ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದರ ಕೊಂಬು ಮುರಿದಿದ್ದು, ನಾಲ್ಕೈದು ಹಸುಗಳಿಗೆ ಗಾಯಗಳಾಗಿವೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಲವರು ಜಾನುವಾರುಗಳನ್ನು ತೋಟದ ಕಡೆ ಸಾಗಿಸಿದರು.
ಕ್ಯಾಲನೂರು ಕ್ರಾಸ್‌ನಲ್ಲಿ ಘಟನೆ । ಸೂಲಿಬೆಲೆ ಹೋಬಳಿಯ ಕಸಾಯಿಖಾನೆಗೆ ಸಾಗಾಟ
ಕನ್ನಡಪ್ರಭ ವಾರ್ತೆ ಕೋಲಾರವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕ್ಯಾಲನೂರು ಕ್ರಾಸ್‌ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೂರು ಹಸುಗಳು ಮೃತಪಟ್ಟಿವೆ.
ಅ.೨೨ರಂದು ತೆಲಂಗಾಣದಿಂದ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಕಸಾಯಿಖಾನೆಗೆ ೨೪ರಿಂದ ೨೮ ಗೋವುಗಳನ್ನು ಸಾಗಿಸುತ್ತಿದ್ದ ಬೆಂಗಳೂರು ಮೂಲದ ಕಂಟೈನರ್, ಕ್ಯಾಲನೂರು ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿಸುವಾಗ ವೇಗದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ, ಅಂಗಡಿಗಳತ್ತ ಪಲ್ಟಿ ಹೊಡೆದಿದೆ.ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದರ ಕೊಂಬು ಮುರಿದಿದ್ದು, ನಾಲ್ಕೈದು ಹಸುಗಳಿಗೆ ಗಾಯಗಳಾಗಿವೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಲವರು ಜಾನುವಾರುಗಳನ್ನು ತೋಟದ ಕಡೆ ಸಾಗಿಸಿದರು, ಕೆಲವು ಓಡಿಹೋದವು. ಸ್ಥಳೀಯರು ಮತ್ತು ಪೊಲೀಸರು ಹುಡುಕಿ ಒಟ್ಟು ೨೧ ಗೋವುಗಳನ್ನು ರಕ್ಷಿಸಿ ನಂದಗುಡಿ ವ್ಯಾಪ್ತಿಯ ಎನ್.ಹೊಸಹಳ್ಳಿ ಗೋಶಾಲೆಗೆ ರವಾನಿಸಿದ್ದಾರೆ.
ವಿದ್ಯುತ್ ಕಂಬ, ತಂತಿಗಳು ಮುರಿದು ಬಿದ್ದಿದ್ದು, ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು, ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಜಾಮ್ ಉಂಟಾಗಿತ್ತು. ವೇಮಗಲ್ ಇನ್ಸ್‌ಪೆಕ್ಟರ್ ಮಂಜು ಬಿ.ಪಿ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಎಸ್ಪಿ ಜಗದೀಶ್, ಡಿವೈಎಸ್ಪಿ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಚಾಲಕನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೋಟ್:ಗೋಹತ್ಯೆ ನಿಷೇಧ ಇದ್ದರೂ ಕಂಟೈನರ್‌ನಲ್ಲಿ ಹಿಂಸಿಸಿ ಗೋವು ಸಾಗಾಟ ಖಂಡನೀಯ. ಸಿಸಿಟಿವಿ ಆಧರಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ, ಗೋವುಗಳನ್ನು ಗೋಶಾಲೆಗೆ ರವಾನಿಸಬೇಕು.-ರಾಮು ಶಿವಣ್ಣ, ರೈತ ಸಂಘ