ಸಂಘಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅವಶ್ಯ: ಶಾಸಕ ಎಚ್.ವಾಯ್ ಮೇಟಿ

| Published : Oct 28 2024, 12:51 AM IST

ಸಂಘಗಳ ಬೆಳವಣಿಗೆಗೆ ಗ್ರಾಹಕರ ಸಹಕಾರ ಅವಶ್ಯ: ಶಾಸಕ ಎಚ್.ವಾಯ್ ಮೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಮತಗಿ ಪಟ್ಟಣದಲ್ಲಿನ ಗಂಗನಗೌಡ್ರ ಬಿಲ್ಡಿಂಗ್‌ದಲ್ಲಿ ನೂತನವಾಗಿ ಪ್ರಾರಂಭವಾದ ಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಾರ್ಯಕ್ರಮವನ್ನು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಕಮತಗಿ

ನೂತನವಾಗಿ ಪ್ರಾರಂಭವಾಗುತ್ತಿರುವ ಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಬೆಳವಣಿಗೆಗೆ ಗ್ರಾಹಕರ ಸಹಕಾರ ಅವಶ್ಯವಾಗಿದೆ ಎಂದು ಶಾಸಕ ಎಚ್.ವಾಯ್ ಮೇಟಿ ಹೇಳಿದರು.

ಪಟ್ಟಣದಲ್ಲಿನ ಗಂಗನಗೌಡ್ರ ಬಿಲ್ಡಿಂಗ್‌ದಲ್ಲಿ ನೂತನವಾಗಿ ಪ್ರಾರಂಭವಾದ ಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಚೇರಿ ಭಾನುವಾರದಂದು ಉದ್ಘಾಟಿಸಿ ಮಾತನಾಡಿ, ನೂತನ ಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಪ್ರಾರಂಭದ ದಿನದಂದೆ ₹1 ಕೋಟಿ 53 ಲಕ್ಷ ಠೇವಣಿ ಸಂಗ್ರಹವಾಗಿರುವುದು ನೋಡಿದರೆ ಸಹಕಾರಿ ಸಂಘಗಳ ಮೇಲೆ ಗ್ರಾಹಕರ ಸಹಕಾರ ಎಷ್ಟು ಇದೆ ಎಂದು ಗೊತ್ತಾಗುತ್ತದೆ. ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಐ ಕಡ್ಲಿಮಟ್ಟಿ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಮ್ಮ ನೇತೃತ್ವದಲ್ಲಿ ಸಂಘ ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಾಗಲಕೋಟೆ ಬಸವೇಶ್ವರ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೇಫ್ ಲಾಕರ್‌ ಉದ್ಘಾಟಿಸಿದರು,ಕಾಸ ಸೌಹಾರ್ದ ಬ್ಯಾಂಕ್‌ ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ ಹಿರೇಮಠ ಗಣಕಯಂತ್ರ ಉದ್ಘಾಟಿಸಿದರು,

ಕಾರ್ಯಕ್ರಮದಲ್ಲಿ ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಸಹಕಾರಿ ಸಂಘಗಳ ಉಪನಿಬಂಧಕ ದಾನಯ್ಯ ಹಿರೇಮಠ, ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಜಂಟಿ ನಿರ್ದೇಶಕ ಮಹೇಶ್ವರಪ್ಪ, ಕಾಸ ಬ್ಯಾಂಕ್‌ ಅಧ್ಯಕ್ಷ ಮುರಗೇಶ ಐ ಕಡ್ಲಿಮಟ್ಟಿ, ಉಪಾಧ್ಯಕ್ಷ ಹನಮಂತಪ್ಪ ಕಡಿವಾಲ, ನಿರ್ದೇಶಕರಾದ ಸಿದ್ರಾಮಪ್ಪ ಕಡ್ಲಿಮಟ್ಟಿ, ಹುಚ್ಚಪ್ಪ ಸಿಂಹಾಸನ, ಕಮಲಪ್ಪ ಕಡ್ಲಿಮಟ್ಟಿ, ರಮೇಶ ಜಮಖಂಡಿ, ರೇವಣಕುಮಾರ ಭಾಪ್ರಿ, ಗಣೇಶ ಕ್ಯಾದಿಗ್ಗೇರಿ, ವಿಜಯ ಮಹಾಂತೇಶ ಕಡ್ಲಿಮಟ್ಟಿ, ಮಲ್ಲಪ್ಪ ಮೇದಾರ, ಪಂಪಣ್ಣ ಪರಗಿ, ಸಕ್ಕೂಬಾಯಿ ಕಡ್ಲಿಮಟ್ಟಿ, ದಾನಮ್ಮ ಸಿಂಹಾಸನ, ಬನದೇವ ಜಮಖಂಡಿ, ಹನಮಂತ ವಡ್ಡರ, ವ್ಯವಸ್ಥಾಪಕ ಪ್ರತಾಪ ಗಾಡದ ಹಾಗೂ ಗ್ರಾಹಕರು, ಸಿಬ್ಬಂದಿ ಇದ್ದರು.