ಹಿರಿಯ ಕಲಾವಿದರ ಸಲಹೆ ಪಡೆದು ರಂಗಮಂದಿರ ನಿರ್ಮಾಣ

| Published : Jan 08 2024, 01:45 AM IST

ಹಿರಿಯ ಕಲಾವಿದರ ಸಲಹೆ ಪಡೆದು ರಂಗಮಂದಿರ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾಗರ ಪಟ್ಟಣದಲ್ಲಿ ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಪೂರಕವಾಗಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಿದ್ದು, ಹಿರಿಯ ಕಲಾವಿದರ ಸಲಹೆ-ಸೂಚನೆಗೆ ಆದ್ಯತೆ ನೀಡಿ ಮುಂದುವರಿಯುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಸಾಗರ ಕ್ಷೇತ್ರವು ಸಾಂಸ್ಕೃತಿಕವಾಗಿ ಸದೃಢವಾದ ನೆಲಗಟ್ಟು ಹೊಂದಿದ್ದು, ಅದನ್ನು ಪೋಷಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಮಾಸ್ಟರ್ ಶಂಕರ್ ಕಲಾವೃಂದ್ರ ಟ್ರಸ್ಟ್‌ನ 33ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾಗರದಲ್ಲಿ ಸುಸಜ್ಜಿತ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ ಅಗತ್ಯ ಯೋಜನೆ ರೂಪಿಸಲಾಗಿದ್ದು, ಹಿರಿಯ ಕಲಾವಿದರ ಸಲಹೆ ಸಹಕಾರ ಪಡೆದು ರಂಗಮಂದಿರ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಸಾಹಿತಿ ಡಾ. ನಾ.ಡಿಸೋಜ ಅವರು ವಿ.ಶಂಕರ್ ಬರೆದಿರುವ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಪುಸ್ತಕಗಳು ಇತಿಹಾಸವನ್ನು ನೆನಪಿಸುವಂತೆ ಇರಬೇಕು. ನಾವು ಮಾಡುವ ಕೆಲಸಗಳು ದಾಖಲಾಗುವ ಜೊತೆಗೆ ಮುಂದಿನ ಪೀಳಿಗೆಗೆ ಅದು ಮಾರ್ಗಸೂಚಿ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಡಾ.ನಾ.ಡಿಸೋಜ, ಸಂಪತ್ ಕುಮಾರ್, ಶಂಕರ್ ಆಚಾರ್, ಗಿರಿಜಮ್ಮ ರಾಮಣ್ಣ, ಜಗದೀಶ್ ಒಡೆಯರ್, ಜೆ.ಎಸ್.ಮಾದೇವಾಚಾರ್, ಎಸ್.ಮೋಹನ್ ಮೂರ್ತಿ, ಶೋಭಾ ಲಂಬೋದರ್, ವಾಸುದೇವಮೂರ್ತಿ, ನಿತ್ಯಾನಂದ ಶೆಟ್ಟಿ, ರಾಜು ಜನ್ನೆಹಕ್ಲು, ಮಾಲತಿ ರಾಜಶೇಖರ್, ಶೀಲಾ ನಾಗರಾಜ್, ರಿಧಿ ಲ್ಯಾವಿಗೆರೆ, ನಾಗರಾಜ್ ಸಿ. ಅವರನ್ನು ಸನ್ಮಾನಿಸಲಾಯಿತು.

ವಿ.ಶಂಕರ್ ಬರೆದಿರುವ "ದಣಿವರಿಯದ ನಾಯಕ ಕಾಗೋಡು ತಿಮ್ಮಪ್ಪ ", "ನೀರೆ ", "ಹೆಣ್ಣೇ ನೀ ಅಬಲೆಯಲ್ಲ ", "ನಾನು ಕಂಡ ಸಾಗರ ರಂಗಭೂಮಿ ", "ಸರ್ಕಾರಿ ಶಾಲೆ ಪ್ರೀತಿ ಇರಲಿ " ಮತ್ತು ವಿ.ಟಿ.ಸ್ವಾಮಿ ಸಂಪಾದಕತ್ವದಲ್ಲಿ ಹೊರಬಂದಿರುವ "ಶಂಕರ ಗಾನಯಾನ " ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಎಸ್.ಬಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ವಿ.ಶಂಕರ್, ಮ.ಸ. ನಂಜುಂಡಸ್ವಾಮಿ, ಆರ್.ಶ್ರೀನಿವಾಸ್, ಕೆ.ಆರ್.ದೀಪಕ್ ಸಾಗರ್, ಶಿವಮೂರ್ತಿ, ವಿ.ಟಿ.ಸ್ವಾಮಿ, ಗಣಪತಿ ಮಂಡಗಳಲೆ, ಸುರೇಶಬಾಬು, ಕೃಷ್ಣಮೂರ್ತಿ ಭಂಡಾರಿ, ಸತೀಶ್ ಮೊಗವೀರ, ಕೆ.ನಾಗರಾಜ್, ಅಜೇಯ, ಕೆ.ವಿ.ಜಯರಾಮ್, ಉಮೇಶ್ ಹಿರೇನೆಲ್ಲೂರು, ವಿನಾಯಕ ಗುಡಿಗಾರ್, ಜಿ.ಎಸ್.ಅರುಣ್ ಇನ್ನಿತರರು ಹಾಜರಿದ್ದರು.

- - -

7ಕೆ.ಎಸ್.ಎ.ಜಿ.2:

ವಿ.ಶಂಕರ್ ಅವರ ಕೃತಿಗಳನ್ನು ಸಾಹಿತಿ ನಾ.ಡಿಸೋಜ ಮತ್ತಿತರ ಗಣ್ಯರು ಬಿಡುಗಡೆ ಮಾಡಿದರು.