ಬೆವರು ಸುರಿಸಿ ದುಡಿವ ನಿಜವಾದ ಶ್ರಮಿಕರು ಮತ್ತು ದೇಶ ಕಟ್ಟುವ ಶಿಲ್ಪಿಗಳೆಂದರೆ ಕಟ್ಟಡ ಕಾರ್ಮಿಕರು. ಹಾಗಾಗಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಬೆವರು ಸುರಿಸಿ ದುಡಿವ ನಿಜವಾದ ಶ್ರಮಿಕರು ಮತ್ತು ದೇಶ ಕಟ್ಟುವ ಶಿಲ್ಪಿಗಳೆಂದರೆ ಕಟ್ಟಡ ಕಾರ್ಮಿಕರು. ಹಾಗಾಗಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ನುಡಿದರು.

ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ೫ನೇ ವಾರ್ಷಿಕೋತ್ಸವ, ಗುರುತಿನ ಕಾರ್ಡ್ ಮತ್ತು ಲೇಬರ್ ಕಾರ್ಡ್ ವಿತರಣೆ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದ ಬೆನ್ನೆಲುಬಾಗಿ ನಿಂತು ಶ್ರಮಿಸುವ ಶ್ರಮಿಕ ವರ್ಗದ ಕಲ್ಯಾಣ, ಅವರ ಸುರಕ್ಷತೆ ಹಾಗೂ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ.

ಬಂಡವಾಳ ತೊಡಗಿಸಿದ ಒಬ್ಬ ಮಾಲೀಕ ಹಣದ ರೂಪದಲ್ಲಿ ಪಾಲು ಒದಗಿಸಿದರೆ ಅವನ ಬಂಡವಾಳಕ್ಕೆ ಮೌಲ್ಯ ಒದಗಿಸುವುದು ಕಟ್ಟಡ ಕಾರ್ಮಿಕರ ಶ್ರಮವಾಗಿದೆ. ಆದ್ದರಿಂದ ಶ್ರಮಿಕ ವರ್ಗವನ್ನು ಅತ್ಯಂತ ಕೀಳಾಗಿ ಕಾಣುವ ಮನೋಭಾವನ್ನು ಮೊದಲು ಅಳಿಸಬೇಕು ಎಂದರು.

ದೇಶದ ನಿಜವಾದ ಭವಿಷ್ಯ ಕಾರ್ಮಿಕ ವರ್ಗದ ಮೇಲಿ ನಿಂತಿದೆ. ಅವರ ಕುಟುಂಬಕ್ಕೆ ಭದ್ರತೆ, ಅವರ ಮಕ್ಕಳಿಗೆ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದು ೧೩ ವರ್ಷದ ಅವಧಿಯಲ್ಲಿ ಮೊದಲ ಬಾರಿಗೆ ಕಾರ್ಮಿಕರಿಗೆ ಬೆನ್ನೆಲುಬಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಕಾರ್ಮಿಕ ಬಂಧುಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಜಡೆ ಮಠದ ಮ.ನಿ.ಪ್ರ.ಡಾ. ಮಹಾಂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ದಿನನಿತ್ಯದ ಬದುಕು ಕಾಯಕದಿಂದಲೇ ಪ್ರಾರಂಭವಾಗುತ್ತದೆ. ಇದಕ್ಕೆ ಪ್ರೇರಣೆ ೧೨ನೇ ಶತಮಾನದ ಶಿವ ಶರಣರು. ಅವರ ಕಾಯಕವೇ ಕೈಲಾಸ ಎನ್ನುವ ತತ್ವ ನುಡಿಗಳು ಎಂದಿಗೂ ಪ್ರೇರಕವಾಗಿದ್ದು, ಪ್ರಾಮಾಣಿಕವಾಗಿ ಕಾಯಕ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಮಿಕ ಮಂಡಳಿ ಭವಿಷ್ಯ ನಿಧಿ ಕಮಿಷನರ್ ಜೆರ್ಸಿನಾ, ಯೋಜನಾ ನಿರ್ದೇಶಕ ರಘುನಾಥ್, ಪ್ರಿಯಾಂಕ್ ಚೌದ್ರಿ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಸಂಜಯ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಭು ಮೇಸ್ತಿ, ತಾಲ್ಲೂಕು ಅಧ್ಯಕ್ಷ ವಿಕ್ರಂ ಮೇಸ್ತಿç, ಗೌರವಾಧ್ಯಕ್ಷ ಅನ್ಸರ್ ಇರ್ಫಾನ್, ಹರೀಶ್ ಪಾಟೀಲ್, ಬಿಜೆಪಿ ಮುಖಂಡರಾದ ಡಾ. ಜ್ಞಾನೇಶ್, ಟಿ.ಡಿ. ಮೇಘರಾಜ್ ಹಾಜರಿದ್ದರು.

ಕೋಟ್‌...

ತಾಲೂಕಿನ ಅಭಿವೃದ್ಧಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೊಡುಗೆ ಅಪಾರವಾಗಿದ್ದು, ಮೂಡಿ, ಮೂಗೂರು ಏತ ನೀರಾವರಿ ಯೋಜನೆಯನ್ನು ಕಲ್ಪಿಸುವುದರ ಮೂಲಕ ಜಡೆ, ಆನವಟ್ಟಿ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆತಿದೆ. ಶಿಕಾರಿಪುರ ರೈಲ್ವೆ ಸಂಪರ್ಕಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸೊರಬಕ್ಕೂ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಇದ್ದು, ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾವುದು. ಸಾಮಾನ್ಯ ಜನರ ಸ್ವಾಭಿಮಾನದ ಬದುಕಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಜನರ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿರುವೆ.

- ಬಿ.ವೈ. ರಾಘವೇಂದ್ರ, ಸಂಸದ

-----

ಫೋಟೊ:೦೬ಕೆಪಿಸೊರಬ-೦೧ :

ಸೊರಬ ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.