ಬಸವ ಭವನ ನಿರ್ಮಾಣ, ಸಮುದಾಯದ ಅಭಿವೃದ್ಧಿಗೆ ಕ್ರಮ: ನೂತನ ತಾಲೂಕಾಧ್ಯಕ್ಷ ಶಿವಕುಮಾರ್

| Published : Jul 25 2024, 01:19 AM IST

ಬಸವ ಭವನ ನಿರ್ಮಾಣ, ಸಮುದಾಯದ ಅಭಿವೃದ್ಧಿಗೆ ಕ್ರಮ: ನೂತನ ತಾಲೂಕಾಧ್ಯಕ್ಷ ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ನಮ್ಮ ತಂಡಕ್ಕೆ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸಿದ ಸಮುದಾಯದ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನಲ್ಲಿ ಬಸವ ಭವನ ನಿರ್ಮಾಣ ಮಾಡುವ ಜತೆಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ನೂತನವಾಗಿ ಆಯ್ಕೆಯಾದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕಾಳೇಗೌಡನ ಕೊಪ್ಪಲು ಎಂ.ಶಿವಕುಮಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಆನಂದ್, ಜಿಲ್ಲಾ ಹಾಗೂ ತಾಲೂಕು ಕಾರ್‍ಯಕಾರಿ ಮಂಡಳಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಚುನಾವಣೆಯಲ್ಲಿ ನಮ್ಮ ತಂಡಕ್ಕೆ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸಿದ ಸಮುದಾಯದ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಸಹಕಾರ ಪಡೆದು ಬಸವ ಭವನ ನಿರ್ಮಾಣ ಮಾಡಲು ಕ್ರಮವಹಿಸುತ್ತೇನೆ. ಎಲ್ಲಾ ಸರಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಹಾಕಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ತಾಳಶಾಸನ ಆನಂದ್ ಮಾತನಾಡಿ, ಚುನಾವಣೆಯಲ್ಲಿ ಸಮುದಾಯದ ಎಲ್ಲಾ ಮತದಾರರು ನಮ್ಮ ತಂಡಕ್ಕೆ ಬೆಂಬಲ ನೀಡಿ ಗೆಲ್ಲಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಚುನಾವಣೆಯಲ್ಲಿ ಸೋತವರೂ ಸಹ ನಮ್ಮವರೇ. ಚುನಾವಣೆ ಮುಗಿದಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.

ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಬಸವ ಭವನ ನಿರ್ಮಾಣ, ಎಲ್ಲಾ ಸರಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಲು ಸ್ವಂತ ಖರ್ಚಿನಿಂದ ಬಸವಣ್ಣನವರ ಫೋಟೋ ನೀಡಲಾಗುವುದು. ಜತೆಗೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ಶೀಘ್ರವೇ ನೀಡಲಾಗುವುದು ಎಂದು ತಿಳಿಸಿದರು.

ಮುಖಂಡ ಎಸ್.ಎ.ಮಲ್ಲೇಶ್ ಮಾತನಾಡಿ, ವೀರಶೈವ ಸಮುದಾಯಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಕೊಡುಗೆ ಅಪಾರವಿದೆ. ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠ, ಬೇಬಿ ದುಂಡೇಶ್ವರ ಮಠ ಹಾಗೂ ಚಂದ್ರವನ ಆಶ್ರಮಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಕಳೆದ 15 ವರ್ಷಗಳಿಂದ ಸಮುದಾಯದಲ್ಲಿ ಅಭಿವೃದ್ಧಿಗೆ ಪೂಕರವಾದ ಕೆಲಸಗಳು ನಡೆದಿಲ್ಲ. ಇದೀಗ ಆಯ್ಕೆಯಾಗಿರುವ ಸಮುದಾಯದ ಪದಾಧಿಕಾರಿಗಳು ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡಿ ಎಂದು ತಿಳಿಸಿದರು.

ತಾಲೂಕು ಕಾರ್‍ಯಕಾರಿ ಮಂಡಳಿ ಸದಸ್ಯರಾದ ಬಿ.ಪಿ.ಉಮೇಶ್, ಎಚ್.ಎನ್.ಕುಮಾರ್, ಎ.ಜಯಕುಮಾರ್, ಡಿ.ಇ.ಕಲಿಗಣೇಶ್, ಸಿ.ಎಸ್.ಕುಮಾರ್, ಬಿ.ಇ.ರುದ್ರೇಶ್, ತಮ್ಮಯ್ಯ, ಬಸಪ್ಪ, ಎಸ್.ಎಂ.ದಯಾನಂದ, ಎ.ಎನ್.ಪ್ರಾಣೇಶ್, ಸಿ.ಬಿ.ಬಸಪ್ಪ, ರುದ್ರಸ್ವಾಮಿ, ಪದ್ಮರಾಜು, ಮೀನಾಕ್ಷಿ, ಜ್ಯೋತಿ, ರಾಜೇಶ್ವರಿ, ಸವಿತ, ಶೈಲಾ, ಶಶಿಕಲಾ, ಬಿ.ಐ.ಉಮಾಂಬಿಕಾ, ಜಿಲ್ಲಾ ಸದಸ್ಯರಾದ ಬಿ.ಎಸ್.ಶಿವಣ್ಣ, ಗಿರೀಶ್, ಎಚ್.ಎಸ್.ಸುರೇಶ್, ಈರಣ್ಣ, ಮಹದೇವಮ್ಮ ರಾಜೇಶ್, ಶೋಭಾ ದೇವರಾಜು ಹಾಜರಿದ್ದರು.