100ಕ್ಕೂ ಹೆಚ್ಚು ಬಸ್ ತಂಗುದಾಣಗಳ ನಿರ್ಮಾಣ

| Published : Aug 12 2025, 12:33 AM IST

ಸಾರಾಂಶ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಹಲವು ವಾರ್ಡ್‌ಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ 60 ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಮಂಜೂರಾತಿ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. 10 ಬಸ್ ತಂಗುದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.ನಗರ ಸೇವಕರಾದ ಹಣಮಂತ ಕೊಂಗಾಲಿ ಅವರ ವಾರ್ಡ್‌ ನಂ.46ರ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆ ಕ್ರಾಸ್ ಹತ್ತಿರ ಮತ್ತು ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ವಾರ್ಡ್‌ ನಂ.35ರ ನಗರ ಸೇವಕರಾದ ಲಕ್ಷ್ಮೀ ರಾಠೋಡ ಅವರ ವಾರ್ಡ್‌ನ ಚನ್ನಮ್ಮ ಹೌಸಿಂಗ್ ಸೊಸೈಯಿಟಿ ಹತ್ತಿರ ಸೆಕ್ಟರ್ 6/1 ರಲ್ಲಿ ಮತ್ತು ಶ್ರೀನಗರದ ಸೆಕ್ಟರ್ ನಂ.5 ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ನಗರ ಸೇವಕರಾದ ಶ್ರೇಯಸ್ ನಾಕಾಡಿ ಅವರ ವಾರ್ಡ್‌ ನಂ.34ರ ಶಾಹುನಗರ ಗಣೇಶ ಚೌಕ್ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಹಾದೇವ ರಾಠೋಡ, ಮಂಡಲ ಅಧ್ಯಕ್ಷ ವಿಜಯ ಕೊಡಗನೂರ, ಮಾಜಿ ಮೇಯರ ಎನ್.ಬಿ.ನಿರ್ವಾಣಿ, ಅಣ್ಣಾಸಾಹೇಬ ದೇಸಾಯಿ, ನಿರುಪಾದಯ್ಯ ಕಲ್ಲೋಳಿಮಠ, ಅಪ್ಪಾಸಾಹೇಬ ಕಾಂಬಳೆ, ವಿಜಯಾ ಹಿರೇಮಠ, ಎಸ್.ಎಸ್.ಶೀಲವಂತ, ಎಸ್.ಎಂ.ವಕ್ಕುಂದ, ಮಹಾಂತೇಶ ಮೂಲಿಮನಿ, ವಿನಾಯಕ ಪತ್ತಾರ, ಶಿವಾನಂದ ಕಣಗನಿ, ಕೃಷ್ಣಾ ಪಾಟೀಲ, ಸುರೇಶ ಯಾದವ, ಸಂತೋಷ ದೇಸಾಯಿ, ಶಂಕರ ಗುಡಸ, ಸಂಜು ಭಾಂವಿ, ವಿಠ್ಠಲ ಬಡಿಗೇರ, ಆರ್.ಸಿ.ಪಾಟೀಲ ಸೇರಿದಂತೆ ಸ್ಥಳೀಯ ನಿವಾಸಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಬಸ್ ಪ್ರಯಾಣಿಕರ ತಂಗುದಾಣವು ದಿನ ನಿತ್ಯ ಕೆಲಸಕ್ಕೆ ಸಂಚರಿಸುವ ಜನ ಸಾಮಾನ್ಯರ ಮತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ತ್ವರಿತ ಆಶ್ರಯ ತಾಣಗಳಾಗಿದ್ದು ಮಹಿಳೆಯರು, ಮಕ್ಕಳು ಹಾಗೂ ವೃರ್ದ್ಧರಿಗೆ ಪ್ರಯಾಣದ ಸಂದರ್ಭದಲ್ಲಿ ಮಳೆ, ಗಾಳಿ, ಬಿಸಿಲುಗಳಿಂದ ಈ ತಂಗುದಾಣಗಳು ರಕ್ಷಣೆ ನೀಡಲಿವೆ.

-ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು.