ನಾವು ಖರ್ಚು ಮಾಡುವ ಒಂದು ಪೈಸಕ್ಕೂ ಬೆಲೆ ಇದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬೇಕು: ಎಂ.ಆರ್‌. ಯೋಗೇಶ್‌

| Published : Apr 05 2025, 12:45 AM IST

ನಾವು ಖರ್ಚು ಮಾಡುವ ಒಂದು ಪೈಸಕ್ಕೂ ಬೆಲೆ ಇದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬೇಕು: ಎಂ.ಆರ್‌. ಯೋಗೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳನ್ನು ಖರೀದಿ ಮಾಡುತ್ತೇವೆ, ಆದರೆ ಎಷ್ಟೋ ಮಂದಿ ನಾವು ಖರೀದಿ ಮಾಡಿದ ಪದಾರ್ಥಕ್ಕೆ ಬಿಲ್ ಪಡೆದಿದ್ದೇವೆ, ಯಾವುದೇ ವಸ್ತುವಿರಲಿ ಅದನ್ನು ನಾವು ಪರೀಕ್ಷಿಸದೆ ಅಗ್ಗವಾಗಿ ಸಿಗುತ್ತದೆ ಎಂದು ಖರೀದಿಸಬಾರದು, ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಬಿಲ್ ಪಡೆಯಬೇಕು ಭೂಮಿಯ ಮೇಲೆ ಸಿಗವಷ್ಟು ಎಲ್ಲ ವಸ್ತುಗಳು ಯಾವುದು ಕೆಟ್ಟದ್ದಲ್ಲ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ನಾವು ಖರ್ಚು ಮಾಡುವ ಒಂದು ಪೈಸಕ್ಕೂ ಬೆಲೆ ಇದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬೇಕು ಎಂದು ಎಂದು ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಂ.ಆರ್‌. ಯೋಗೇಶ್ ಹೇಳಿದರು.

ತಾಲೂಕಿನ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಮಾರುಕಟ್ಟೆಯಲ್ಲಿ ದಿನ ಬಳಕೆ ವಸ್ತುಗಳನ್ನು ಖರೀದಿ ಮಾಡುತ್ತೇವೆ, ಆದರೆ ಎಷ್ಟೋ ಮಂದಿ ನಾವು ಖರೀದಿ ಮಾಡಿದ ಪದಾರ್ಥಕ್ಕೆ ಬಿಲ್ ಪಡೆದಿದ್ದೇವೆ, ಯಾವುದೇ ವಸ್ತುವಿರಲಿ ಅದನ್ನು ನಾವು ಪರೀಕ್ಷಿಸದೆ ಅಗ್ಗವಾಗಿ ಸಿಗುತ್ತದೆ ಎಂದು ಖರೀದಿಸಬಾರದು, ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಬಿಲ್ ಪಡೆಯಬೇಕು ಭೂಮಿಯ ಮೇಲೆ ಸಿಗವಷ್ಟು ಎಲ್ಲ ವಸ್ತುಗಳು ಯಾವುದು ಕೆಟ್ಟದ್ದಲ್ಲ, ಆದರೆ ಯಾವುದನ್ನು ಯಾವ ಸಂದರ್ಭದಲ್ಲಿ ಎಷ್ಟು ಬಳಸಬೇಕು ಅಷ್ಟೇ ಬಳಸಬೇಕು ಆಗ ಮಾತ್ರ ಅದು ಔಷಧಿಯಾಗುತ್ತದೆ ಎಂದರು.

ನಿಮ್ಮ ಜೀವನದ ಶಿಲ್ಪಿಗಳು ನೀವೇ ಆಗಿರುತ್ತೀರಿ ಅದಕ್ಕಾಗಿ ನೀವು ಶ್ರಮಪಟ್ಟು ಓದಬೇಕಾಗುತ್ತದೆ, ಮೂರು ಗಂಟೆ ಚಲನಚಿತ್ರವನ್ನು ಚಾಚು ತಪ್ಪದೆ ಹೇಳುವಷ್ಟು ನಿಮಗೆ ಜ್ಞಾಪಕ ಶಕ್ತಿ ಇರುತ್ತದೆ, ಆದರೆ ಪುಸ್ತಕವನ್ನು ಓದುವುದರಲ್ಲಿ ಹಿಂದೆ ಬೀಳುತ್ತೀರಿ, ಇದಕ್ಕೆ ಕಾರಣ ನಿಮ್ಮಲ್ಲಿ ಏಕಾಗ್ರತೆ ಕೊರತೆ ಇರುತ್ತದೆ ಎಂಬುದನ್ನು ನೀವು ಅರಿಯಬೇಕು, ಹಾಗಾಗಿ ನೀವು ಓದುವಾಗ ಏಕಾಗ್ರತೆಯನ್ನು ಹೆಚ್ಚಾಗಿ ಕೇಂದ್ರೀಕರಿಸಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಮೊಬೈಲ್ ನಿಂದ ದೂರವಿರಿ ಮೊಬೈಲ್ ಗಳು ನಿಮ್ಮ ಏಕಾಗ್ರತೆಯನ್ನು ಕೆಡಿಸುತ್ತವೆ ಹಾಗೂ ಬುದ್ಧಿಯನ್ನು ಚಂಚಲ ಮಾಡುತ್ತದೆ, ನಿಮ್ಮ ಜೀವನದಲ್ಲಿ ಒಂದು ಗುರಿ ಇರಬೇಕು ಆ ಗುರಿ ಇಲ್ಲದಿದ್ದರೆ ನೀವು ಎಂದಿಗೂ ಆ ಗುರಿ ಮುಟ್ಟಲು ಸಾಧ್ಯವೇ ಆಗುವುದಿಲ್ಲ ಎಂದರು.

ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಅಂಬಿಕಾ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ದನಪಾಲ್, ಎಎಸ್‌ಐ ಮಂಜುನಾಥ್, ಹರೀಶ್, ಶ್ರೀನಿವಾಸ್, ರಾಜಗೋಪಾಲ್, ವಕೀಲರಾದ ಆರ್‌.ಕೆ. ಶ್ರೀನಾಥ್, ಪುರುಷೋತ್ತಮ್, ಉಪನ್ಯಾಸಕ ನಂಜುಂಡಸ್ವಾಮಿ ಇದ್ದರು.