₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣ

| Published : Jan 15 2025, 12:48 AM IST

₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಶೀ ಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಶ್ರೀ ಶರಣೆ ಅಕ್ಕಮಹಾದೇವಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ವಿದ್ಯಾಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಹಾಸ್ಟೆಲ್ ಕಟ್ಟಡ ನಿರ್ಮಾಣ ಕುರಿತು ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಮಹಿಳೆಯರ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ಸಮಾಜ ಬಂಧುಗಳು ಸಹಕಾರ ನೀಡಬೇಕು. ಅಂದಾಜು ₹3 ಕೋಟಿ ವೆಚ್ಚದಲ್ಲಿ ಶರಣೆ ಅಕ್ಕಮಹಾದೇವಿ ವಿದ್ಯಾರ್ಥಿನಿಲಯ ನಿರ್ಮಿಸಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ತಿಳಿಸಿದರು. ನಗರದ ಶೀ ಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ಶ್ರೀ ಶರಣೆ ಅಕ್ಕಮಹಾದೇವಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ವಿದ್ಯಾಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ನಡೆದ ಹಾಸ್ಟೆಲ್ ಕಟ್ಟಡ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಸಮೀಪದ ಕರಿನಂಜನಪುರದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಶಿವಕುಮಾರಸ್ವಾಮಿ ಭವನದ ಮಾಲೀಕ ಎಚ್.ಜಿ.ಕುಮಾರಸ್ವಾಮಿ, ನಂದಿಭವನದ ಮಾಲೀಕರಾದ ರೂಪ ಮಹದೇವಪ್ರಸಾದ್ ಅವರು ೧೭ ಗುಂಟೆ ಜಮೀನಿನನ್ನು ಉಚಿತವಾಗಿ ನೀಡಿದ್ದಾರೆ. ಈಗಾಗಲೇ ಭೂಮಿಯನ್ನು ಶರಣೆ ಅಕ್ಕಮಹಾದೇವಿ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ವಿದ್ಯಾಭಿವೃದ್ಧಿ ಸೇವಾ ಮತ್ತು ಮಹಿಳೆಯರ ವಿದ್ಯಾ ಅಭಿವೃದ್ಧಿ ಸೇವಾ ಟ್ರಸ್ಟ್ ಹೆಸರಿಗೆ ರಿಜಿಸ್ಟಾರ್, ಅನ್ಯಕ್ರಾಂತ ಈ ಸ್ವತ್ತು ಪಡೆದುಕೊಳ್ಳಲಾಗಿದೆ ಎಂದರು. ಕಳೆದ ೨೦೦೬ರದಲ್ಲಿ ಗುಬ್ಬಿತೋಟದಪ್ಪ ಉಚಿತ ವಿದ್ಯಾರ್ಥಿನಿಯರ ವಸತಿ ನಿಲಯ ಆರಂಭವಾಗಿದೆ. ೧೮ ವರ್ಷಗಳಿಂದ ಸಮಾಜದ ಬಡ ವಿದ್ಯಾರ್ಥಿನಿಯರು ಊಟ ವಸತಿಯನ್ನು ಉಚಿತವಾಗಿ ಪಡೆದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಬಹಳಷ್ಟು ಹೆಣ್ಣು ಮಕ್ಕಳು ಉನ್ನತ ಹುದ್ದೆಗಳನ್ನು ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಅವಕಾಶವನ್ನು ಇನ್ನು ಹೆಚ್ಚಿನ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳಿಗೆ ನೀಡಬೇಕೆಂಬ ಅಭಿಲಾಶೆ ನಮ್ಮದಾಗಿದೆ ಎಂದರು. ಈಗಾಗಲೇ ಕಟ್ಟಡ ನಿರ್ಮಾಣದ ನೀಲನಕ್ಷೆ ಹಾಗೂ ಪ್ರಾಜೆಕ್ಟ್ ವರದಿ ಸಿದ್ದಪಡಿಸಿದ್ದು, ನೀಲಿ ನಕ್ಷೆಯ ರೂಪರೇಷೆಯನ್ನು ಎಂಜಿನಿಯರ್ ಕರಿನಂಜನಪುರದ ನಂಜುಂಡಸ್ವಾಮಿ, ಮಾದಲಾಂಬಿಕೆ ಅವರು ಉಚಿತವಾಗಿ ಮಾಡಿ ಕೊಟ್ಟಿರುತ್ತಾರೆ. ಸುಮಾರು ೩ ಕೋಟಿ ರು.