಎಂಸಿ ಸದಸ್ಯ ನಾಗರಾಜ ಹಿಂದಿನಮನಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಅಧಿಕಾರಿಗಳು ಅಮಾನತು ಆಗಿದ್ದಾರೆ. ಸಿಒ ಸೇರಿ ಇನ್ನಿತರರು ವರ್ಗಾವಣೆ ಆಗಿರುವುದ ರಿಂದ ಕಾಮಗಾರಿ ತಡವಾಗಿದೆ. ಬಾಕಿ ಇರುವ ಪೇಮೆಂಟ್ ಮಾಡಿ ಮಾರ್ಚ್ ಒಳಗಡೆ ಕಾಮ ಗಾರಿ ಪೂರ್ಣಗೊಳಿಸಲಾಗುವುದು ಎಂದು ಭೂಸೇನಾ ನಿಗಮದ ಎಇಇ ಹನುಮಂತಪ್ಪ ತಿಳಿಸಿದರು.