(ಮಿಡಲ್‌) ಸರ್ಕಾರಿ ಜಾಗ ಕಬಳಿಸಿ ಮನೆ ನಿರ್ಮಾಣ

| Published : Aug 14 2024, 12:50 AM IST

ಸಾರಾಂಶ

ಖಾಸಗಿ ವ್ಯಕ್ತಿಗಳಿಂದ ಕಬಳಿಕೆಯಾದ ಜಾಗ ತೆರವುಗೊಳಿಸುವಂತೆ ಎಬಿವಿಪಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರ ಆಯುಕ್ತ ಶಿವರಾಜ ರಾಠೋಡ ಅವರಿಗೆ ಮನವಿ ಸಲ್ಲಿಸಲಾಯಿತು.

ಬೀದರ್‌: ಪಟ್ಟಣದ ಮೈಲೂರಿನ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ವ್ಯಾಪ್ತಿಗೆ ಸೇರಿದ ಜಾಗದ ಸುತ್ತು ಗೋಡೆತನ್ನು ಒಡೆದು ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪ್ರತಿಭಟನೆ ನಡೆಸಿತು.

ಕಬಳಿಕೆಯಾದ ಸ್ಥಳವನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸುತ್ತುಗೋಡೆ ನಿರ್ಮಿಸಬೇಕು. ಈ ಹಿಂದೆ ಈ ಕುರಿತು ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಈ ಬಾರಿ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯಲ್ಲಿ ವಿದ್ಯಾರ್ಥಿ ಪರಿಷತ್‌ ಆಗ್ರಹಿಸಿತು.

ಈ ವೇಳೆ ಪರಿಷತ್‌ನ ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ಪವನ ಕುಂಬಾರ, ಹೋರಾಟ ಪ್ರಮುಖ ಅಭಿಷೇಕ ಶಂಭು, ವಿಶ್ವಾಸ, ಯಲ್ಲಾಲಿಂಗ, ಪ್ರಣವ, ಪೃಥ್ವಿರಾಜ, ವಿಕಾಸ, ಅಂಕಿತ ಹಾಗೂ ವಿವೇಕ ಸೇರಿ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.