ಗಳಲ್ಲಿ ಭವನ ನಿರ್ಮಿಸಲಾಗುತ್ತದೆ. ದೊಡ್ಡ ಪ್ರಮಾಣ ಹಣವನ್ನು ಹೊಂದಿಕೆ ಮಾಡಲು ಸಮಾಜದ ಬಂಧುಗಳು ಪ್ರತಿ ಗ್ರಾಮಗಳಿಂದ ಉದಾರವಾಗಿ ಧನ ಸಹಾಯ ಮಾಡಬೇಕು. ಹೀಗಾಗಿ ಇಂದಿನ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಎಲ್ಲ ಗ್ರಾಮಗಳಿಗೂ ತೆರಳಿ ಕರ ಪತ್ರಗಳನ್ನು ನೀಡಿ, ಸಭೆಗೆ ಆಹ್ವಾನಿಸಲಾಗಿತ್ತು. ಸಭೆಗೆ ಆಗಮಿಸಿರುವ ಪ್ರಮುಖರು ತಮ್ಮ ವೈಯಕ್ತಿಕ ದೇಣಿಗೆಯನ್ನು ಘೋಷಣೆ ಮಾಡುವ ಜೊತೆಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕು. ಕಟ್ಟಡದ ಶಂಕುಸ್ಥಾಪನೆಗೆ ಎಲ್ಲರು ಭಾಗವಹಿಸಬೇಕು. ಒಂದು ವರ್ಷದ ಅವಧಿಯಲ್ಲಿಯೇ ಕಟ್ಟಡ ಉದ್ಘಾಟಿಸುವ ನಿಟ್ಟಿನಲ್ಲಿ ಎಲ್ಲರು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು. ಅನೇಕ ಮುಖಂಡರು ವೈಯಕ್ತಿಕವಾಗಿ 10 ಸಾವಿರದಿಂದ 1 ಲಕ್ಷದವರೆಗೆ ದೇಣಿಗೆ ನೀಡುವ ವಾಗ್ದಾನ ಮಾಡಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕಚ್ಚಾ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಭರವಸೆ ಮತ್ತು ಘೋಷಣೆಯ ಜೊತೆಗೆ ಚೆಕ್‌ಗಳ ಮುಖಾಂತರ ದೇಣಿಗೆಯನ್ನು ಅಧ್ಯಕ್ಷರಿಗೆ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ ಕಾರ್ಯದರ್ಶಿ ರಾಮಸಮುದ್ರ ಪುಟ್ಟಮಲ್ಲಪ್ಪ, ಖಜಾಂಚಿ ಗುರುಸ್ವಾಮಿ, ಸಹ ಕಾರ್ಯದರ್ಶಿ ಗೌಡಿಕೆ ನಾಗೇಶ್, ನಿವೇಶನ ದಾನಿಗಳಾದ ಕುಮಾರಸ್ವಾಮಿ ದಂಪತಿ, ರೂಪಾಮಹದೇವಪ್ರಸಾದ್, ಚಾಮುಲ್ ನಿರ್ದೇಶಕ ಬಸವರಾಜು, ಹೆಬ್ಬಸೂರು ಬಸವಣ್ಣ, ಆಲೂರು ಮಹೇಶ್ ಪ್ರಭು, ಲಾಯರ್ ವಿರೂಪಾಕ್ಷ ,ಶಿವಪ್ರಸಾದ್, ಶ್ಯಾನಡ್ರಳ್ಳಿ ಮಲ್ಲಿಕಾರ್ಜುನ್, ಬೋರ್‌ವೆಲ್ ಪ್ರಭುಸ್ವಾಮಿ, ಗುತ್ತಿಗೆದಾರರಾದ ಹೆಗ್ಗವಾಡಿ ಶಿವರುದ್ರಪ್ಪ, ಮಹದೇವಪ್ಪ, ಕೆಂಪನಪುರ ಕೆ ಎಂ ಮಹದೇವಸ್ವಾಮಿ ,ಸೀಮೆಎಣ್ಣೆ ಕುಮಾರ್ ,ಹಳೆಪುರ ಗೌಡಿಕೆ ಬಸವಣ್ಣ ಮತ್ತು ಸುಂದರಪ್ಪ ನಟರಾಜು, ರವಿಕುಮಾರ್, ದೊಡ್ಡರಾಯ ಪೇಟೆ ಗಿರೀಶ್, ತಮ್ಮಡಹಳ್ಳಿ ರವಿಶಂಕರ್, ಹರಗನಪುರ ನಾಗರಾಜು ಮತ್ತು ಮಹದೇವಪ್ಪ, ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಉಡಿಗಾಲ ಕುಮಾರ ಸ್ವಾಮಿ ಕಾವುದವಾಡಿ ಗುರು, ಉದ್ಯಮಿ ಶರಣಗೌಡ ಬಿರಾದಾರ್, ಲಿಂಗರಾಜು ಪಟೇಲ್ ನಾಗರಾಜಪ್ಪ ,ಲಿಂಗಪ್ಪ ,ಪ್ರಸಾದ್ ಕೂಸಪ್ಪ, ಜಿ ಶಿವಲಿಂಗಪ್ಪ, ನಾಗಣ್ಣ, ಗುರುಸ್ವಾಮಿ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ವಕೀಲ ಗುರುಸ್ವಾಮಿ ಮಲ್ಲಿಕಾರ್ಜುನ ಇದ್ದರು.