ಕಲುಷಿತ ನೀರು ಸೇವನೆ ಪ್ರಕರಣ: ಮಕ್ಕಳ ಯೋಗಕ್ಷೇಮ ವಿಚಾರಿಸಿದ ನ್ಯಾಯಾಧೀಶರು

| Published : Jul 23 2025, 01:45 AM IST

ಕಲುಷಿತ ನೀರು ಸೇವನೆ ಪ್ರಕರಣ: ಮಕ್ಕಳ ಯೋಗಕ್ಷೇಮ ವಿಚಾರಿಸಿದ ನ್ಯಾಯಾಧೀಶರು
Share this Article
  • FB
  • TW
  • Linkdin
  • Email

ಸಾರಾಂಶ

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಲುಷಿತ ಕುಡಿಯುವ ನೀರು ಸೇವಿಸಿ ಅಸ್ವಸ್ಥಗೊಂಡಿರುವ 12 ಮಕ್ಕಳ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಉಪ ಕಾರ್ಯದರ್ಶಿಗಳು, ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಸೂಚಿಸಿದ ಮೇರೆಗೆ ಸೋಮವಾರ ಸವದತ್ತಿಯ ಪ್ರಧಾನ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಸಿದ್ರಾಮ ರೆಡ್ಡಿ ಜೊತೆಗೆ ಭೇಟಿ ನೀಡಿದ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಅವರು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಮಾತನಾಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಲುಷಿತ ಕುಡಿಯುವ ನೀರು ಸೇವಿಸಿ ಅಸ್ವಸ್ಥಗೊಂಡಿರುವ 12 ಮಕ್ಕಳ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಉಪ ಕಾರ್ಯದರ್ಶಿಗಳು, ಬಾಲ ನ್ಯಾಯ ಸಮಿತಿ, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಸೂಚಿಸಿದ ಮೇರೆಗೆ ಸೋಮವಾರ ಸವದತ್ತಿಯ ಪ್ರಧಾನ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಸಿದ್ರಾಮ ರೆಡ್ಡಿ ಜೊತೆಗೆ ಭೇಟಿ ನೀಡಿದ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಅವರು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಮಾತನಾಡಿಸಿದರು. 12 ಮಕ್ಕಳ ಹೆಸರು, ವಿಳಾಸ, ಅ್ವಸ್ಥಗೊಂಡಿರುವ ಕಾರಣ, ಅಸ್ವಸ್ಥಗೊಂಡಿರುವ ಮಕ್ಕಳಿಗೆ ನೀಡಿದ ಚಿಕಿತ್ಸೆ ಹಾಗೂ ಮಕ್ಕಳ ಸದ್ಯದ ಆರೋಗ್ಯದ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದರು.

ನಂತರ ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎನ್.ದಂಡಿನ, ಸಿಪಿಐ ಡಿ.ಎಸ್.ಧರ್ಮಟ್ಟಿ, ಪಿಎಸೈ ಎಲ್.ಆರ್.ಗೌಡಿ, ಹೂಲಿಕಟ್ಟಿ ಗ್ರಾಮ ಪಂಚಾಯತಿ ಅಧಿಕಾರಿ ರಮೇಶ ತಿಪ್ಪನಾಯ್ಕ, ಗ್ರಾಮ ಲೆಕ್ಕಾಧಿಕಾರಿ ರವಿ ಲಮಾನಿ, ಶಾಲೆಯ ಮುಖ್ಯ ಶಿಕ್ಷಕರಾದ ಗೋರಿನಾಯ್ಕ ಅವರಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಯಾರೋ ಒಬ್ಬ ಅಧಿಕಾರಿ ಹೇಳಿದ ಮೇಲೆ ಕೆಲಸ ಮಾಡಬೇಕು ಅನ್ನುವುದನ್ನು ಎಲ್ಲರೂ ಬಿಡಬೇಕು ನಿಮ್ಮ ಗ್ರಾಮ ಸಂರಕ್ಷಣೆ ನಿಮ್ಮ ಕರ್ತವ್ಯ, ನಿಮ್ಮ ನಿರ್ಲಕ್ಷದಿಂದ ಮಕ್ಕಳಿಗೆ ತೊಂದರೆಯಾಗಿದೆ. ಇನ್ನೂ ಮುಂದೆ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.ಶಾಲೆಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಬೇಕು, ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಪ್ರತಿದಿನ ಗಮನ ಕೊಡಬೇಕು, ಟ್ಯಾಂಕರ್‍ ನೀರನ್ನು ಮಕ್ಕಳಿಗೆ ಕುಡಿಯಲು ಕೊಡಬೇಡಿ, ಶುದ್ಧ ಕುಡಿಯುವ ನೀರನ್ನು ಉಪಯೊಗಿಸಿ, ಶಾಲೆಯ ಸುತ್ತ-ಮುತ್ತ ಸಿಸಿ ಕ್ಯಾಮೆರಾ ಅಳವಡಿಸಿ, ಶಾಲೆಯಲ್ಲಿ ಪ್ಯಾನ್‍ ಮತ್ತು ಕರೆಂಟ್‍ ಅಳವಡಿಸಿ, ಪ್ರತಿದಿನ ಶಾಲೆಯ ಅವಧಿ ಮುಗಿದ ನಂತರ ಸಾರ್ವಜನಿಕರು ಶಾಲೆಯ ಆವರಣ ಒಳಗಡೆ ಬರದಂತೆ ಶಾಲೆಯ ಮುಖ್ಯಗೇಟ್‌ನ್ನು ಬೀಗದಿಂದ ಮುಚ್ಚಬೇಕು ಎಂದು ತಿಳಿಸಿದರು.ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ.ಎಚ್.ಎಂ.ಮಲ್ಲನಗೌಡರ, ಆರೋಗ್ಯಾಧಿಕಾರಿ ಡಾ.ಸಬನೀಸ್, ಸಿಡಿಪಿಒ ಸಾಣಿಕೊಪ್ಪ ಇತರರು ಉಪಸ್ಥಿತರಿದ್ದರು.