ಸಕಲ ವೈಭಾಗ್ಯಗಳಿದ್ದ ಮನುಷ್ಯ ಹಣ ಗಳಿಕೆಗೆ ಬೆನ್ನು ಬಿದ್ದರೆ ತೃಪ್ತಿಕರ ಜೀವನ ನಡೆಸಲಾಗುತ್ತಿಲ್ಲ ಇಲ್ಲಗಳ ಬಗ್ಗೆ ಚಿಂತಿಸದೆ ಇರುವುದರಲ್ಲಿ ಸಾರ್ಥಕ ಬದುಕು ನಡೆಸಿದರೆ ಮಾತ್ರ ಸಾರ್ಥಕ ಜೀವನ ಕಾಣಲು ಸಾಧ್ಯ

ಕುರುಗೋಡು: ದುಡಿಮೆ ಮತ್ತು ಗಳಿಸುವುದೇ ಬದುಕಲ್ಲ. ಕೇವಲ ಜ್ಞಾನ ಸಂಗ್ರಹದಿಂದ ಸಂತೃತ್ತ ಜೀವನ ಸಾಧ್ಯವಲ್ಲ. ಜ್ಞಾನದ ಜತೆಗೆ ನಮ್ಮ ನಡೆ,ನುಡಿ, ಸಂಸ್ಕರ, ಸದ್ಗುಣವು ಬದುಕಿಗೆ ತೃಪ್ತಿ ನೀಡುತ್ತದೆ ಎಂದು ಸಿರುಗುಪ್ಪ ಬಸವಮಂಟಪದ ಬಸವಭೂಷಣ ಸ್ವಾಮಿಗಳು ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಸಿದ್ದರಾಂಪುರ ಗ್ರಾಮದ ಶ್ರೀಶೈಲ ಕದಳೀವನ ಶಿದ್ದೇಶ್ವರ ಮಹಾಸ್ವಾಮೀಗಳ ಮಠದಲ್ಲಿ ದಸರಾ ನವರಾತ್ರಿ ಅಂಗವಾಗಿ ೨೫ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಗುರುವಾರ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಕಲ ವೈಭಾಗ್ಯಗಳಿದ್ದ ಮನುಷ್ಯ ಹಣ ಗಳಿಕೆಗೆ ಬೆನ್ನು ಬಿದ್ದರೆ ತೃಪ್ತಿಕರ ಜೀವನ ನಡೆಸಲಾಗುತ್ತಿಲ್ಲ ಇಲ್ಲಗಳ ಬಗ್ಗೆ ಚಿಂತಿಸದೆ ಇರುವುದರಲ್ಲಿ ಸಾರ್ಥಕ ಬದುಕು ನಡೆಸಿದರೆ ಮಾತ್ರ ಸಾರ್ಥಕ ಜೀವನ ಕಾಣಲು ಸಾಧ್ಯ

ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಪ್ರಮುಖವಾಗಿದೆ. ದೇವಿಪುರಾಣದಲ್ಲಿ ಬರುವ ಬಹುತೇಕ ಸನ್ನಿವೇಶಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಪುರಾಣದಲ್ಲಿ ವಿವರಿಸಿದಂತೆ ದೇವಿ ಜಗನ್ಮಾತೆ ಒಂಭತ್ತು ದಿನಗಳ ಕಾಲ ಒಂದೊಂದು ಅವತಾರದಲ್ಲಿ ಅವತರಿಸಿ ದುಷ್ಟರನ್ನು ಸಂಹರಿಸುವ ಪ್ರಸಂಗ ವರ್ಣರಂಜಿತವಾಗಿ ವಿವರಿಸಿದ್ದಾರೆ. ಅವರಲ್ಲಿ ಮನುಷ್ಯರು ಕಲಿತುಕೊಳ್ಳಬೇಕಾದ ಅನೇಕ ಸದ್ಗುಣ ವಿವರಣೆಯೂ ತುಂಬಿದೆ.ಎಲ್ಲರೂ ಒಂಭತ್ತು ದಿನಗಳ ಕಾಲ ದೇವಿ ಪುರಾಣ ಶ್ರವಣ ಮಾಡುವ ಮೂಲಕ ಮನಸಿನಲ್ಲಿ ಅಡಕವಾಗಿರುವ ಕೆಟ್ಟ ಆಲೋಚನೆ ದೂರ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಪೀಠಾಧಿಪತಿ ಚಿದಾನಂದ ತಾತನವರು ಸಾನ್ನಿಧ್ಯ ವಹಿಸಿದ್ದರು.ಫಾಲಾಕ್ಷಯ್ಯ ಶಾಸ್ತ್ರೀಗಳು ಪುರಾಣ ಪ್ರವಚನ ನೀಡಿದರು ಮತ್ತು ಎಸ್.ವಿ. ಪ್ರಭುಲಿಂಗನ ಗೌಡ ಪುರಾಣ ವಾಚಿಸಿದರು. ಬಿ.ಎಚ್. ಶೇಕ್ಷಾವಲಿ ಸಂಗೀತ ಸೇವೆ ಸಲ್ಲಿಸಿದರು. ಹನುಮಂತಗೌಡ ತಬಲಾ ಸಾಥ್ ನೀಡಿದರು.