ಸಾರಾಂಶ
ಪ್ರಭು ಯೇಸುಕ್ರಿಸ್ತರ ಜಯಂತಿಯನ್ನು ಕ್ರೈಸ್ತ ಬಾಂಧವರು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಾಮಾನ್ಯವಾಗಿದೆ.
ಕನ್ನಡಪ್ರಭ ವಿರಾಜಪೇಟೆ
ಪ್ರಭು ಯೇಸುಕ್ರಿಸ್ತನ ಜಯಂತಿಯನ್ನು ಕ್ರೈಸ್ತ ಬಾಂಧವರು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸರ್ವಸಾಮಾನ್ಯವಾಗಿದೆ. ನಗರದ ಯುವಕ ಹಲವು ವರ್ಷಗಳಿಂದ ಯೇಸುಕ್ರಿಸ್ತರ ವಿವಿಧ ಕಥೆ ಸಾರಂಶವನ್ನು ಅಳವಡಿಸಿಕೊಂಡು ಗೋದಲಿ ನಿರ್ಮಾಣ ಮಾಡುತ್ತಾ ಧರ್ಮಕ್ಕೆ ಪೂರಕವಾಗಿ ನಿಂತಿದ್ದಾರೆ.ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಜೇಮ್ಸ್ ಸಲ್ಡಾನ ಮತ್ತು ಪೌಲಿನಿ ಸಲ್ಡಾನ ಅವರ ಪುತ್ರ ಡೇನಿಯಲ್ ಸಲ್ಡಾನ ಗೋದಲಿ ನಿರ್ಮಾಣದಲ್ಲಿ ನಿಪುಣತೆಯನ್ನು ಸಾಧಿಸಿ ಹೆಸರುವಾಸಿಯಾಗಿದ್ದಾನೆ.
ಗೋದಲಿ ನಿರ್ಮಾಣದ ಬಗ್ಗೆ ಮಾತನಾಡಿದ ಡೇನಿಯಲ್ ಅವರು ಸ್ವಾಮಿಯ ಜನನವು ಬೇತ್ಲೆಹ್ಯಾಂ ನ ಹಳ್ಳಿಯೊಂದರಲ್ಲಿ ನಡೆಯಿತು. ಈ ಕಥಾ ಸಾರಂಶವನ್ನುಅಳವಡಿಸಿಕೊಂಡು ಜಯಂತಿಯ 10 ದಿನಗಳ ಮುಂದೆ ಕಾಲ್ಪನಿಕ ರೇಖಾಚಿತ್ರಗಳನ್ನು ಬರೆದು ಮಂಗಳೂರಿನಿಂದ ತಂದಿರುವ ಬೊಂಬೆಗಳನ್ನು ಸ್ಥಳಕ್ಕೆ ಅನುಗುಣವಾಗಿ ಪ್ರತಿಷ್ಠಾಪಿಸಲಾಗಿದೆ. ಡಿ. 24 ರಾತ್ರಿ 10ರ ನಂತರ ಪವಿತ್ರ ಬಾಲ ಯೇಸುಸ್ವಾಮಿ ಮೂರ್ತಿಯನ್ನು ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರದಲ್ಲಿ ಮೂರು ದಿನಗಳ ಬಳಿಕ ಇಲ್ಲಿ ನಿರ್ಮಿಸಿದ ಗೋದಲಿಯನ್ನು ತೆಗೆಯಲಾಗುತ್ತದೆ ಎಂದು ಗೋದಲಿ ನಿರ್ಮಾಣ ಮತ್ತು ಕಥೆ ಸಾರಂಶವನ್ನು ಹೇಳಿದರು.ಗೋದಲಿ ನಿರ್ಮಾಣ ಮಾಡಿದ ಬಳಿಕ ಮನೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭೇಟಿ ನೀಡುತ್ತಾರೆ ಶ್ರದ್ಧಾಭಕ್ತಿಯಿಂದ ಹರಸಿ ತೆರಳುತ್ತಾರೆ ಎಂದು ಹೇಳಿದರು.
ಗೋದಲಿ ನಿರ್ಮಿಸುವುದು ಹಬ್ಬದ ಭಾಗವಾಗಿದೆ ಎಂದು ಪರಿಗಣಿಸಬೇಕು. ಪ್ರಸ್ತುತ ದಿನಗಳಲ್ಲಿ ಯುವಕರು ಗೋದಲಿ ನಿರ್ಮಾಣ ಮಾಡಲು ಹಿಂದೇಟು ಹಾಕುತ್ತಿರುವುದು ಕಳವಳಕಾರಿಯಾಗಿದೆ. ಮುಂಬರುವ ಪೀಳಿಗೆಯು ಗೋದಲಿ ನಿರ್ಮಾಣ ಮಾಡಲು ಕಲಿಯಬೇಕು. ಮತ್ತು ಧರ್ಮ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು .ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳ ಸಮಿತಿಯು ಗೋದಲಿ ನಿರ್ಮಿಸುವ ಸ್ಫರ್ಧೆಯನ್ನು ಏರ್ಪಡಿಸುತ್ತಾರೆ. ಇದರಲ್ಲಿ ಎಲ್ಲಾ ಭಾಗವಹಿಸುತ್ತಾರೆ. ಸತತ16 ವರ್ಷ ಗಳಿಂದ ಪ್ರಶಸ್ತಿಗೆ ಮಾತ್ರವಲ್ಲದೆ ಸಂಸ್ಕೃತಿಯ ಉಳಿವಿಗಾಗಿ ತೊಡಗಿಸಿ ಕೊಂಡು ಬರುತ್ತಿದ್ದೇನೆ ಎಂದು ಪತ್ರಿಕೆಯೊಂದಿಗೆ ಹೇಳಿದರು.