ಕಲುಷಿತ ನೀರು ಸರಬರಾಜು: ಸೂಕ್ತ ಕ್ರಮಕ್ಕೆ ಭೋಜರಾಜ್ ಆಗ್ರಹ

| Published : Jan 19 2024, 01:49 AM IST

ಸಾರಾಂಶ

ಪುರಸಭೆಗೆ ಪೂರ್ಣಾವಧಿ ಅಭಿಯಂತರರು ನೇಮಕವಾಗಬೇಕು, ನಗರದಲ್ಲಿ ಕಲುಷಿತವಾದ ಕುಡಿಯುವ ನೀರು ಸರಬರಾಜಾಗುತ್ತಿದೆ, ಇದರ ಬಗ್ಗೆ ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಟಿ.ಎಂ.ಭೋಜರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಪುರಸಭೆಗೆ ಪೂರ್ಣಾವಧಿ ಅಭಿಯಂತರರು ನೇಮಕವಾಗಬೇಕು, ನಗರದಲ್ಲಿ ಕಲುಷಿತವಾದ ಕುಡಿಯುವ ನೀರು ಸರಬರಾಜಾಗುತ್ತಿದೆ, ಇದರ ಬಗ್ಗೆ ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಟಿ.ಎಂ.ಭೋಜರಾಜ್ ತಿಳಿಸಿದರು.

ತರೀಕೆರೆ ಪುರಸಬೆ ಸಭಾಂಗಣದಲ್ಲಿ ಅಧ್ಯಕ್ಷ ಪರಮೇಶ್ ಅಧ್ಯಕ್ಷತೆಯಲ್ಲಿ ಸದಸ್ಯರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಮಾತನಾಡಿ ತರೀಕೆರೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಓಡಾಡಲು ಭಯ ಪಡುತ್ತಿದ್ದಾರೆ. ಕೂಡಲೇ ಇದರ ಬಗ್ಗೆ ಕ್ರ ಮ ಕೈಗೊಳ್ಳಬೇಕು ಎಂದು ಹೇಳಿದರು.

ಎಂಬಿಬಿಎಸ್ ಮತ್ತು ಬಿ.ಇ.ವಿದ್ಯಾರ್ಥಿಗಳಿಗೆ ನೀಡುತ್ತಿರುವ ಲ್ಯಾಪ್ ಟ್ಯಾಪ್ ನ್ನು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು ಜ. 10 ರಂದು ನಿಗದಿಯಾಗಿದ್ದ ವಿಶೇಷ ಸಭೆಯನ್ನು ಏಕೆ ಮುಂದೂಡಲಾಯಿತು ಎಂದು ಪ್ರಶ್ನಿಸಿದರು.

ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ ಬೀದಿ ನಾಯಿಗಳನ್ನು ನಿಯಂತ್ರಿಸುವುದು ಸ್ವಚ್ಛತೆಯ ಒಂದು ಭಾಗ. ಕೂಡಲೇ ಬೀದಿ ನಾಯಿಗಳ ಕಾಟ ನಿಯಂತ್ರಣಕ್ಕೆ ಪುರಸಬೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯ ಟಿ.ದಾದಾಪೀರ್ ಮಾತನಾಡಿ ಪೌರಕಾರ್ಮಿಕರು ವಾಸ ಮಾಡುವ ವಸತಿ ಗೃಹಗಳು ಸಮರ್ಪಕವಾಗಿಲ್ಲ, ಮನುಷ್ಯರು ವಾಸಿಸಲು ಯೋಗ್ಯವಾಗಿಲ್ಲ, ಎಷ್ಟೋ ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ, ವಸತಿ ಗೃಹಗಳಿಗೆ ಪುರಸಭೆ ಅಧ್ಯಕ್ಷರು ಭೇಟಿ ನೀಡಬೇಕು, ಪೌರಕಾರ್ಮಿಕರ ವಸತಿ ಗೃಹಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಶೌಚಾಲಯ ವ್ಯವಸ್ಥೆ ಇಲ್ಲದ ಕಡೆ ಖಂಡಿತ ಶೌಚಾಲಯ ವ್ಯವಸ್ಥೆ ಮಾಡ ಲಾಗುವುದು, ಎಲ್ಲ ವಸತಿ ಗೃಹಗಳಲ್ಲಿ ಸ್ವಚ್ಛತೆ ಕಾಪಾಡಿ ದುರಸ್ತಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.

ಸದಸ್ಯರಾದ ಪಾರ್ವತಮ್ಮ, ಗೀತಾ ಗಿರಿರಾಜ್, ರಂಗನಾಥ್, ಟಿ.ಎಸ್.ಬಸವರಾಜ್, ಚಂದ್ರಶೇಖರ್, ಕುಮಾರಪ್ಪ, ಪುರಸಭೆ ಸದಸ್ಯರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಸದಸ್ಯರು, ವ್ಯವಸ್ಥಾಪಕ ವಿಜಯಕುಮಾರ್, ಪರಿಸರ ಅಭಿಯಂತರರಾದ ತಾಹಿರಾ ತಸ್ನಿಂ, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.18ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ ಪುರಸಭೆ ಅಧ್ಯಕ್ಷ ಪರಮೇಶ್ ಅಧ್ಯಕ್ಷತೆಯಲ್ಲಿ ಪುರಸಭೆ ಸದಸ್ಯರ ವಿಶೇಷ ಸಭೆ ಏರ್ಪಡಿಸಲಾಗಿತ್ತು. ಮುಖ್ಯಾಧಿಕಾರಿ ಪ್ರಶಾಂತ್ ಎಚ್.ಇದ್ದಾರೆ.