ಕಟ್ಟಡ ಕಾರ್ಮಿಕರು ಶ್ರಮಜೀವಿಗಳು: ಟಿ.ಡಿ.ರಾಜೇಗೌಡ

| Published : May 23 2025, 12:11 AM IST

ಸಾರಾಂಶ

ನರಸಿಂಹರಾಜಪುರ, ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

-ಶಾಸಕರ ಕಚೇರಿಯಲ್ಲಿ 151 ಕೂಲಿ ಕಾರ್ಮಿಕರಿಗೆ ಕುಲ ಕಸುಬುಗಳ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಶಾಸಕರ ಕಚೇರಿಯಲ್ಲಿ ಮೀನುಗಾರಿಕೆ, ಕಾರ್ಮಿಕರ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಗಳ ಫಲಾನುಭವಿ ಗಳಿಗೆ ಕುಲ ಕಸುಬುಗಳ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. 2007 ರಲ್ಲಿ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಕೂಲಿ ಕಾರ್ಮಿಕರಿಗೆ ಶಾಶ್ವತ ಶಕ್ತಿ ತುಂಬಲು ಅನೇಕ ರೂಪು ರೇಷೆಗಳನ್ನು ಸಿದ್ಧ ಪಡಿಸಿ ಕಾನೂನನ್ನು ಜಾರಿಗೊಳಿಸಲು ಶ್ರಮಿಸಿದರು. ನಂತರ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅದನ್ನು ಜಾರಿಗೆ ತಂದು ಯಾವುದೇ ಸರ್ಕಾರಿ ಕಾಮಕಾರಿಗಳ ನಿರ್ವಹಣೆ ಮೊತ್ತದಲ್ಲಿ ಶೇ.1 ರಷ್ಟು ಕಾರ್ಮಿಕರ ಕಲ್ಯಾಣ ನಿಧಿಗೆ ಪಾವತಿಸುವ ವ್ಯವಸ್ಥೆ ಮಾಡಿದರು ಎಂದರು.

₹10 ಲಕ್ಷ ಮೇಲ್ಪಟ್ಟ ಕಾಮಗಾರಿಗಳಿಗೆ ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೂ ಕಾರ್ಮಿಕರ ಕಲ್ಯಾಣ ನಿಧಿಗೆ ಕರ ಪಾವತಿಸುವ ಕಾನೂನು ಮಾಡಿ ಕಾರ್ಮಿಕರ ವರ್ಗಕ್ಕೆ ಬಲ ತುಂಬುವ ಕಾರ್ಯ ಮಾಡಿದರು. ಕಾರ್ಮಿಕರ ಮಕ್ಕಳಿಗೆ ಎಲ್ ಕೆಜಿ ಇಂದ ಉನ್ನತ ವ್ಯಾಸಂಗದವರೆಗೂ ಸಹಾಯ ಧನ, ಕಾರ್ಮಿಕರಿಗೆ ಸರ್ಕಾರಿ ಬಸ್ಸಿನಲ್ಲಿ ಪಾಸ್ ಸೌಲಭ್ಯವನ್ನು ನಮ್ಮ ಸರ್ಕಾರ ನೀಡುತ್ತಿದೆ. ಆದ್ದರಿಂದ ಈ ಎಲ್ಲಾ ಸರ್ಕಾರಿ ಸೌಲಭ್ಯಗಳು ದೊರಕಬೇಕಾದರೆ ಕಾರ್ಮಿಕರು ಮೊದಲು ನೋಂದಣಿ ಮಾಡಿಸ ಬೇಕು. ಇಲ್ಲವಾದಲ್ಲಿ ಇಂತಹ ಉತ್ತಮ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಕೊಪ್ಪ, ಶೃಂಗೇರಿ, ಬಾಳೆಹೊನ್ನೂರಿನಲ್ಲಿ ಉತ್ತಮ ಮೀನು ಮಾರುಕಟ್ಟೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲೇ ಈ ಮೂರು ಕಡೆ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ 151 ಜನ ಫಲಾನುಭವಿಗಳಿಗೆ ಗಾರೆ, ಮರಗೆಲಸ, ಕ್ಷೌರಿಕ ಹಾಗೂ ಕುಲುಮೆ ವೃತ್ತಿಯ ಸಲಕರಣೆಗಳ ಕಿಟ್‌ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ ನಟರಾಜ್, ಪಪಂ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್. ಎಲ್.ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ಕರುಗುಂದ ನಂದೀಶ್, ಈ.ಸಿ.ಜೋಯಿ, ಮಾಳೂರು ದಿಣ್ಣೆರಮೇಶ್, ರಾಜೇಶ್, ಮಂಜು , ಕಾರ್ಮಿಕ ಇಲಾಖೆ ಹಿರಿಯ ನಿರ್ದೇಶಕ ಜೀವನ್‌ ಕುಮಾರ್, ಕೈಗಾರಿಕೆ ಇಲಾಖೆ ಧರ್ಮರಾಜ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನಾ ಮತ್ತಿತರರು ಉಪಸ್ಥಿತರಿದ್ದರು.